ಲಖನೌ:ಹೆಣ್ಣುಮಕ್ಕಳನ್ನು ಕಂಡಾಕ್ಷಣ ಅವರನ್ನು ಚುಡಾಯಿಸುವುದು ಎಂದರೆ ಕೆಲವು ಪುರುಷರಿಗೆ ಬಹಳ ಪ್ರೀತಿ. ಹೆಣ್ಣುಮಕ್ಕಳ ಬಗ್ಗೆ ಅಶ್ಲೀಲವಾಗಿ ಚುಡಾಯಿಸಿ ಮಜಾ ತೆಗೆದುಕೊಳ್ಳುವವರಿಗೇನೂ ಕಮ್ಮಿ ಇಲ್ಲ. ಆದರೆ ಹೀಗೆ ಮಾಡಿದಾಗಲೆಲ್ಲಾ ಹೆಣ್ಣುಮಕ್ಕಳು ಸುಮ್ಮನೇ ಹೋಗುತ್ತಾರೆ ಎಂದುಕೊಳ್ಳಬೇಡಿ. ಗ್ರಹಚಾರ ಕೆಟ್ಟರೆ ಹೀಗೂ ಆಗಬಹುದು ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರೋ ಈ ವಿಡಿಯೋ ನೋಡಿದರೆ, ಎಂಥ ಪುರುಷರಿಗೂ ಹೆಣ್ಣುಮಕ್ಕಳ ಸಹವಾಡ ಬೇಡವೇ ಬೇಡ ಎಂದು ಎನಿಸಬಹುದು.
ಈ ಘಟನೆ ಉತ್ತರ ಪ್ರದೇಶದ ಜಲೌನ್ ಜಿಲ್ಲೆಯ ಓರೈ ನಗರದಲ್ಲಿ ನಡೆದಿದೆ. ಕುಡಿತ ಮತ್ತಿನಲ್ಲಿ ವ್ಯಕ್ತಿಯೊಬ್ಬ ಮಹಿಳೆಯನ್ನು ಅಸಭ್ಯವಾಗಿ ಚುಡಾಯಿಸಿದ್ದಾನೆ. ಇದರಿಂದ ಕೋಪಗೊಂಡ ಮಹಿಳೆ ತಡ ಮಾಡದೇ ಚಪ್ಪಲಿಯಿಂದ ಆತನನ್ನು ಪಟಪಟ ಎಂದು ಬಾರಿಸಿದ್ದಾಳೆ. ಮಹಿಳೆಯ ಕೋಪಕ್ಕೆ ಬೆದರಿದ ವ್ಯಕ್ತಿ ಏನೂ ಮಾಡಲು ಆಗದೇ ಸುಮ್ಮನೇ ಮುದುಡಿಕೊಂಡು ಕುಳಿತು ಏಟು ತಿನ್ನುತ್ತಿದ್ದಾನೆ!
ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ. ವಿಡಿಯೋದಲ್ಲಿ ಮಹಿಳೆ 20 ಸೆಕೆಂಡ್ ಇರುವ ವೀಡಿಯೋದಲ್ಲಿ ಮಹಿಳೆ 40 ಬಾರಿ ಚಪ್ಪಲಿಯಿಂದ ಆತನಿಗೆ ಬಾರಿಸಿರುವುದನ್ನು ಕಾಣಬಹುದಾಗಿದೆ. ನಂತರ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.(ಏಜೆನ್ಸೀಸ್​)
ವಿಡಿಯೋ ಇಲ್ಲಿದೆ ನೋಡಿ:
20 सेकेंड में 40 चप्पल| हर सेकेंड 2 चप्पल मारउतारा छेड़खानी का भूत।यूपी के उरई जिले के कोंच कस्बे के एक मोहल्ले मेंएक युवक को युवती से छेड़खानी करना भारी पड़ गया। पहले लड़की ने की ज़बरदस्त पिटाई फिर पुलिस ने लिया हिरासत में।pic.twitter.com/x0WoKfy69E— Shubhankar Mishra (@shubhankrmishra)September 18, 2022
20 सेकेंड में 40 चप्पल| हर सेकेंड 2 चप्पल मारउतारा छेड़खानी का भूत।यूपी के उरई जिले के कोंच कस्बे के एक मोहल्ले मेंएक युवक को युवती से छेड़खानी करना भारी पड़ गया। पहले लड़की ने की ज़बरदस्त पिटाई फिर पुलिस ने लिया हिरासत में।pic.twitter.com/x0WoKfy69E
VIDEO: ಹಿಂದೂ ಹೆಸರು ಹೇಳಿ ಮದ್ವೆಯಾದ ವಿವಾಹಿತ ವಕೀಲ: ದುರ್ಗೆಯ ಹಚ್ಚೆ ನೋಡಿ ಮೋಸ ಹೋದಾಕೆಗೆ ನರಕ ದರ್ಶನ!
ವಂಚನೆ ಮಾಡಿ ಎಸ್ಕೇಪ್​ ಆಗಿದ್ದ ಬಿಗ್​ಬಾಸ್​ ಸ್ಪರ್ಧಿ ಸಪ್ನಾ, ಬಂಧನಕ್ಕೆ ಹೆದರಿ ಕೋರ್ಟ್ ಮುಂದೆ ಶರಣು!
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:20 + fourteen =
Remember me
