ಶಿಲ್ಲಾಂಗ್:ಕರೊನಾ ನಿಯಂತ್ರಣಕ್ಕೆ ಲಸಿಕೆ ಹಾಕಿಸಿಕೊಳ್ಳಲು ಸರ್ಕಾರ ಯೋಜನೆ ರೂಪಿಸಿದೆ. ಇದಾಗಲೇ ಎಲ್ಲೆಡೆಗಳಲ್ಲಿ ಲಸಿಕೆ ಜನಸಾಮಾನ್ಯರಿಗೆ ಸುಲಭದಲ್ಲಿ ಸಿಗುವ ನಿಟ್ಟಿನಲ್ಲಿ ಕ್ರಮವನ್ನೂ ತೆಗೆದುಕೊಳ್ಳಲಾಗುತ್ತಿದೆ. ಅದರೆ ಅದೇ ಇನ್ನೊಂದೆಡೆ ಯಾರು ಲಸಿಕೆ ಪಡೆಯಬೇಕು, ಯಾರು ಲಸಿಕೆ ಪಡೆಯಬಾರದು ಎಂಬ ಬಗ್ಗೆ ತಜ್ಞರು ಮಾಹಿತಿಗಳನ್ನು ನೀಡುತ್ತಲೇ ಬಂದಿದ್ದಾರೆ. ಇದರ ಹೊರತಾಗಿಯೂ ಹಲವೆಡೆಗಳಲ್ಲಿ ಲಸಿಕೆಗಳನ್ನು ಕಡ್ಡಾಯ ಮಾಡಲಾಗಿದೆ.
ಕೆಲವು ಸರ್ಕಾರಗಳು ಜನಸಾಮಾನ್ಯರ ಮೇಲೆ ಅದೆಷ್ಟು ರೀತಿಯ ಒತ್ತಡ ಹೇರುತ್ತಿದೆ ಎಂದರೆ ಲಸಿಕೆ ಪಡೆದುಕೊಳ್ಳದಿದ್ದರೆ ಅಂಗಡಿಗಳನ್ನು ತೆರೆಯಲು ಕೊಡುವುದಿಲ್ಲ, ಕಚೇರಿಗಳಿಗೆ ಪ್ರವೇಶವಿಲ್ಲ, ವ್ಯಕ್ತಿಗಳಿಗೆ ನೀಡುವ ಎಲ್ಲಾ ಸೌಲಭ್ಯಗಳನ್ನು ಕಟ್‌ ಮಾಡಲಾಗುವುದು, ಸಂಬಳ ಕಡಿತಗೊಳಿಸಲಾಗುವುದು… ಹೀಗೆ ಅನೇಕ ರೀತಿಯಲ್ಲಿ ಬೆದರಿಕೆ ಒಡ್ಡುತ್ತಿವೆ.
ಇದರ ವಿರುದ್ಧ ವ್ಯಕ್ತಿಯೊಬ್ಬರು ಮೇಘಾಲಯದ ಹೈಕೋರ್ಟ್ ಮೆಟ್ಟಿಲೇರಿದ್ದರು. ಆಗ ಹೈಕೋರ್ಟ್‌ ಹೇಳಿದ್ದು ಏನೆಂದರೆ, ಬಲವಂತವಾಗಿ ಲಸಿಕೆ ನೀಡುವುದು ಅಥವಾ ಲಸಿಕೆ ಕಡ್ಡಾಯ ಮಾಡುವುದು ಮನುಷ್ಯನ ಮೂಲಭೂತ ಹಕ್ಕನ್ನು ಕಸಿದುಕೊಂಡಂತೆ. ಈ ರೀತಿ ಲಸಿಕೆ ಪಡೆಯುವುದನ್ನು ಕಡ್ಡಾಯ ಮಾಡಿದರೆ ಅದು ಮನುಷ್ಯನ ಮೂಲಭೂತ ಹಕ್ಕಿನ ಮೇಲೆ ಪರಿಣಾಮ ಬೀರುತ್ತದೆ. ಕರೊನಾ ತಡೆಗೆ ಲಸಿಕೆ ಅನಿವಾರ್ಯ ನಿಜ. ಆದರೆ ಕೆಲವು ಮೂಲಭೂತ ತತ್ವಗಳನ್ನು ಗಮನಿಸಿದಾಗ ಲಸಿಕೆ ಪಡೆಯಲು ಬೆದರಿಕೆ ಹಾಕುವುದು ಸರಿಯಲ್ಲ ಎಂದಿದೆ.
ಬೀದಿಬದಿ ವ್ಯಾಪಾರಿಗಳು, ಅಂಗಡಿ ಮಾಲೀಕರು, ಸಣ್ಣ ವ್ಯಾಪಾರಿಗಳು, ಟ್ಯಾಕ್ಸಿ, ಕ್ಯಾಬ್ ಡ್ರೈವರ್ ಗಳು ಕೋವಿಡ್ ಲಸಿಕೆ ಹಾಕಿಸಿಕೊಂಡರೆ ಮಾತ್ರ ತಮ್ಮ ವ್ಯಾಪಾರ ವಹಿವಾಟು ನಡೆಸಬಹುದು ಎಂದು ಮೆಘಾಲಯ ಸರ್ಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಈ ಅರ್ಜಿ ಸಲ್ಲಿಕೆಯಾಗಿತ್ತು.
ಅಪಾಯಕಾರಿ ಚಾಲನೆ: ಪ್ರಿಯಾಂಕಾ ಗಾಂಧಿ ಪತಿ ವಾದ್ರಾಗೆ ದಂಡ ವಿಧಿಸಿದ ಪೊಲೀಸರು

ಲವರ್‌ ಜತೆ ಓಡಿಹೋಗಿದ್ದಕ್ಕೆ ಜೈ ಎಂದ ಕೋರ್ಟ್‌- ಆದೇಶ ಕೇಳಿ ಸುಸ್ತಾದ ಗುಟ್ಕಾಪ್ರಿಯ ಪತಿ!

ದಿನವೂ ಕನಸಲ್ಲಿ ಬಂದು ರೇಪ್‌: ಮಹಿಳೆ ದೂರು ಕೇಳಿ ಬೆಚ್ಚಿಬಿದ್ದ ಪೊಲೀಸರು- ಆಗಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
