ಲಖನೌ:ಗಂಡ-ಹೆಂಡತಿಯ ಜಗಳ ಉಂಡು ಮಲಗುವ ತನಕ ಎನ್ನುವ ಪ್ರಸಿದ್ಧ ನಾಣ್ಣುಡಿ ಇದೆ. ಆದರೆ ಇಲ್ಲೊಬ್ಬ ಪತಿರಾಯ ಮಾತ್ರ ಪತ್ನಿಯ ಜತೆ ಜಗಳವಾಡಿಕೊಂಡು ತಾಳೆಯ ಮರ ಏರಿದ್ದಾನೆ. ಮರ ಏರಿ ಕೆಳಕ್ಕೆ ಇಳಿದಿದ್ದರೆ ಅದು ಸುದ್ದಿಯಾಗುತ್ತಲೇ ಇರಲಿಲ್ಲ, ಆದರೆ ಈತ ಅಲ್ಲೇ ಒಂದು ತಿಂಗಳಿನಿಂದ ಕುಳಿತಿದ್ದಾನೆ!
ದಿನವೂ ಜಗಳವಾಡುತ್ತಿದ್ದ ಪತ್ನಿಯಿಂದ ಬೇಸತ್ತ ಉತ್ತರ ಪ್ರದೇಶದ ಮವ್ ಜಿಲ್ಲೆಯ ಕೋಪಗಂಜ್‌ನಲ್ಲಿ ನಿವಾಸಿ ರಾಮ್ ಪ್ರವೇಶ್ ಈ ರೀತಿ ಮಾಡಿದ್ದಾನೆ. 80 ಅಡಿ ಎತ್ತರದ ತಾಳೆ ಮರ ಹತ್ತಿರೋ ಈತ ಅಲ್ಲಿಯೇ ವಾಸವಾಗಿದ್ದಾನೆ!
ಮದುವೆಯಾದಂದಿನಿಂದಲೂ ಪತ್ನಿ ಜಗಳವಾಡುತ್ತಲೇ ಇದ್ದಾರೆ. ಈಚೆಗೆ ಆರು ತಿಂಗಳಿನಿಂದ ಅವಳ ಕಿರುಕುಳ ಹೆಚ್ಚಾಗಿದೆ. ಮನೆ ಬಿಟ್ಟು ಹೋಗುವುದು ಅಸಾಧ್ಯ. ಅದಕ್ಕೇ ಮರ ಏರಿ ಕುಳಿತಿದ್ದೇನೆ ಎನ್ನುತ್ತಾನರೆ ರಾಮ್​ ಪ್ರವೇಶ್​.ಇವನಿಗೆ ಕುಟುಂಬದವರು ಹಗ್ಗದಲ್ಲಿ ಆಹಾರ ಕಟ್ಟಿ, ಮೇಲಕ್ಕೆ ಕಳುಹಿಸುತ್ತಾರೆ. ರಾತ್ರಿಯಾಗುತ್ತಿದ್ದಂತೆಯೇ ಇಳಿದು ಬಂದು ಮಲ ವಿಸರ್ಜನೆ ಮಾಡಿ ಮತ್ತೆ ಸರಸರ ಏರುತ್ತಾನೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಗ್ರಾಮಸ್ಥರೆಲ್ಲಾ ಎಷ್ಟೇ ಕೇಳಿಕೊಂಡರೂ ಈತ ಮಾತ್ರ ಜಪ್ಪಯ್ಯ ಎಂದರೂ ಮರದಿಂದ ಕೆಳಕ್ಕೆ ಬರುತ್ತಿಲ್ಲ. ಅಷ್ಟಕ್ಕೂ ಗ್ರಾಮಸ್ಥರು ಈ ರೀತಿ ಪರಿಪರಿಯಾಗಿ ಕೇಳಿಕೊಳ್ಳಲು ಕೂಡ ಕಾರಣವಿದೆ. ಅದೇನೆಂದರೆ, ಹೇಳಿಕೇಳಿ ಇದು 80 ಅಡಿ ಎತ್ತರದ ಮರ. ಅಕ್ಕಪಕ್ಕದಲ್ಲಿ ತುಂಬಾ ಮನೆಯಗಳಿವೆ. ಈತ ಮೇಲಿನಿಂದ ಇಣುಕು ಹಾಕಿದರೆ ಅವರು ಏನು ಮಾಡುತ್ತಾರೆ ಎಲ್ಲವೂ ಕಾಣಿಸುತ್ತದೆ. ಇದು ನೆರೆಹೊರೆಯವರಿಗೆ ಅದರಲ್ಲಿಯೂ ಮಹಿಳೆಯರಿಗೆ ಬಹಳ ಮುಜುಗರ ತಂದಿದೆ.
ಇದೇ ಕಾರಣಕ್ಕೆ ಆತನ ಮನವೊಲಿಸಲು ಬಹಳ ಪ್ರಯತ್ನ ನಡೆದಿದ್ದರೂ ಆತ ಪತ್ನಿಯ ಕಾಟದಿಂದ ನಾನು ಬರಲಾರೆ ಎನ್ನುತ್ತಿದ್ದಾನೆ. ಸದ್ಯ ಗ್ರಾಮದ ಹಲವು ಮಹಿಳೆಯರು ಸೇರಿ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದಾರೆ. ಗ್ರಾಮದ ಮುಖಂಡ ದೀಪಕ್ ಕುಮಾರ್ ಸ್ಥಳಕ್ಕೆ ಭೇಟಿ ಕೊಟ್ಟು ವಿಡಿಯೋ ಮಾಡಿ ಪೊಲೀಸರಿಗೆ ತಲುಪಿಸಿದ್ದಾರೆ. ಮುಂದೆ ಏನಾಗುತ್ತದೋ ಕಾದು ನೋಡಬೇಕು (ಏಜೆನ್ಸೀಸ್​)
ಶಿವಮೊಗ್ಗದಲ್ಲಿ ಚಾಕು ಇರಿದ ಆರೋಪಿಗಳಿಗೆ ಬಿಗ್​ ಶಾಕ್​! ಯುಎಪಿಎ ಅಡಿ ಕೇಸ್​ ದಾಖಲು- ಏನಿದು ಕಾಯ್ದೆ?
ದೇವರ ಸನ್ನಿಧಿಯಲ್ಲಿಯೇ ಚಿತ್ರಹಿಂಸೆ ಅನುಭವಿಸಿದ ಸುಂದರ್​ ಇನ್ನಿಲ್ಲ: ಈತನ ಕರಾಳ ಬದುಕಿನ ಕಣ್ಣೀರ ಕಥೆಯಿದು…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
