ಕರರಿ (ಉತ್ತರ ಪ್ರದೇಶ):ಮಕ್ಕಳು ಆಟವಾಡುತ್ತಿರುವಾಗ ಅಚಾನಕ್​ ಆಗಿ ಗುಂಡು ತಗುಲಿ ಬಾಲಕನೊಬ್ಬ ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಇಲ್ಲಿಯ ಕೌಶಾಂಬಿ ಜಿಲ್ಲೆಯ ಕರರಿಯಲ್ಲಿ ಇಂಥದ್ದೊಂದು ಘಟನೆ ನಡೆದಿದೆ.
ಸ್ಥಳೀಯ ಬಿಜೆಪಿ ಮುಖಂಡನ 10 ವರ್ಷದ ಮಗನಿಂದ ಈ ಅಚಾತುರ್ಯ ನಡೆದಿದೆ. ನೆರೆಮನೆಯ ಬಾಲಕನನ್ನು ಅಚಾನಕ್ಕಾಗಿ ಗುಂಡಿಟ್ಟು ಕೊಂದಿದ್ದಾನೆ ಬಾಲಕ.ಆಗಿದ್ದೇನೆಂದರೆ, ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಜಯ್​ ಜೈಸ್ವಾಲ್​ ಅವರ 10 ವರ್ಷದ ಮಗ ನೆರೆ ಮನೆಯ ಮಕ್ಕಳೊಂದಿಗೆ ಕಳ್ಳ ಪೊಲೀಸ್​ ಆಟವಾಡುತ್ತಿದ್ದ. ಈ ಆಟದಲ್ಲಿ ಬಾಲಕ ಪೊಲೀಸ್​ ಆಗಿದ್ದ.
ಆಟದಲ್ಲಿ ಕಳ್ಳತನ ಮಾಡಲು ಬಂದಿದ್ದರು ನೆರೆಮನೆಯ ಮಕ್ಕಳು. ಅವರನ್ನು ಹೊಡೆದು ಓಡಿಸುವಾಗ ಏನೂ ಅರಿಯದ ಬಾಲಕ ಅಪ್ಪನ ಪರವಾನಗಿ ಇರುವ ಗನ್​ ತಂದಿದ್ದಾನೆ. ಅದನ್ನು ಕಳ್ಳರಾಗಿದ್ದ ಮಕ್ಕಳ ಮೇಲೆ ಹಾರಿಸಿದ್ದಾನೆ. ಈ ಘಟನೆಯಲ್ಲಿ ಓರ್ವ ಬಾಲಕ ಸ್ಥಳದಲ್ಲಿಯೇ ಪ್ರಾಣ ಕಳೆದುಕೊಂಡಿದ್ದಾನೆ.ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ. ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಯಾವುದೇ ದೂರು ದಾಖಲಾಗಿಲ್ಲ. ಈ ರೀತಿ ಗನ್​, ಬಂದೂಕುಗಳನ್ನು ಸುಲಭದಲ್ಲಿ ಮಕ್ಕಳ ಕೈಗೆ ಸಿಗುವಂತೆ ಇಡುವ ಪಾಲಕರಿಗೆ ಈ ಘಟನೆ ಪಾಠದಂತಾಗಿದೆ. ಮಕ್ಕಳ ಆಟದಲ್ಲಿ ಮುಗ್ಧ ಬಾಲಕ ಪ್ರಾಣ ಕಳೆದುಕೊಂಡಿದ್ದು, ಅವರ ಪಾಲಕರ ಆಕ್ರಂದನ ನೋಡಲಾಗುತ್ತಿಲ್ಲ(ಏಜೆನ್ಸೀಸ್​)
ಚಿಕನ್ ಅಂಗಡಿ ತೆರೆದಿದ್ದೇ ಪ್ರಾಣಕ್ಕೆ ಮುಳುವು? ಪ್ರವೀಣ್​ಗೆ ಮೊದಲೇ ಸಿಕ್ಕಿತ್ತಾ ಸಾವಿನ ಸುಳಿವು? ಸಹೋದರ ನೀಡಿದರು ಸ್ಫೋಟಕ ಹೇಳಿಕೆ

VIDEO: ಬಿಜೆಪಿ ಮುಖಂಡ ಪ್ರವೀಣ್​ ಹತ್ಯೆಯ ಪ್ರಮುಖ ಆರೋಪಿ ಷಫೀಕ್​ ಪತ್ನಿ ಹೇಳಿದ್ದೇನು ಕೇಳಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 12 =
Remember me
