ನವದೆಹಲಿ :ತಮ್ಮ ಮದುವೆಗೆಂದು ಮೀಸಲು ಇಟ್ಟಿರುವ ಹಣವನ್ನು ಬಡ ಹೃದ್ರೋಗಿಗಳ ಚಿಕಿತ್ಸೆಗೆಂದು ನೀಡಿ, ಸಿಂಪಲ್‌ ಆಗಿ ತಾವು ಮದುವೆಯಾಗುವುದಾಗಿ ಘೋಷಿಸಿದ್ದಾರೆ ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರ ಮೊಮ್ಮಗಳು.ನಾಯ್ಡು ಅವರ ಮೊಮ್ಮಗಳು ಸುಷ್ಮಾ ಇಂಥದ್ದೊಂದು ಮಹತ್ಕಾರ್ಯ ಮಾಡಿದ್ದಾರೆ. ಇವರ ಮದುವೆ ಮುಂದಿನ ತಿಂಗಳು ನಡೆಯಲಿದೆ. ತಮ್ಮ ಮದುವೆ ವೆಚ್ಚವನ್ನು ಕಡಿತಗೊಳಿಸುವುದಾಗಿ ಅವರು ಪ್ರತಿಜ್ಞೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮದುವೆಗೆ ಮೀಸಲಿಟ್ಟ ಹಣವನ್ನು ಹೃದಯ ಸಂಬಂಧ ಸಮಸ್ಯೆಯಿಂದ ಬಳಲುತ್ತಿರುವ ಬಡವರ ಮಕ್ಕಳ ಚಿಕಿತ್ಸೆಗಾಗಿ ದೇಣಿಗೆಯಾಗಿ ನೀಡಿದ್ದಾರೆ.ಹೈದರಾಬಾದ್ ಮೂಲದ ‘ಹೃದಯ-ಕ್ಯೂರ್ ಎ ಲಿಟಲ್ ಹಾರ್ಟ್ ಫೌಂಡೇಶನ್’ಗೆ ಈ ಮೊತ್ತದ ಚೆಕ್‌ ಅನ್ನು ಅವರು ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರ ಸಮ್ಮುಖದಲ್ಲಿ ನೀಡಿದ್ದಾರೆ. ಆಂಧ್ರ ಪ್ರದೇಶದ ನೆಲ್ಲೂರಿನ ವೆಂಕಟಾಚಲಂನಲ್ಲಿ ಸ್ಥಾಪನೆ ಮಾಡಿದ್ದ ಸ್ವರ್ಣ ಭಾರತಿ ಟ್ರಸ್ಟ್‌ನ ಕಾರ್ಯಕ್ರಮದಲ್ಲಿ ವೆಂಕಯ್ಯ ನಾಯ್ಡು, ಅಮಿತ್‌ ಷಾ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಚೆಕ್‌ ಹಸ್ತಾಂತರ ಮಾಡಲಾಗಿದೆ.ಚೆಕ್‌ ಹಸ್ತಾಂತರಕ್ಕೂ ಮುನ್ನ ನಡೆದಿದ್ದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವೆಂಕಯ್ಯ ನಾಯ್ಡು ಅವರನ್ನು ಸಂವಿಧಾನದ ಆದರ್ಶ ಪಾಲಕರು ಎಂದು ಅಮಿತ್‌ ಷಾ ಶ್ಲಾಘಿಸಿದ್ದರು. ಸುಷ್ಮಾ ಅವರ ಈ ಮಹತ್ಕಾರ್ಯಕ್ಕೆ ಭಾರಿ ಶ್ಲಾಘನೆ ವ್ಯಕ್ತವಾಗಿದೆ. ಈ ಟ್ರಸ್ಟ್‌ ಗ್ರಾಮೀಣ ಮಹಿಳೆಯರ ಮತ್ತು ಯುವ ಸಮುದಾಯದ ಏಳಿಗೆಗೆ ಶ್ರಮಿಸುತ್ತಿದೆ.
ನಿಮ್ಮ ಒಂದು ಸಹಿ ಚಾಮುಂಡಿ ಬೆಟ್ಟವನ್ನು ಉಳಿಸಬಹುದು: ದಯವಿಟ್ಟು ಕೈಜೋಡಿಸಿ ಎಂದ ಯದುವೀರ್‌ ಒಡೆಯರ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + fourteen =
Remember me
