ಮುಂಬೈ:ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವ ಈ ವೇಳೆ, ಇಂಗ್ಲಿಷರ ಹಲೋ ಯಾಕೆ? ಅದರ ಬದಲು ಇನ್ಮುಂದೆ ಹಲೋ ಬದಲು ವಂದೇ ಮಾತರಂ ಹೇಳಿ..
ಹೀಗೆಂದು ಮಹಾರಾಷ್ಟ್ರ ಸರ್ಕಾರ ಸೂಚನೆ ನೀಡಿದೆ. ನಿನ್ನೆಯಷ್ಟೇ ಮಹಾರಾಷ್ಟ್ರ ಸರ್ಕಾರದ ನೂತನ ಸಚಿವ ಸಂಪುಟ ರಚನೆಯಾಗಿದ್ದು, ಸಾಂಸ್ಕೃತಿಕ ವ್ಯವಹಾರಗಳ ಸಚಿವರಾಗಿ ನೇಮಕಗೊಂಡ ಸುಧೀರ್ ಮುಂಗಂತಿವಾರ್ ಇಂಥದ್ದೊಂದು ಸೂಚನೆ ನೀಡಿದ್ದಾರೆ.
ಮಹಾರಾಷ್ಟ್ರ ರಾಜ್ಯದ ಎಲ್ಲಾ ಸರ್ಕಾರಿ ಅಧಿಕಾರಿಗಳು ಕಚೇರಿಗಳಲ್ಲಿ ಫೋನ್ ಕರೆಗಳನ್ನು ತೆಗೆದುಕೊಳ್ಳುವಾಗ ‘ಹಲೋ’ ಬದಲಿಗೆ ‘ವಂದೇ ಮಾತರಂ’ ಎಂದು ಹೇಳಿ ಎಂದಿದ್ದಾರೆ. ಈ ಬಗ್ಗೆ ಆಗಸ್ಟ್ 18 ರೊಳಗೆ ಅಧಿಕೃತ ಸರ್ಕಾರಿ ಆದೇಶ ಬರಲಿದೆ ಎಂದು ಅವರು ಹೇಳಿದರು.
ಅಂದ ಹಾಗೆ ನಿನ್ನೆ (ಭಾನುವಾರ) ಮಹಾರಾಷ್ಟ್ರದ ಸಚಿವ ಸಂಪುಟವನ್ನು ವಿಸ್ತರಣೆಯಾಗಿದೆ. ಮುಖ್ಯಮಂತ್ರಿಯಾದ 41 ದಿನಗಳ ನಂತರ ಮಂಗಳವಾರ ತಮ್ಮ ಇಬ್ಬರು ಸದಸ್ಯರ ಸಂಪುಟಕ್ಕೆ 18 ಮಂತ್ರಿಗಳನ್ನು ಸೇರಿಸಿಕೊಂಡಿದ್ದ ಶಿಂಧೆ, ಭಾನುವಾರ ಖಾತೆಗಳನ್ನು ಹಂಚಿಕೆ ಮಾಡಿದರು. ಉಪಮುಖ್ಯಮಂತ್ರಿಯಾದ ಮಾಜಿ ಸಿಎಂ ಬಿಜೆಪಿಯ ದೇವೇಂದ್ರ ಫಡ್ನವಿಸ್​ ಮಹತ್ವದ ಗೃಹ ಖಾತೆ ಪಡೆದಿರುವುದಲ್ಲದೆ ಪಕ್ಷದ ಇತರರಿಗೂ ಪ್ರಮುಖ ಖಾತೆಗಳನ್ನು ಕೊಡಿಸುವಲ್ಲಿ ಯಶಸ್ವಿಯಾಗಿದ್ದು ಮೇಲುಗೈ ಪಡೆದಿದ್ದಾರೆ. ಶಿಂಧೆ ನಗರಾಭಿವೃದ್ಧಿ ಅಲ್ಲದೆ ಇತರ 11 ಖಾತೆಗಳನ್ನೂ ತಮ್ಮ ಬಳಿ ಇರಿಸಿಕೊಂಡಿದ್ದಾರೆ. ಡ್ನವಿಸ್​ ಅವರಿಗೆ ಇನ್ನೊಂದು ಮಹತ್ವದ ಖಾತೆಯಾದ ಹಣಕಾಸು ಹಾಗೂ ಯೋಜನಾ ಖಾತೆ ಮಾತ್ರವಲ್ಲದೆ ಕಾನೂನು ಮತ್ತು ನ್ಯಾಯಾಂಗ, ಜಲ ಸಂಪನ್ಮೂಲ, ವಸತಿ, ಇಂಧನ ಮತ್ತು ಶಿಷ್ಟಾಚಾರ ಖಾತೆಗಳನ್ನು ಕೂಡ ಹೆಚ್ಚುವರಿಯಾಗಿ ಕೊಡಲಾಗಿದೆ.
ಬಿಜೆಪಿ ನಾಯಕ ರಾಧಾಕೃಷ್ಣ ವಿಖೆ ಪಾಟೀಲ್​ರಿಗೆ ಇನ್ನೊಂದು ಪ್ರಮುಖವಾದ ಕಂದಾಯ ಖಾತೆಯ ಹೊಣೆಯನ್ನು ವಹಿಸಲಾಗಿದೆ. ಕೇಂದ್ರ ಸಚಿವ ಅಮಿತ್​ ಷಾರ ಆಪ್ತರಾದ ಚಂದ್ರಕಾಂತ ಪಾಟೀಲ್​ ಉನ್ನತ ಮತ್ತು ತಂತ್ರಜ್ಞಾನ ಶಿಕ್ಷಣ, ಜವಳಿ ಮತ್ತು ಸಂಸದೀಯ ವ್ಯವಹಾರಗಳ ಖಾತೆ ಪಡೆದಿದ್ದಾರೆ. ಸುಧೀರ್​ ಮುಂಗಂತಿವಾರ್​ಗೆ ಅರಣ್ಯ, ಮೀನುಗಾರಿಕೆ ಅಭಿವೃದ್ಧಿ ಮತ್ತು ಸಾಂಸತಿಕ ವ್ಯವಹಾರಗಳ ಖಾತೆಗಳನ್ನು ವಹಿಸಲಾಗಿದೆ.ಶೀವ ಸೇನೆಯ ಬಂಡಾಯ ಬಣ ಹಾಗೂ ಬಿಜೆಪಿಯ ತಲಾ ಒಂಬತ್ತು ಸದಸ್ಯರನ್ನು ಹೊಸದಾಗಿ ಸಂಪುಟಕ್ಕೆ ಸೇರ್ಪಡೆ ಮಾಡಲಾಗಿತ್ತು. ಆದರೆ ಸಂಪುಟದಲ್ಲಿ ಯಾರೊಬ್ಬರೂ ಮಹಿಳಾ ಸದಸ್ಯರಿಲ್ಲ.(ಏಜೆನ್ಸೀಸ್​)
PHOTOS: ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ನಟಿ ತಾರಾ ವಿಶೇಷ ಫೋಟೋ ಶೂಟ್‌

ಅಟಲ್​ ಪಿಂಚಣಿ ಯೋಜನೆಯಲ್ಲಿ ಭಾರಿ ಬದಲಾವಣೆ: ಅ.1ರಿಂದ ಯಾರಿಗಿಲ್ಲ ಅವಕಾಶ…

ಹಿಂದೂ ಯುವತಿಯರ ಅಪಹರಣ, ಮತಾಂತರ: ಭಯಾನಕ ಸತ್ಯ ಬಾಯ್ಬಿಟ್ಟ ಪಾಕ್​ನ ಮಾಜಿ ಪಿಎಂ ಇಮ್ರಾನ್​ ಖಾನ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × three =
Remember me
