ನವದೆಹಲಿ:ಕೋವಿಡ್‌-19 ಲಸಿಕೆಯ ಕಾರ್ಯಕ್ರಮಕ್ಕೆ ಕೆಲವೊಂದು ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಇಂದು ಬಿಡುಗಡೆ ಮಾಡಿದೆ. ಈಗಾಗಲೇ ಇರುವ ಮಾರ್ಗಸೂಚಿಗೆ ಕೆಲವೊಂದು ಪರಿಷ್ಕರಣೆ ಮಾಡಿದ್ದು ಈಗ ಪರಿಷ್ಕೃತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಜೂನ್ 21 ರಿಂದ 18 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ಕಾರ್ಯ ನಡೆಯಲಿದೆ. ಎಲ್ಲರಿಗೂ ಚುಚ್ಚುಮದ್ದು ನೀಡಲು ರಾಜ್ಯಗಳಿಗೆ ಉಚಿತ ಲಸಿಕೆಯನ್ನು ಕೇಂದ್ರ ಸರ್ಕಾರ ಒದಗಿಸಲಿದೆ. ಲಸಿಕೆಯ ಡೋಸ್‌ಗಳನ್ನು ಆಯಾ ರಾಜ್ಯಗಳಿಗೆ ಮುಂಚೆಯೇ ಸರ್ಕಾರ ತಿಳಿಸಲಿದ್ದು, ಲಸಿಕೆಗಳಿಗೆ ಆದ್ಯತೆ ಮೇರೆಗೆ ಅವುಗಳನ್ನು ನೀಡುವ ವೇಳಾಪಟ್ಟಿಯ ನಿರ್ಧಾರವನ್ನು ರಾಜ್ಯ ಸರ್ಕಾರಗಳಿಗೆ ಬಿಡಲಾಗಿದೆ. ರಾಜ್ಯಗಳಲ್ಲಿನ ಜನಸಂಖ್ಯೆ, ಕರೊನಾ ಸೋಂಕಿತರ ಸಂಖ್ಯೆ ಇನ್ನಿತರ ಆಧಾರದ ಮೇಲೆ ಲಸಿಕೆಗೆ ಆದ್ಯತೆ ನೀಡಲಾಗುತ್ತದೆ.
ಅದೇ ರೀತಿ ಖಾಸಗಿ ಆಸ್ಪತ್ರೆಗಳು ಲಸಿಕೆಗೆ ಎಷ್ಟು ಬೆಲೆ ನಿಗದಿ ಮಾಡಬೇಕು ಎಂಬುದನ್ನು ಲಸಿಕೆ ತಯಾರಕರು ನಿರ್ಧರಿಸಲಿದ್ದಾರೆ. ಖಾಸಗಿ ಆಸ್ಪತ್ರೆಗಳು ಸೇವಾ ಶುಲ್ಕವಾಗಿ ಪ್ರತಿ ಡೋಸ್‌ಗೆ ಲಸಿಕೆಯ ಹಣ ಸೇರಿದಂತೆ 150 ರೂ.ಗಳನ್ನು ಅಷ್ಟೇ ಸೇವಾ ಶುಲ್ಕವಾಗಿ ಪಡೆಯಬೇಕು. ರಾಜ್ಯ ಸರ್ಕಾರಗಳು ವಿಧಿಸುವ ಬೆಲೆಯನ್ನು ಮೇಲ್ವಿಚಾರಣೆ ಮಾಡಬಹುದು. ಖಾಸಗಿ ಆಸ್ಪತ್ರೆಗಳು ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ಹಲವಾರು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಈ ದರವನ್ನು ನಿಗದಿ ಮಾಡಲಾಗಿದ್ದು, ಸರ್ಕಾರಗಳು ಮೇಲ್ವಿಚಾರಣೆ ಮಾಡುವಂತೆ ಕೇಂದ್ರ ಸರ್ಕಾರದ ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ.
Govt of India releases revised guidelines for national COVID vaccination program, to be implemented from June 21
"Vaccine doses to be allocated to States/UTs based on population, disease burden & vaccination' progress. Wastage will affect allocation negatively," guidelines saypic.twitter.com/rUsm0MZmwN
— ANI (@ANI)June 8, 2021

ಇಂಜಿನಿಯರಿಂಗ್ ಪದವೀಧರರಿಗೆ ಭರ್ಜರಿ ಅವಕಾಶ

ಸಿಇಟಿ ಪರೀಕ್ಷೆಯ ದಿನಾಂಕ ಫಿಕ್ಸ್‌: ಈ ಅಂಕಗಳ ಆಧಾರದ ಮೇಲೆಯೇ ರ‍್ಯಾಂಕ್- ಎಕ್ಸಾಂ ವಿಶೇಷತೆಗಳೇನು?

ಪಕ್ಕದಲ್ಲಿ ಮದುಮಗನಿರುವಾಗ್ಲೇ ಕ್ಯಾಮೆರಾದತ್ತ ಮದುಮಗಳ ಸಿಗ್ನಲ್‌ ಪಾಸ್‌- ವಿಡಿಯೋ ವೈರಲ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 20 =
Remember me
