ತಿರುವನಂಪುರ: ಕಾಂಗ್ರೆಸ್​ನ ಪಾದಯಾತ್ರೆಯ ನೇತೃತ್ವವನ್ನು ಪ್ರಧಾನಿ ನರೇಂದ್ರ ಮೋದಿ ವಹಿಸಿಕೊಂಡಿದ್ದಾರೆ ಎಂದು ಮೊನ್ನೆಯಷ್ಟೇ ಬಾಯಿತಪ್ಪಿ ಮಾತನಾಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಭಾರಿ ಟ್ರೋಲ್​ಗೆ ಒಳಗಾಗಿದ್ದರು. ಆದರೆ ಇದೀಗ ಇಡೀ ಕಾಂಗ್ರೆಸ್ಸೇ ತಲೆತಗ್ಗಿಸುವಂಥ ಘಟನೆಯನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ ವೀರ್​ ಸಾವರ್ಕರ್​ ಅವರನ್ನು ಅವಮಾನಿಸುತ್ತಾ ಕಾಂಗ್ರೆಸ್ಸಿಗರು ಕೆಲವು ತಿಂಗಳುಗಳಿಂದ ಭಾರಿ ಪ್ರತಿಭಟನೆಗಳನ್ನೇ ನಡೆಸುತ್ತಿದ್ದಾರೆ. ವೀರ್​ ಸಾವರ್ಕರ್​ ಹೆಸರಿನಲ್ಲಿ ಇದಾಗಲೇ ಶಿವಮೊಗ್ಗದಲ್ಲಿ ಹಿಂದೂ ಯುವಕರ ಮೇಲೆ ಚೂರಿ ಇರಿದಿರುವ ಘಟನೆಗಳೂ ನಡೆದಿದ್ದು, ಸಾವರ್ಕರ್​ ಹೆಸರನ್ನು ಇಟ್ಟುಕೊಂಡು ಹಿಂಸಾಚಾರವನ್ನೂ ಮಾಡಲಾಗುತ್ತಿದೆ.
ವೀರ್​ ಸಾವರ್ಕರ್​ ಹೆಸರು ಕೇಳಿದರೆ ಕಾಂಗ್ರೆಸ್ಸಿಗರು ಕಿಡಿ ಕಾರುತ್ತಿರುವ ನಡುವೆಯೇ, ಅವರು ನಡೆಸುತ್ತಿರುವ ‘ಭಾರತ್​ ಜೋಡೋ ಯಾತ್ರೆ’ಯ ಬ್ಯಾನರ್​ನಲ್ಲಿ ವೀರ್​ ಸಾವರ್ಕರ್​ ಫೋಟೋ ಹಾಕಲಾಗಿದೆ. ಬಿಜೆಪಿ ಸರ್ಕಾರದ ವಿರುದ್ಧ ನಡೆಸಲಾಗುತ್ತಿರುವ ‘ಭಾರತ್​ ಜೋಡೋ ಯಾತ್ರೆ’ಯ ಬ್ಯಾನರ್​ನಲ್ಲಿ ಇವರ ಚಿತ್ರ ಇದೆ.
ಕೇರಳದ ಎರ್ನಾಕುಲಂನಲ್ಲಿ ಕಾಂಗ್ರೆಸ್​ ಮುಖಂಡರನ್ನು ಸ್ವಾಗತಿಸಲು ಹಾಕಿರುವ ಬ್ಯಾನರ್​ನಲ್ಲಿ ವೀರ್​ ಸಾವರ್ಕರ್​ ಫೋಟೋ ಹಾಕಲಾಗಿದ್ದು, ಇದೀಗ ಬಿಜೆಪಿ, ಕಾಂಗ್ರೆಸ್ಸಿಗರನ್ನು ಗೇಲಿ ಮಾಡುವಂತಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ‘ತಡವಾಗಿಯಾದರೂ ಸರಿ, ಸಾವರ್ಕರ್​ ಅವರನ್ನು ಒಪ್ಪಿಕೊಂಡಿರಲ್ಲ. ಇದು ಉತ್ತಮ ಬೆಳವಣಿಗೆ’ ಎಂದು ಹೇಳಿದೆ. ‘ಇತಿಹಾಸವನ್ನು ಮರೆಮಾಚಲು ಎಷ್ಟೇ ಪ್ರಯತ್ನಿಸಿದರೂ, ಸತ್ಯ ಹೊರಬರಲೇಬೇಕು. ವೀರ ಸಾವರ್ಕರ್​ ಸ್ವಾತಂತ್ರ್ಯ ಹೋರಾಟಗಾರರು ಎಂಬುದನ್ನು ಅಲ್ಲಗಳೆಯಲಾಗದು” ಎನ್ನುತ್ತಿದ್ದಾರೆ ಬಿಜೆಪಿ ಬೆಂಬಲಿಗರು. ‘ಅರೆ ಇದೆಂಥ ಬೆಳವಣಿಗೆ?’ ಎಂದು ಹಲವರು ಕಮೆಂಟ್​ ಮಾಡುತ್ತಿದ್ದಾರೆ.
ವಿಷಯ ತಿಳಿಯುತ್ತಲೇ ಕಾಂಗ್ರೆಸ್​ ಕಾರ್ಯಕರ್ತರು ಸಾವರ್ಕರ್​ ಫೋಟೋಗೆ ಮರೆಯಾಗಿ ಗಾಂಧಿ ಚಿತ್ರವುಳ್ಳ ಬ್ಯಾನರ್​ ಅನ್ನು ಮುಚ್ಚಿದ್ದಾರೆ. ಆದರೆ ಮೂಲ ಬ್ಯಾನರ್​ ಇದಾಗಲೇ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದನ್ನು ಎಲ್​ಡಿಎಫ್​ ಬೆಂಬಲಿತ ಕೇರಳದ ಸ್ವತಂತ್ರ ಶಾಸಕ ಪಿ.ವಿ. ಅನ್ವರ್ ಗಮನಿಸಿ, ಫೇಸ್‌ಬುಕ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯಲ್ಲಿ ಸಾವರ್ಕರ್ ಇದ್ದಾರೆ ಎಂದು ಬರೆದಿದ್ದಾರೆ.
ನಾಚಿಕೆಯಿಂದ ತಲೆತಗ್ಗಿಸಿರುವ ಕಾಂಗ್ರೆಸ್​ ನಾಯಕರು, ‘ಮುದ್ರಕರಿಗೆ ಸ್ವಾತಂತ್ರ್ಯ ಹೋರಾಟಗಾರರ ಫೋಟೋಗಳುಳ್ಳ ಬ್ಯಾನರ್​ ಸಿದ್ಧ ಮಾಡಲು ಸೂಚಿಸಲಾಗಿತ್ತು. ಇಂಟರ್​ನೆಟ್​ನಲ್ಲಿ ಸಿಕ್ಕ ಹೋರಾಟಗಾರರ ಚಿತ್ರಗಳನ್ನು ಅವರು ಅಳವಡಿಸಿದ್ದಾರೆ. ಸಾವರ್ಕರ್​ ಫೋಟೋವನ್ನು ತಪ್ಪಾಗಿ ಮುದ್ರಿಸಿದ್ದಾರೆ’ ಎಂದು ಸ್ಪಷ್ಟನೆ ನೀಡಿದ್ದಾರೆ(ಏಜೆನ್ಸೀಸ್​)
ಕುತೂಹಲ ಕೆರಳಿಸುತ್ತಿದೆ ಕಾಂಗ್ರೆಸ್​ ಅಧ್ಯಕ್ಷ ಸ್ಥಾನದ ಲಿಸ್ಟ್​! ಗೆಹ್ಲೋಟ್, ತರೂರ್​ ಬಳಿಕ ಈಗ ಮೂರನೇ ಎಂಟ್ರಿ?

ಗುಂಡಿ ತಂದ ಆಪತ್ತು: ಗಣೇಶನನ್ನೂ ಬಿಡದ ಮಹಾನಗರ ಪಾಲಿಕೆ- ಬಿತ್ತು 3.66 ಲಕ್ಷ ರೂ. ದಂಡ!

ಮಗು ದತ್ತುಪಡೆಯ ಹೊರಟಿದ್ದ ಮಾಜಿ ಸಚಿವ, ನಟಿ ! ಜೈಲಲ್ಲಿರೋ ಜೋಡಿಯ ರಹಸ್ಯ ಇಡಿಯಿಂದ ಬಯಲು

ಗುಂಡು ಹಾಕಿಕೊಂಡು ವಿಮಾನ ಹತ್ತಿದ್ರಾ ಪಂಜಾಬ್​ ಸಿಎಂ? ಕೆಳಗಿಳಿಸಿದ ಸಿಬ್ಬಂದಿ- ರಾಜಕೀಯದಲ್ಲಿ ಭಾರಿ ಚರ್ಚೆ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:17 − 6 =
Remember me
