ತಿರುಪತಿ:ವೈಕುಂಠ ಏಕಾದಶಿಯ ನಿಮಿತ್ತ ಹಲವಾರು ದೇಗುಲಗಳಲ್ಲಿ ಇಂದು ಪೂಜೆ, ಪುನಸ್ಕಾರಗಳು ನೆರವೇರುತ್ತಿವೆ. ಭಕ್ತರು ತಮ್ಮಿಚ್ಛೆಯಂತೆ ಇಂದು ದೇವಾಲಯಗಳಲ್ಲಿ ಕಾಣಿಕೆ ಸಲ್ಲಿಸುತ್ತಾರೆ.
ಅದರಂತೆ ವಿಶ್ವದ ಶ್ರೀಮಂತರ ದೇವಾಲಯದ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿರುವ ತಿರುಪತಿಯ ವೆಂಕಟೇಶ್ವರ ದೇವಾಲಯದಲ್ಲಿಯೂ ವಿಶೇಷ ಪೂಜೆ ನೆರವೇರುತ್ತಿದೆ. ಈ ಸಂದರ್ಭದಲ್ಲಿ ಭಾರತ್ ಬಯೋಟೆಕ್ ಇಂಟರ್‌ನ್ಯಾಷನಲ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಯೆಲ್ಲ ಅವರು ದೇವಸ್ಥಾನಕ್ಕೆ 2 ಕೋಟಿ ರೂಪಾಯಿ ದೇಣಿಗೆಯಾಗಿ ನೀಡಿದ್ದಾರೆ.
ವೈಕುಂಠ ಏಕಾದಶಿ ನಿಮಿತ್ತ ಇದನ್ನು ನೀಡಿರುವುದಾಗಿ ಅವರು ಹೇಳಿದ್ದಾರೆ. ಕೃಷ್ಣ ಮತ್ತು ಅವರ ಹೆಂಡತಿ ಸುಚಿತ್ರ ತಿರುಪತಿ ದೇವಸ್ಥಾನದ (ಟಿಟಿಡಿ) ಅಧ್ಯಕ್ಷ ವೈ.ವಿ ಸುಬ್ಬಾ ರೆಡ್ಡಿ ಅವರಿಗೆ ಈ ಮೊತ್ತದ ಚೆಕ್​​ ಹಸ್ತಾಂತರಿಸಿದ್ದಾರೆ. ಈ ಹಣವನ್ನು ದೇವಸ್ಥಾನದ ಅನ್ನಪ್ರಸಾದಕ್ಕೆ ಬಳಸಿಕೊಳ್ಳುವಂತೆ ಅವರು ಮನವಿ ಮಾಡಿರುವುದಾಗಿ ತಿಳಿದುಬಂದಿದೆ.
ಈ ಶುಭದಿನದಂದು ಕೃಷ್ಣ ದಂಪತಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವಾಲಯ ಆಡಳಿತ ಮಂಡಳಿ ಪ್ರಸಾದದ ಜತೆಗೆ ಅವರಿಗೆ ಪವಿತ್ರ ರೇಷ್ಮೆ ಬಟ್ಟೆಯನ್ನು ನೀಡಿದೆ.
ಇಂದು ವೈಕುಂಠ ಏಕಾದಶಿ: ದೇವರ ನಾಮ ಭಜಿಸುತ್ತಲೇ ವೈಂಕುಠ ದ್ವಾರ ಪ್ರವೇಶಿಸುತ್ತಿರುವ ಭಕ್ತರು

VIDEO: ‘ಬಾಳೆಹಣ್ಣು ಬೇಕೇ ಬಾಳೆಹಣ್ಣು’ ಎಂದಾಗ ಜನ ನೋಡಲಿಲ್ಲ… ಮಾರಾಟಗಾರನ ಹೊಸ ಪ್ಲ್ಯಾನ್‌ನಿಂದ ಭರ್ಜರಿ ವ್ಯಾಪಾರ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:11 − two =
Remember me
