ವಾಷಿಂಗ್ಟನ್‌:ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಇನ್ನೂ ಅಂತಿಮಗೊಳ್ಳದಿದ್ದರೂ, ಈವರೆಗಿನ ಬೆಳವಣಿಗೆಗಳನ್ನು ನೋಡಿದರೆ, ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಗೆಲುವಿನತ್ತ ಸಾಗಿದ್ದಾರೆ. ಆದರೆ ಇದು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಬೆಂಬಲಿಗರನ್ನು ಕೆರಳುವಂತೆ ಮಾಡಿದ್ದು, ಇದಾಗಲೇ ಅವರು ಅಮೆರಿಕದ ಹಾದಿ ಬೀದಿಗಳಲ್ಲಿ ರಂಪಾಟ ಮಾಡಿದ್ದಾರೆ.
ಇಲ್ಲಿಯವರೆಗಿನ ಬೆಳವಣಿಗೆ ಕುರಿತಂತೆ ನೇವಾಡದಲ್ಲಿ ಸುದ್ದಿಗೋಷ್ಠಿ ನಡೆಯುತ್ತಿತ್ತು. ಮತಎಣಿಕೆ ಕಾರ್ಯವನ್ನು ಮುಗಿಸಿದ ಚುನಾವಣಾ ಅಧಿಕಾರಿಗಳು ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲೇ ಮಧ್ಯಪ್ರವೇಶಿಸಿದ ವ್ಯಕ್ತಿಯೊಬ್ಬ ಜೋ ಬಿಡೆನ್ ವಿರುದ್ಧ ಕೂಗಾಟ ಶುರು ಮಾಡಿದ್ದಾರೆ.
WATCH: Man interrupts Nevada official's press conference, makes unfounded claims of electoral fraudpic.twitter.com/J8Jd93ckAq
— BNO News (@BNONews)November 4, 2020

ಡೆಮಾಕ್ರಟಿಕ್ ಪಕ್ಷವು ಮತಗಳನ್ನು ಕದಿಯುವ ಪ್ರಯತ್ನ ಮಾಡುತ್ತಿದೆ ಎಂದು ಈತ ಆರೋಪಿಸಿದ್ದಾನೆ . BBQ, Beer, Freedom” ಎಂದು ಬರೆದುಕೊಂಡಿದ್ದ ಬಿಳಿ ಟೀ-ಶರ್ಟ್ ಧರಿಸಿದ ವ್ಯಕ್ತಿಯೊಬ್ಬ ಮಧ್ಯೆ ಪ್ರವೇಶಿಸಿ ಮಾಧ್ಯಮಗಳೂ ಸೇರಿದಂತೆ ಹಲವರ ವಿರುದ್ಧ ಕೆರಳಿ ಕೆಂಡಾಮಂಡಲವಾಗಿ ಕೂಗಾಟ ನಡೆಸಿದರು.
ಇದನ್ನೂ ಓದಿ:ರೋಚಕ ಘಟ್ಟದಲ್ಲಿ ಅಮೆರಿಕ ಚುನಾವಣೆ: ರಸ್ತೆರಸ್ತೆಗಳಲ್ಲಿ ಭುಗಿಲೆದ್ದ ಹಿಂಸಾಚಾರ
ಪ್ರಪಂಚದಿಂದ ನಮಗೆ ಸ್ವಾತಂತ್ರ್ಯ ನೀಡಿ, ನಾವು ಪ್ರಪಂಚದಿಂದ ಸ್ವಾತಂತ್ರ್ಯವನ್ನು ಪಡೆದುಕೊಳ್ಳುವುದಕ್ಕೆ ಬಯಸುತ್ತಿದ್ದೇವೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಮತಗಳನ್ನು ಕದಿಯುತ್ತಿದ್ದಾರೆ ಎಂದು ಈತ ಕೂಗಿರುವುದು ವಿಡಿಯೋದಲ್ಲಿ ಕೇಳಿಸಿದೆ.
ನೇವಾಡ ಕಣದಲ್ಲಿ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಮುನ್ನಡೆ ಕಾಯ್ದುಕೊಂಡಿರುವುದು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಆರು ಎಲೆಕ್ಟೋರಲ್ ಮತಗಳನ್ನು ಹೊಂದಿರುವ ಕ್ಷೇತ್ರದಲ್ಲಿ ಬಿಡೆನ್ 49.3ರಷ್ಟು ಮತ ಪಡೆದುಕೊಂಡಿದ್ದರೆ, ಡೊನೊಲ್ಡ್ ಟ್ರಂಪ್ 48.7ರಷ್ಟು ಮತ ಗಳಿಸಿದ್ದಾರೆ.
ಆಂಬ್ಯುಲೆನ್ಸ್‌ಗೆ ದಾರಿ ಮಾಡಲು ಕಾನ್ಸ್‌ಟೆಬಲ್‌ ಪಟ್ಟ ಸಾಹಸಕ್ಕೆ ಅಭಿನಂದನೆಗಳ ಮಹಾಪೂರ

ಅತ್ತೆಗೆ ಅಕ್ರಮವಾಗಿ ಹುಟ್ಟಿದ್ದಾನೆ ನನ್ನ ಗಂಡ- ಪೊಲೀಸ್‌ಠಾಣೆ ಮೆಟ್ಟಿಲೇರಿದ ಪತ್ನಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 − five =
Remember me
