ವಾಷಿಂಗ್ಟನ್:ಅಮೆರಿಕದ ಟೆಕ್ಸಾಸ್‍ನಲ್ಲಿರುವ ರಾಬ್ ಎಲಿಮೆಂಟರಿ ಶಾಲೆಯಲ್ಲಿ ಇದೇ 25ರಂದು ಬಂದೂಕುಧಾರಿಯಿಂದ ನಡೆದ ಶೂಟೌಟ್ ಪ್ರಕರಣದಲ್ಲಿ 19 ವಿದ್ಯಾರ್ಥಿಗಳು ಹಾಗೂ 2 ಶಿಕ್ಷಕರು ಬಲಿಯಾಗಿದ್ದರು. ಸಾಲ್ವಡೆರ್ ರೊಮೊಸ್ (18) ಎಂಬಾತ ನಡೆಸಿದ್ದ ಈ ದಾಳಿ ಪ್ರಕರಣ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದೆ.
ಈ ಭಯಾನಕ ಕೃತ್ಯ ನಡೆಯುತ್ತಿರುವಾಗ ಅಲ್ಲಿಯೇ ಇದ್ದ ನಾಲ್ಕನೆಯ ತರಗತಿಯ ಬಾಲಕಿಯೊಬ್ಬಳು ಅಕ್ಷರಶಃ ನಿಲುಗಿ ಹೋಗಿದ್ದು, ತನ್ನ ಜೀವ ಉಳಿಸಿಕೊಂಡಿದ್ದಾಳೆ. ತಾನು ಹೇಗೆ ಜೀವ ಉಳಿಸಿಕೊಂಡೆ ಎಂಬ ಬಗ್ಗೆ ಅವಳು ವಿವರಿಸಿದ್ದಾಳೆ. ಮಿಯಾ ಸೆರಿಲ್ಲಾ ಎಂಬ 11 ವರ್ಷದ ಬಾಲಕಿ ಅಂದು ನಡೆದಿರುವ ಭೀಕರ ಘಟನೆಯನ್ನು ವಿವರಿಸಿದ್ದು ಹೀಗೆ:
ಆತ ಬಂದೂಕು ತೆಗೆದುಕೊಂಡು ನನ್ನ ಕ್ಲಾಸಿನೊಳಕ್ಕೆ ಬಂದ. ಅಲ್ಲಿಯೇ ಇದ್ದ ಟೀಚರ್​ ಅನ್ನು ಕೊಂದು ಹಾಕಿದ. ನಾವು ಇರುವಲ್ಲಿ ಮುಖ ಮಾಡಿ ಒಂದೇ ಸಮನೆ ಗುಂಡು ಹಾರಿಸಿದ. ನನ್ನ ಸ್ನೇಹಿತರ ಪೈಕಿ ಅನೇಕ ಮಂದಿ ಸತ್ತೇ ಹೋದರು. ನನಗೆ ಏನು ಮಾಡುವುದು ಎಂದು ತಿಳಿಯಲಿಲ್ಲ. ನಾನು ಬದುಕಿರುವುದು ತಿಳಿದಿದ್ದರೆ ಆತ ನನ್ನನ್ನು ಕೊಲೆ ಮಾಡುತ್ತಾನೆ ಎಂದು ತಿಳಿಯಿತು.
ಅದಕ್ಕೆ ಕೂಡಲೇ ನಾನು ಸತ್ತುಬಿದ್ದಂತೆ ನಟಿಸಿದೆ. ಅವನಿಗೆ ಅನುಮಾನ ಬರಬಾರದು ಎಂದು ಪಕ್ಕದಲ್ಲಿಯೇ ಸತ್ತುಹೋದ ನನ್ನ ಸ್ನೇಹಿತರ ದೇಹದಿಂದ ಬರುತ್ತಿದ್ದ ರಕ್ತವನ್ನೆಲ್ಲಾ ನಿಧಾನವಾಗಿ ಕೈಯಲ್ಲಿ ತೆಗೆದುಕೊಂಡು ನನ್ನ ಮೈಗೆಲ್ಲಾ ಮೆತ್ತಿಕೊಂಡೆ. ಆ ಬಂದೂಕುಧಾರಿ ಹತ್ತಿರ ಬಂದು ಎಲ್ಲರೂ ಸತ್ತುಹೋಗಿದ್ದಾರೆ ಎಂದು ತಿಳಿದುಕೊಂಡು ಕ್ಲಾಸಿನಿಂದ ಹೊರಕ್ಕೆ ಹೋದ. ಅವನು ಹೋದ ಎಂದು ಕನ್​ಫರ್ಮ್​ ಮಾಡಿಕೊಂಡು ಟೀಚರ್​ ಫೋನ್​ ತೆಗೆದುಕೊಂಡು 911ಕ್ಕೆ ಕರೆ ಮಾಡಿ ಪೊಲೀಸರಿಗೆ ವಿಷಯ ತಿಳಿಸಿದೆ ಎಂದಿದ್ದಾಳೆ ಮಿಯಾ.
ಘಟನೆ ನಡೆದ ದಿನದಿಂದ ನಿದ್ದೆಯಲ್ಲಿಯೂ ಮಗಳು ಬೆಚ್ಚಿಬೀಳುತ್ತಿದ್ದಾಳೆ ಎಂದು ವಿವರಿಸುತ್ತಾರೆ ಮಿಯಾಳ ತಂದೆ. ಅಪ್ಪಾ ಬೇಗ ಗನ್​ ತಗೊ. ಅವನು ಮತ್ತೆ ಬರುತ್ತಾನೆ, ನಾನು ಸಾಯುತ್ತೇನೆ ಎಂದೆಲ್ಲಾ ಕನಸಿನಲ್ಲಿ ಮಗಳು ಕನವರಿಸುತ್ತಾಳೆ ಎನ್ನುತ್ತಾರೆ ಆಕೆಯ ತಂದೆ.
ಯುವಕರನ್ನು ಹಾದಿ ತಪ್ಪಿಸ್ತಿರೋ ಬಾಲಿವುಡ್‌ ನಟರ ವಿರುದ್ಧ ಕೇಸ್‌ ದಾಖಲು: ಬುದ್ಧಿ ಹೇಳಬೇಕಾದವರೇ ಕೆಟ್ಟದ್ದನ್ನು ಕಲಿಸಿದರೆ ಹೇಗೆ?

ಪ್ರಿಯಕರನ ಲೈಂಗಿಕ ಆಸೆ ಈಡೇರಿಸಲು ಮಗಳನ್ನೇ ಆತನ ಬಳಿ ಬಿಟ್ಟ ಪಾಪಿ ತಾಯಿ!

7 ಶತಕೋಟಿ ಒಡತಿ ನಟಿ ಐಶ್ವರ್ಯ ರೈ ಪಡೆದ ಮೊದಲ ಸಂಬಳ ಇಷ್ಟೇನಾ… ಮಾಡೆಲಿಂಗ್​ ಅಗ್ರಿಮೆಂಟ್​ ವೈರಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
