ಫ್ಲೋರಿಡಾ:ಅಮೆರಿಕದ ಪಾಪ್‌ ಗಾಯಕಿಯೊಬ್ಬಳು ಹಾಡುತ್ತಾ ಅತಿರೇಕಕ್ಕೆ ಹೋಗಿ ವೇದಿಕೆ ಮೇಲೆಯೇ ಪ್ಯಾಂಟ್‌ ಬಿಚ್ಚಿ ಅಭಿಮಾನಿಯೊಬ್ಬನ ಬಾಯಿಗೆ ಮೂತ್ರ ವಿಸರ್ಜನೆ ಮಾಡಿರುವ ಅಸಹ್ಯ ಘಟನೆ ಫ್ಲೋರಿಡಾದಲ್ಲಿ ನಡೆದಿದೆ. ಆದರೆ ಆ ಅಭಿಮಾನಿ ಕೆಳಗೆ ಮಲಗಿಕೊಂಡು ಈಕೆಯ ಮೂತ್ರವನ್ನು ಸಂತೋಷದಿಂದ ಹೀರುತ್ತಾ ಕುಣಿದು ಕುಪ್ಪಳಿಸಿದ್ದಾನೆ.
‘ಬ್ರಾಸ್​ ಅಗೇನೆಸ್ಟ್‘​ ಎಂಬ ರಾಕ್‌ ಸಂಗೀತ ಮ್ಯೂಸಿಕಲ್​ ಗ್ರೂಪ್‌ನ​ ಗಾಯಕಿ ಸೋಫಿಯಾ ಉರಿಸ್ಟಾ. ಇಂಥದ್ದೊಂದು ಹೇಸಿಗೆ ಎನಿಸುವ ಕೃತ್ಯ ಎಸಗಿದ್ದಾಳೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಇದರ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಗಾಯಕಿ ಇದೀಗ ಕ್ಷಮೆ ಕೋರಿದ್ದಾಳೆ.
ಈ ಘಟನೆ ಕಳೆದವಾರ ಫ್ಲೋರಿಡಾದ ಡೇಟೋನಾ ಬೀಚ್​​ನಲ್ಲಿ ನಡೆದ ರಾಕ್​ವಿಲ್ಲೆ ಮೆಟಲ್​ ಉತ್ಸವದಲ್ಲಿ ನಡೆದಿತ್ತು. ಅಲ್ಲಿ ಆಯೋಜಿಸಲಾಗಿದ್ದ ರಾಕ್‌ ಉತ್ಸವದಲ್ಲಿ ಈಕೆಯ ಗಾಯನವೂ ಇತ್ತು. ಹಾಡುತ್ತಾ, ಕುಣಿದು ಕುಪ್ಪಳಿಸಿದ ಈಕೆಯನ್ನು ನೋಡಿ ಹುಚ್ಚೆದ್ದ ಅಭಿಮಾನಿಯೊಬ್ಬ ವೇದಿಕೆ ಮೇಲೆ ಹೋಗಿ ಮಲಗಿದ್ದಾನೆ. ಕೂಡಲೇ ಈಕೆ ತನ್ನ ಪ್ಯಾಂಟ್‌ ಬಿಚ್ಚಿ ಆತನ ಬಾಯಿಗೆ ಮೂತ್ರ ವಿಸರ್ಜನೆ ಮಾಡಿದ್ದಾಳೆ. ಹಾಡುತ್ತಲೇ ಇಷ್ಟು ಕೆಲಸ ಮುಗಿಸಿದ್ದಾಳೆ. ಆ ಅಭಿಮಾನಿ ಮೂತ್ರ ಕುಡಿದು ಒಂದೆಡೆ ಕುಣಿದರೆ, ಇನ್ನೊಂದೆಡೆ, ಉಳಿದ ಪ್ರೇಕ್ಷಕರೂ ಚಪ್ಪಾಳೆ ತಟ್ಟಿದ್ದಾರೆ.
ನಂತರ ಭಾರಿ ಆಕ್ರೋಶ ವ್ಯಕ್ತವಾಗುತ್ತಲೇ, ಉರಿಸ್ಟಾ ಟ್ವೀಟ್‌ ಮಾಡಿ ಕ್ಷಮೆ ಕೋರಿದ್ದಾಳೆ. ಇಲ್ಲಿಯವರೆಗೆ ನನ್ನೆಲ್ಲ ಕಾರ್ಯಕ್ರಮಗಳಲ್ಲಿ ನಾನು ಮಿತಿಯಲ್ಲಿಯೇ ಇದ್ದೆ. ನನ್ನ ಅಭಿಮಾನಿಗಳನ್ನು ನಾನು ತುಂಬಾ ಪ್ರೀತಿಸುತ್ತಿದ್ದೇನೆ. ಆದರೆ ಈ ಕಾರ್ಯಕ್ರಮದಲ್ಲಿ ಅದೇನಾಯಿತೋ ಗೊತ್ತಿಲ್ಲ. ನಾನು ಅತಿರೇಕಕ್ಕೆ ಹೋಗಿ ಹೀಗೆ ಮಾಡಿದೆ, ಆದ್ದರಿಂದ ಕ್ಷಮೆ ಕೋರುತ್ತೇನೆ ಎಂದಿದ್ದಾಳೆ. ಇದರ ಬೆನ್ನಲ್ಲೇ ತಂಡ ಕೂಡ ಕ್ಷಮೆ ಕೋರಿದೆ.
❤️pic.twitter.com/h9I1FEXEf1— sophia urista (@sophiaurista)November 16, 2021
❤️pic.twitter.com/h9I1FEXEf1

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
