ಹಾಪುರ್ ​(ಉತ್ತರ ಪ್ರದೇಶ):ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್​ಸಿ) ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಅಭ್ಯರ್ಥಿಗಳ ಪೈಕಿ ಒಬ್ಬೊಬ್ಬರದ್ದು ಒಂದೊಂದು ಕಥೆ. ಎಲ್ಲಾ ಕಷ್ಟಗಳನ್ನು ಹಿಮ್ಮೆಟ್ಟಿ ಸಾಧನೆ ಮಾಡಿದವರೇ ಅತ್ಯಂತ ಉನ್ನತ ಶ್ರೇಣಿ ಪಡೆದುಕೊಂಡಿದ್ದಾರೆ. ಸಾಧಿಸುವ ಛಲವೊಂದಿದ್ದರೆ ಏನು ಬೇಕಾದರೂ ಸಾಧಿಸಿ ತೋರಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ.
ಇವರ ಪೈಕಿ ಒಬ್ಬರು ಉತ್ತರ ಪ್ರದೇಶದ ಹಾಪುರ್​ದ ನಿವಾಸಿ ಶಿವಾಂಗಿ ಗೋಯಲ್​​. ಸಮಾಜಶಾಸ್ತ್ರ ವಿಷಯದಲ್ಲಿ 177ನೇ ಸ್ಥಾನ ಪಡೆದುಕೊಂಡಿರುವ ಶಿವಾಂಗಿ ಏಳು ವರ್ಷದ ಬಾಲಕಿಯ ಅಮ್ಮ. ಇವರ ಈ ಸಾಧನೆಯ ಹಿಂದಿರುವುದು ನೋವಿನ ಕಥೆ. ಶಾಪವಾದ ಮದುವೆ, ಅತ್ತೆ ಮನೆಯಲ್ಲಿನ ದೌರ್ಜನ್ಯ ಎಲ್ಲವನ್ನೂ ಸಹಿಸಿಕೊಂಡು ಶಿವಾಂಗಿ ಇಂದು ಉನ್ನತ ಸ್ಥಾನ ಏರಿದ್ದಾರೆ.
ಈ ಕುರಿತು ಮಾಧ್ಯಮಗಳ ಎದುರು ತಮ್ಮ ಬದುಕಿನ ಬಗ್ಗೆ ಹೇಳಿಕೊಂಡಿದ್ದಾರೆ ಶಿವಾಂಗಿ. ನಾನು ಮದುವೆಯಾದ ದಿನದಿಂದಲೂ ಅತ್ತೆಯ ಮನೆಯಲ್ಲಿ ಕಿರುಕುಳ ಅನುಭವಿಸಿದೆ. ಅತ್ತೆ-ಮಾವ ಮಾತ್ರವಲ್ಲದೇ ಗಂಡನೂ ಕಿರುಕುಳ ನೀಡುತ್ತಿದ್ದರು. ಹೆಣ್ಣು ಮಗು ಜನಿಸಿದ ಮೇಲೆ ಕಿರುಕುಳ ಹೆಚ್ಚಾಯಿತು. ಈ ಹಿಂಸೆ, ದೌರ್ಜನ್ಯ ಸಹಿಸಿಕೊಂಡು ಇರುವುದು ಅಸಾಧ್ಯವಾದಾಗ ಮಗಳ ಜತೆ ಮನೆ ತೊರೆಯುವ ನಿರ್ಧಾರ ಮಾಡಿದೆ ಎನ್ನುತ್ತಾರೆ ಶಿವಾಂಗಿ.
ಗಂಡನ ಮನೆಯನ್ನು ತೊರೆದು ಅಮ್ಮನ ಮನೆ ಸೇರಿದ ಶಿವಾಂಗಿ, ಆಗಲೇ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದುಕೊಂಡಿದ್ದರು. ಮದುವೆಗೂ ಮುನ್ನ ಎರಡು ಬಾರಿ ಯುಪಿಎಸ್​ಸಿ ಪರೀಕ್ಷೆ ಬರೆದಿದ್ದರೂ ಅದರಲ್ಲಿ ಸಫಲರಾಗಿರಲಿಲ್ಲ. ಈಗ ಗಂಡನ ಮನೆ ತೊರೆದ ಮೇಲೆ ಅದನ್ನೇ ಛಲವಾಗಿಸಿಕೊಂಡು ಮತ್ತೆ ಪರೀಕ್ಷೆ ಬರೆದರು. ಕಷ್ಟಕಾಲದಲ್ಲಿ ನೆಲೆಯಾಗಿ ನಿಂತು ಮಗಳಿಗೆ ಸ್ಫೂರ್ತಿ ತುಂಬಿದ ಅಪ್ಪ-ಅಮ್ಮಂದಿರ ಆಸೆಯನ್ನು ಈಡೇರಿಸಿದ್ದಾರೆ ಶಿವಾಂಗಿ.
‘ನನ್ನ ತಂದೆ, ನೀನು ಏನು ಮಾಡಬೇಕೋ ಅಂದುಕೊಂಡಿದ್ದೀಯಾ ಅದನ್ನು ಮಾಡು ಎಂದು ಕಿವಿಮಾತು ಹೇಳಿದರು. ಅತ್ತೆಯ ಮನೆಯಲ್ಲಿ ಅನುಭವಿಸಿರುವ ನೋವನ್ನು ನೆನೆದು ದುಃಖ ಪಡುವ ಬದಲು ಏನಾದರೂ ಸಾಧನೆ ಮಾಡಬೇಕು ಎಂದುಕೊಂಡು ಯುಪಿಎಸ್​ಸಿ ಪರೀಕ್ಷೆ ತಯಾರಿ ಮಾಡುವ ನಿರ್ಧಾರ ತೆಗೆದುಕೊಂಡೆ’ ಎನ್ನುವ ಶಿವಾಂಗಿ ಅದನ್ನು ಸಾಧಿಸಿ ತೋರಿಸಿದ್ದಾರೆ.
‘ಅತ್ತೆಯ ಮನೆಯಲ್ಲಿ ಕಿರುಕುಳ, ತೊಂದರೆ ಅನುಭವಿಸಿದರೆ ಭಯ ಪಡಬೇಡಿ. ನಿಮ್ಮ ಕಾಲಿನ ಮೇಲೆ ನಿಲ್ಲುವ ಛಲವನ್ನು ಹೊಂದಿ. ಆಗಿದ್ದನ್ನೇ ದುಃಖಿಸುತ್ತಾ ಕುಳಿತುಕೊಳ್ಳದೇ ಕಷ್ಟಪಟ್ಟು ಕೆಲಸ ಮಾಡಿದರೆ ಎಂತಹ ಪರೀಕ್ಷೆ ಸಹ ಸುಲಭವಾಗಿ ಎದುರಿಸಬಹುದು’ ಎನ್ನುತ್ತಾರೆ ಶಿವಾಂಗಿ.
ಯುಪಿಎಸ್​ಸಿ ಪರೀಕ್ಷೆಯಲ್ಲಿ ಒಟ್ಟು 685 ಅಭ್ಯರ್ಥಿಗಳು ಪಾಸ್ ಆಗಿದ್ದು, ಇದರಲ್ಲಿ 508 ಪುರುಷ ಅಭ್ಯರ್ಥಿಗಳು, 117 ಮಹಿಳೆಯರು ಇದ್ದಾರೆ. ವಿಶೇಷವೆಂದರೆ ಟಾಪ್​ 25ರಲ್ಲಿ 15 ಪುರುಷರು ಹಾಗೂ 10 ಮಹಿಳೆಯರಿದ್ದು, ಮೊದಲ ನಾಲ್ಕು ಸ್ಥಾನ ಮಹಿಳಾ ಅಭ್ಯರ್ಥಿಗಳ ಪಾಲಾಗಿವೆ. ಕರ್ನಾಟಕದ 27 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
UPSC ಪರೀಕ್ಷೆ: ಡಾ.ರಾಜ್​ಕುಮಾರ್​ ಅಕಾಡೆಮಿಯ 8 ಮಂದಿಗೆ ರ‍್ಯಾಂಕ್​! ಸಾಧಕರಿಗೆ ಸಿಹಿ ತಿನ್ನಿಸಿ ಶುಭಕೋರಿದ ರಾಘಣ್ಣ
ಮಂಡ್ಯದಲ್ಲೊಂದು ಬೆಚ್ಚಿಬೀಳಿಸೋ ಘಟನೆ: ಬಾಗಿಲು ಒಡೆದಾಗ ಕಂಡದ್ದು ಮಗಳ ಕೊಳೆತ ಶವದೊಂದಿಗೆ ಕುಳಿತ ತಾಯಿ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + fifteen =
Remember me
