ನವದೆಹಲಿ: ಯುಪಿಎಸ್‍ಸಿ 2020ರ ಅಂತಿಮ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದ 18 ಮಂದಿ ಉತ್ತೀರ್ಣರಾಗಿದ್ದಾರೆ. ಪರೀಕ್ಷೆಯಲ್ಲಿ ಒಟ್ಟು 836 ಮಂದಿ ಪಾಸ್ ಆಗಿದ್ದಾರೆ.
ಒಟ್ಟು 761 ಮಂದಿ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಟಾಪ್ 25 ಸ್ಥಾನಗಳಲ್ಲಿ 13 ಮಂದಿ ಪುರುಷರು ಮತ್ತು 12 ಮಹಿಳೆಯರು ಇದ್ದಾರೆ. ಸದ್ಯ ಅಗತ್ಯ ಇರುವ ಪೋಸ್ಟ್‌ಗಳ ಸಂಖ್ಯೆ 836. ಐಎಎಸ್ ಹುದ್ದೆಗೆ 180, ಐಪಿಎಸ್ ಹುದ್ದೆಗೆ 200, ಐಎಫ್‍ಎಸ್ ಗೆ 36, ಕೇಂದ್ರೀಯ ಸೇವೆ ಗ್ರೂಪ್ ಎ ಹುದ್ದೆಗೆ 302 ಮತ್ತು ಗ್ರೂಪ್ ಬಿಗೆ 118 ಮಂದಿ ಆಯ್ಕೆಯಾಗಿದ್ದಾರೆ.
ಶುಭಂ ಕುಮಾರ್‌ಗೆ ಮೊದಲ ರ‍್ಯಾಂಕ್ ಲಭಿಸಿದ್ದು, ಇವರು ಐಐಟಿ ಬಾಂಬೆಯಿಂದ ಬಿ.ಟೆಕ್ (ಸಿವಿಲ್ ಎಂಜಿನಿಯರಿಂಗ್) ಪದವೀಧರು. 2ನೇ ರ‍್ಯಾಂಕ್ ಪಡೆದ ಜಾಗೃತಿ ಅವಸ್ಥಿ ಮಹಿಳೆಯರಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಇವರು ಇಲೆಕ್ಟ್ರಿಕ್ ಇಂಜಿನಿಯರ್ ಪದವಿ ಪಡೆದಿದ್ದಾರೆ. ಅಂಕಿತ್ ಜೈನ್ 3ನೇ ರ‍್ಯಾಂಕ್ ಗಳಿಸಿದ್ದಾರೆ.
ಯುಪಿಎಸ್‍ಸಿ ಪರೀಕ್ಷೆಯಲ್ಲಿ ಕರ್ನಾಟಕದ 18 ಮಂದಿ ಉತ್ತೀರ್ಣರಾಗಿದ್ದಾರೆ. ಮಂಡ್ಯದ ಅಕ್ಷಯ್ ಸಿಂಹ 77ನೇ ರ‍್ಯಾಂಕ್ ಪಡೆಯುವ ಮೂಲಕ ಕರ್ನಾಟಕದ ಟಾಪರ್ ಆಗಿದ್ದಾರೆ. ಇವರು ಹುಟ್ಟಿ ಬೆಳೆದಿದ್ದು ಬೆಂಗಳೂರು. ಇಂಡಿಯಾ ಫಾರ್ ಐಎಎಸ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದಾರೆ.
ಕನಕಪುರದ ಯತೀಶ್.ಆರ್ 115ನೇ ರ‍್ಯಾಂಕ್, ಮೈಸೂರಿನ ಪ್ರಿಯಾಂಕ.ಕೆ.ಎಂ. 121ನೇ ರ‍್ಯಾಂಕ್, ಮೈಸೂರಿನ ನಿಶ್ಚಯ್.ಆರ್ 130, ಸಿರಿವೆನ್ನಲ 204, ಬೆಂಗಳೂರಿನ ಅನಿರುದ್ಧ 252, ಸೂರಜ್ 255, ನೇತ್ರ ಮೇಟಿ 326, ಮೇಘ ಜೈನ್ 354, ಪ್ರಜ್ವಲ್ 367, ಸಾಗರ್.ಎ.ವಾಡಿ 385, ನಾಗರಗೋಜೆ ಶುಭಂ 453, ಶಕೀರ್ ಅಹಮದ್ 583, ಪ್ರಮೋದ್ ಆರಾಧ್ಯ 601, ಸೌರಭ್.ಕೆ 725ನೇ ರ‍್ಯಾಂಕ್ ಪಡೆದಿದ್ದಾರೆ.
ಮೇಕೆ ಸಸ್ಯಾಹಾರಿಯೋ, ಮಾಂಸಾಹಾರಿಯೊ? ಇದೆಂಥ ಪ್ರಶ್ನೆ ಅನ್ನೋ ಮುನ್ನ ಈ ವಿಡಿಯೋ ನೋಡಿ…!

ನೇಣು ಹಾಕಿಕೊಂಡ್ರೆ ಫ್ಯಾನ್‌ ಆನ್‌ ಮಾಡಿದರ‍್ಯಾರು? ಸಿಬಿಐ ತನಿಖೆಗೆ ಸ್ವಾಮೀಜಿ ಸಾವಿನ ರಹಸ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
