ಲಖನೌ:ಕರೊನಾ ಲಸಿಕೆಯ ಎರಡು ಡೋಸ್‌ಗಳ ನಡುವೆ ಒಂದಿಷ್ಟು ದಿನಗಳ ಅಂತರವನ್ನು ಕಾಯ್ದುಕೊಳ್ಳಬೇಕು. ಈ ಬಗ್ಗೆ ಇದಾಗಲೇ ಆರೋಗ್ಯ ಇಲಾಖೆ ಪ್ರಕಟಣೆ ನೀಡುತ್ತಾ ಬಂದಿದೆ. ಆದರೆ ಇಲ್ಲೊಬ್ಬ ನರ್ಸ್‌ ಯಾವುದೋ ಮೂಡ್‌ನಲ್ಲಿ ಎರಡೂ ಡೋಸ್‌ ಒಟ್ಟಿಗೆ ಕೊಟ್ಟು ಬಿಟ್ಟು ಎಡವಟ್ಟು ಮಾಡಿದ್ದಾರೆ.
ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಲಲಿತಪುರ ಜಿಲ್ಲೆಯ ರಾವರ್ಪುರದ ನರ್ಸಿಂಗ್ ಹೋಂನಲ್ಲಿ. ಐದು ನಿಮಿಷಗಳ ಅಂತರದಲ್ಲೇ ಎರಡೂ ಡೋಸ್‌ಗಳನ್ನು ನೀಡಿದ್ದಾರೆ ನರ್ಸ್‌. ಲಸಿಕೆ ಹಾಕುವಾಗ ಮಾತುಕತೆಯಲ್ಲಿ ನಿರತರಾಗಿದ್ದ ನರ್ಸ್‌ನಿಂದ ಈ ಎಡವಟ್ಟು ಆಗಿದೆ ಎಂಬ ಆರೋಪ ಕೇಳಿಬಂದಿದೆ.
ಲಸಿಕೆ ಹಾಕಿಸಿಕೊಂಡು ಮನೆಗೆ ಹೋದ ಕೆಲವೇ ಗಂಟೆಗಳಲ್ಲಿ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ನಂತರ ಮನೆಯವರು ಕಂಗಾಲಾಗಿದ್ದಾರೆ. ಆಗ ಅವರಿಗೆ ಎರಡು ಡೋಸ್‌ ನೀಡಿರುವುದು ತಿಳಿದಿದೆ. ಲಸಿಕೆ ಹಾಕಿಸಿಕೊಳ್ಳುವಾಗ ಎರಡು ಬಾರಿ ಹಾಕಿದ್ದರೂ ಇದು ಎರಡು ಬಾರಿಯ ಡೋಸ್‌ಗಳು ಎಂದು ನನಗೆ ತಿಳಿಯಲಿಲ್ಲ. ಹೀಗೆಯೇ ಲಸಿಕೆ ಹಾಕುವುದು ಎಂದುಕೊಂಡಿದ್ದೆ. ನಂತರ ಮನೆಯವರಲ್ಲಿ ವಿಷಯ ತಿಳಿಸಿದಾಗ ಎರಡೂ ಡೋಸ್‌ ಒಟ್ಟಿಗೇ ಕೊಟ್ಟಿರುವುದು ತಿಳಿದಿದೆ ಎಂದು ವ್ಯಕ್ತಿ ಹೇಳಿದ್ದಾರೆ.
ಕೂಡಲೇ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗೆ ದೂರು ನೀಡಲಾಗಿದ್ದು, ಅವರನ್ನು ತುರ್ತು ಚಿಕಿತ್ಸೆಗೆ ದಾಖಲಿಸಲಾಗಿದೆ. ವೈದ್ಯಕೀಯ ಸಿಬ್ಬಂದಿ ಬೇಜವಾಬ್ದಾರಿ ಕುರಿತು ತನಿಖೆಗೆ ಆದೇಶಿಸಲಾಗಿದೆ. ಎರಡು ಡೋಸ್‌ಗಳನ್ನು ಒಟ್ಟಿಗೆ ನೀಡುವುದರಿಂದ ಅಂಥ ಯಾವುದೇ ತೊಂದರೆಯಾಗುವುದಿಲ್ಲ. ಆದರೂ ಇದು ಕರ್ತವ್ಯಲೋಪ. ಕನಿಷ್ಠ ನಾಲ್ಕು ವಾರಗಳ ಅಂತರವಿರಬೇಕು, ಕೂಡಲೇ ಶಿಸ್ತು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ವೈದ್ಯಾಧಿಕಾರಿ ತಿಳಿಸಿದ್ದಾರೆ.
ಹೇಳಿಬಿಡು ಹುಡುಗಿ… ನೀ ಚುಚ್ಚಿದ್ದು ನನ್ನ ತೋಳಿಗೋ, ಹೃದಯಕ್ಕೋ… ಅದು ಒಲವಿನ ಸೂಜಿಯೋ, ಮೊಂಡಾದದ್ದೊ?
ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಿಸಿಕೊಳ್ಳುವಿರಾ? ಸರ್ಕಾರ ನಿಗದಿ ಮಾಡಿರುವ ಈ ದರಗಳನ್ನೊಮ್ಮೆ ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 1 =
Remember me
