ವಾಷಿಂಗ್ಟನ್:ಅಪಹರಣ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕ ಮಹಿಳೆಯೊಬ್ಬರನ್ನು ಗಲ್ಲು ಶಿಕ್ಷೆ ವಿಧಿಸಿದೆ. ಈ ಶಿಕ್ಷೆ ಇಷ್ಟು ಸುದ್ದಿಯಾಗಲು ಕಾರಣ, ಸುಮಾರು 70 ವರ್ಷಗಳ ಬಳಿಕ ಮಹಿಳೆಯೊಬ್ಬರು ಮರಣದಂಡನೆಗೆ ಒಳಗಾಗುತ್ತಿದ್ದಾಳೆ.
ಲೀಸಾ ಮಾಂಟಾಗೋಮೇರಿ ಎಂಬ 52 ವರ್ಷದ ಪಾತಕಿಗೆ ಈ ಶಿಕ್ಷೆ ವಿಧಿಸಲಾಗಿದೆ. ಈ ಮೂಲಕ, 1953ರ ನಂತರ ಅಮೆರಿಕದಲ್ಲಿ ಮೊದಲ ಬಾರಿಗೆ ಮಹಿಳೆಗೆ ಗಲ್ಲುಶಿಕ್ಷೆ ನೀಡಲಾಗಿದೆ.
2007ರಲ್ಲಿ ಎಂಟು ತಿಂಗಳ ಗರ್ಭಿಣಿಯೊಬ್ಬರನ್ನು ಅಪಹರಿಸಿ ಅವರ ಗರ್ಭವನ್ನು ಸೀಳಿ ಹತ್ಯೆಗೈಯುವಂಥ ಮಹಾ ನೀಚ ಕೃತ್ಯವನ್ನು ಮಾಡಿದ್ದಳು ಲೀಸಾ.ಈಕೆಯ ಈ ಕೃತ್ಯಕ್ಕೆ ಬಲಿಯಾದ ಗರ್ಭಿಣಿ. ಬಾಬಿ ಜೋ ಸ್ಟಿನ್ನೆಟ್​. ಅದರೆ ಅಚ್ಚರಿ ಎಂದರೆ ಬಾಬಿ ಈಕೆಯ ಕೃತ್ಯದಿಂದಾಗಿ ಭೀಕರವಾಗಿ ಮೃತಪಟ್ಟಿದ್ದರೂ ಆಕೆಯ ಮಗು ಬದುಕುಳಿದಿತ್ತು.
2007ರಲ್ಲಿ ಈ ಪ್ರಕರಣದ ವಿಚಾರಣೆ ನಡೆಸಿದ್ದ ಫೆಡರಲ್ ಜ್ಯೂರಿ ಅವಿರೋಧವಾಗಿ ಲೀಸಾಗೆ ಗಲ್ಲುಶಿಕ್ಷೆ ವಿಧಿಸಲು ಶಿಫಾರಸು ಮಾಡಿತ್ತು. ಇದನ್ನು ಮಿಸೌರಿ ಜಿಲ್ಲಾ ಕೋರ್ಟ್​ನಲ್ಲಿ ಲೀಸಾ ಪ್ರಶ್ನಿಸಿದ್ದಳು. ಶಿಕ್ಷೆಯನ್ನು ಇದೀಗ ಕಾಯಂ ಮಾಡಿರುವುದಾಗಿ ನ್ಯಾಯಾಂಗ ಇಲಾಖೆ ತಿಳಿಸಿದೆ.
ಗಲ್ಲು ಶಿಕ್ಷೆಯ ಕುರಿತಂತೆ ಸಾಕಷ್ಟು ಪರ-ವಿರೋಧ ಚರ್ಚೆಗಳು ನಡೆದ ನಂತರ ಈ ಶಿಕ್ಷೆಯನ್ನು ಕಾಯಂ ಮಾಡಲಾಗಿದೆ ಎಂದು ನ್ಯಾಯಾಂಗ ಇಲಾಖೆ ಹೇಳಿದೆ.ಮೊದಲು ಈಕೆಗೆ ಇಂಡಿಯಾನಾದ ಟೆರ್ರೆ ಹೌಟೆಯಲ್ಲಿರುವ ನ್ಯಾಯಾಂಗ ಇಲಾಖೆಯಲ್ಲಿನ ಕಾರಾಗೃಹದಲ್ಲಿ ಲೇಥಾಲ್ ಇಂಜೆಕ್ಷನ್ ನೀಡಿ ಸಾಯಿಸಲು ನಿರ್ಧರಿಸಲಾಗಿತ್ತು. ಆದರೆ ಫೆಡರಲ್ ಜ್ಯೂರಿ ಮರಣದಂಡನೆ ಸೂಕ್ತ ಎಂದು ಶಿಫಾರಸು ಮಾಡಿದೆ.
ಫೇಸ್​ಬುಕ್​ ಗೆಳತಿಗಾಗಿ 2ಸಾವಿರ ಕಿ.ಮೀ ಹೋದ ಬೆಂಗಳೂರು ಯುವಕ ರಾತ್ರಿ ಕಳೆದದ್ದು ಎಲ್ಲಿ ಗೊತ್ತಾ?

ಸಚಿವ ರೇಪ್​ ಮಾಡಿದ್ದಾನೆ ಎಂದ ಗಾಯಕಿ: ಇದು ಅತ್ಯಾಚಾರವಲ್ಲ, ನಮಗೆ ಇಬ್ರು ಮಕ್ಕಳಿದ್ದಾರೆ ಎಂದ ನ್ಯಾಯಮಂತ್ರಿ!

ಜಿಮ್​ನಲ್ಲಿ ಗಂಟೆಗಟ್ಟಲೆ ಕಳೆದರೂ ಸಣ್ಣ ಆಗುತ್ತಿಲ್ಲವಾ.. ? ನೀವು ಮಾಡುತ್ತಿರೋ ತಪ್ಪೇನು ಗೊತ್ತಾ…

ಹಕ್ಕಿಜ್ವರದ ಭೀತಿಯಲ್ಲಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ: ಶುರುವಾಗಿದೆ ಟೆನ್ಷನ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 10 =
Remember me
