ವಾಷಿಂಗ್ಟನ್:ಅಮೆರಿಕದ ಅಧ್ಯಕ್ಷ ಜೋ ಬೈಡೆನ್​ ಅವರು ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ ಎಂದು ಇತ್ತೀಚೆಗೆ ಬಹಳ ಸುದ್ದಿಯಾಗುತ್ತಲೇ ಇದೆ. ವೇದಿಕೆಗಳ ಮೇಲೆ ಇದಾಗಲೇ ಹಲವು ಬಾರಿ ಎಡವಟ್ಟು ಮಾಡಿಕೊಂಡಿದ್ದಾರೆ. ಅಸಂಬಂಧ ಮಾತನಾಡಿರುವುದು ಕೂಡ ಕೆಲವು ಸಲ ವರದಿಯಾಗಿದ್ದು, ಬೈಡೆನ್​ ಅವರಿಗೆ ಅರುಳು ಮರುಳು ಉಂಟಾಗಿದೆ ಎಂದೇ ರಾಜಕೀಯ ವಲಯದಲ್ಲಿ ಗುಸುಗುಸು ಸುದ್ದಿಯಾಗಿದೆ.
ಇದರ ನಡುವೆ, ಈ ಮಾತು ನಿಜ ಎನ್ನುವಂತೆ ಕಾರ್ಯಕ್ರಮವೊಂದರಲ್ಲಿ ನಡೆದುಕೊಂಡಿದ್ದಾರೆ. ಅಮೆರಿಕದ ಶ್ವೇತ ಭವನದಲ್ಲಿ ನಡೆದ ಆರೋಗ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದ ಬೈಡೆನ್​ ಅವರ ಒಂದು ಮಾತಿನಿಂದ ಹಲವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ರಿಪಬ್ಲಿಕನ್ ಪಕ್ಷದ ಸದಸ್ಯೆ ಹಾಗೂ ಸಂಸತ್ ಸದಸ್ಯೆಯಾಗಿದ್ದ ಜಾಕಿ ವಲೋರ್ಸ್ಕಿ ಅವರು ಕಾರ್ಯಕ್ರಮಕ್ಕೆ ಏಕೆ ಹಾಜರು ಆಗಲಿಲ್ಲ ಎಂದು ಅವರು ಮಾಡಿರುವ ಪ್ರಶ್ನೆ ಇದೀಗ ಅವರ ಮಾನಸಿಕ ಸ್ವಾಸ್ಥ್ಯದ ಬಗ್ಗೆ ಹಲವು ಅನುಮಾನಗಳನ್ನು ಹುಟ್ಟುಹಾಕಿವೆ.
ಅಷ್ಟಕ್ಕೂ ಆಗಿರುವುದು ಏನೆಂದರೆ, ಬೈಡೆನ್​ ಅವರು ಉಲ್ಲೇಖಿಸಿದ ಜಾಕಿ ವಲೋರ್ಸ್ಕಿ ಅವರು ಕಳೆದ ತಿಂಗಳಷ್ಟೇ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದಾರೆ! ಅವರು ಮೃತಪಟ್ಟ ದಿನ ಬೈಡೆನ್​ ಖುದ್ದು ಹಾಜರಿದ್ದು ಶೋಕ ಆಚರಿಸಿದ್ದರು. ‘ವೋರ್ಲೊಸ್ಕಿ ಸಾವು ನನ್ನನ್ನು ಮತ್ತು ನನ್ನ ಪತ್ನಿ ಜಿಲ್ ಬೈಡೆನ್​ಗೆ ತೀವ್ರ ಆಘಾತವನ್ನುಂಟು ಮಾಡಿದೆ ಮತ್ತು ದುಃಖದಲ್ಲಿ ಮುಳುಗಿಸಿದೆ’ ಎಂದು ಟ್ವೀಟ್​ ಕೂಡ ಮಾಡಿದ್ದರು. ಆದರೆ ಈ ಕಾರ್ಯಕ್ರಮದಲ್ಲಿ ಬೈಡೆನ್​, ಅವರ್ಯಾಕೆ ಕಾರ್ಯಕ್ರಮಕ್ಕೆ ಬರಲಿಲ್ಲ ಎಂದು ಪ್ರಶ್ನಿಸಿದರು.
‘ಜಾಕೀ ಇಲ್ಲಿದ್ದೀರಾ ನೀವು? ಜಾಕಿ ಎಲ್ಲಿದ್ದಾರೆ, ಕಾಣಿಸ್ತಾನೇ ಇಲ್ಲ’ ಎಂದ ಬೈಡೆನ್​, “ಬಹುಶಃ ಈ ಕಾರ್ಯಕ್ರಮದಲ್ಲಿ ಹಿಂದೆಲ್ಲೋ ಕುಳಿತುಕೊಂಡಿರಬೇಕಲ್ಲವಾ? ನೀವು ಬರದೇ ಇರಲು ಸಾಧ್ಯವಿಲ್ಲ ಎಂದುಕೊಂಡಿದ್ದೇನೆ” ಎಂದು ಹೇಳಿದರು. ನಂತರ ಅಲ್ಲಿದ್ದವರು ಬೈಡೆನ್​ ಅವರಿಗೆ ವಿಷಯ ತಿಳಿಸಿದಾಗ ಒಹ್​ ಸಾರಿ ಎಂದರು.
ಯುಎಸ್ ಸೆನೆಟ್​ಗೆ 2012ರಲ್ಲಿ ಪ್ರಥಮ ಬಾರಿಗೆ ಆಯ್ಕೆಯಾಗಿದ್ದ ವಲೋರ್ಸ್ಕಿ ಅವರು ಹೌಸ್ ಹಂಗರ್ ಕಾಕಸ್ ಸಮಿತಿ ಸಹ-ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು. ಇದೇ ಕಾರ್ಯಕ್ರಮದಲ್ಲಿ ಅವರಿಗೆ ಶ್ರದ್ಧಾಂಜಲಿ ಕೂಡ ಸಲ್ಲಿಸಲಾಯಿತು. ಆದರೆ ಅದರ ಮುಂಚೆಯೇ ಅಧ್ಯಕ್ಷರು ಈ ಒಂದು ಎಡವಟ್ಟು ಮಾಡಿಕೊಂಡರು.(ಏಜೆನ್ಸೀಸ್​)
VIDEO: ಮಾತಿನ ಭರದಲ್ಲಿ ಪ್ರಧಾನಿ ಮೋದಿಗೇ ಸವಾಲ್​ ಹಾಕಿದ ಬಿಜೆಪಿ ನಾಯಕಿ! ರಾಜಕೀಯ ಸಂಚಲನ
ಸೂಪರ್​ಫಾಸ್ಟ್​ ‘ವಂದೇ ಭಾರತ್’​ ರೈಲಿಗೆ ಪ್ರಧಾನಿ ಮೋದಿ ಚಾಲನೆ: ಏನಿದರ ವಿಶೇಷತೆ?
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:eighteen + 11 =
Remember me
