ಮುಂಬೈ:1959ರಿಂದ 1973ರವರೆಗೆ 14 ವರ್ಷ ಕಾಲ ಬಾಲಿವುಡ್​ ಆಳಿದ, ರಾಜೇಶ್​ ಖನ್ನಾ, ವಿನೋದ್​ ಖನ್ನಾ, ಶತ್ರ್ನು ಸಿನ್ಹಾ, ಅಮಿತಾಬ್​ ಬಚ್ಚನ್​ರಂಥವರು ಬಾಲಿವುಡ್​ನಲ್ಲಿ ಸೂಪರ್​ಸ್ಟಾರ್​ಗಳಾಗುವ ಮುನ್ನವೇ ಹೀರೋಗಳಿಗೆ ಸರಿಸಮಾನವಾಗಿ ಸಂಭಾವನೆ ಪಡೆಯುತ್ತಿದ್ದ ನಾಯಕಿ ಆಶಾ ಪಾರೆಖ್​ ಅವರಿಗೆ ಇಂದು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನವದೆಹಲಿಯಲ್ಲಿ ನಡೆದ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಿದರು. ನಾಳೆ 1942ರ ಅಕ್ಟೋಬರ್​ 2ರಂದು ಜನಿಸಿರುವ ಆಶಾ ಪಾರೆಖ್​ ಅವರು ನಾಳೆ (ಭಾನುವಾರ) 79 ವರ್ಷ ಪೂರೈಸಲಿದ್ದಾರೆ. ಹುಟ್ಟುಹಬ್ಬಕ್ಕೆ ಒಂದು ದಿನ ಮುಂಚಿತವಾಗಿ ಅತ್ಯುನ್ನತ ಪ್ರಶಸ್ತಿಯನ್ನು ಅವರು ಸ್ವೀಕರಿಸಿರುವುದು ವಿಶೇಷ.
1952 ರಲ್ಲಿ 16 ನೇ ವಯಸ್ಸಿನಲ್ಲಿ ‘ದಿಲ್ ದೇಖೆ ದೇಖೋ’ ಸಿನಿಮಾದ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ಆಶಾ ಅವರು ನಟಿಸಿದ್ದ ಕೊನೆಯ ಚಿತ್ರ 1995ರಲ್ಲಿ ಬಿಡುಗಡೆಗೊಂಡ ‘ಆಂದೋಲನ್’. ಚಿತ್ರರಂಗದಿಂದ ದೂರವಾಗಿರುವ ಆಶಾ ಅವರಿಗೆ ಈ ಅತ್ಯುನ್ನತ ಪ್ರಶಸ್ತಿ ಅರಸಿ ಬಂದಿದೆ.
‘ನ ಕೋಯಿ ಉಮಂಗ್ ಹೈ’, ‘ಮೈ ನಾ ಮಿಲೂಂಗಿ’, ‘ಜಬ್ ಚಲಿ ಥಂಡಿ ಹವಾ’, ‘ಕಮ್ ಟು ದಿ ಮೂನ್’ ಹೀಗೆ ಹಲವು ಹಾಡುಗಳಲ್ಲಿ ಮ್ಯಾಜಿಕ್ ಮಾಡಿದ ಆಶಾ ಅವರಿಗೆ 1992ರಲ್ಲಿ ಪದ್ಮಶ್ರೀ ಲಭಿಸಿತ್ತು. ಇವರು ನಟನೆ ಜತೆಗೆ ಸೆನ್ಸಾರ್ ಮಂಡಳಿಯ ಅಧ್ಯಕ್ಷರಾಗಿಯೂ 1998ರಿಂದ 2001ರವರೆಗೆ ಕಾರ್ಯ ನಿರ್ವಹಿಸಿದ್ದಾರೆ. ಈ ಮೂಲಕ ಸೆನ್ಸಾರ್ ಮಂಡಳಿಯ ಅಧ್ಯಕ್ಷರಾಗಿ ನೇಮಕಗೊಂಡ ಮೊದಲ ಮಹಿಳೆ ಎನಿಸಿಕೊಂಡಿದ್ದಾರೆ.
ಭಾರತದ ಅತ್ಯುನ್ನತ ಸಿನಿಮಾ ಪ್ರಶಸ್ತಿಯಾಗಿರುವ ಈ ಗೌರವವು ಕನ್ನಡದ ಡಾ.ರಾಜ್ ಕುಮಾರ್ ಅವರಿಗೂ ದೊರೆತಿದೆ. ಅಲ್ಲದೇ, ವಿನೋದ್ ಖನ್ನಾ, ಲತಾ ಮಂಗೇಶ್ಕರ್, ಅಮಿತಾಭ್ ಬಚ್ಚನ್ ಸೇರಿದಂತೆ ಹಲವು ದಿಗ್ಗಜರು ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಕಳೆದ ಬಾರಿ ಈ ಗೌರವವು ರಜನಿಕಾಂತ್ ಅವರಿಗೆ ಸಂದಿತ್ತು.
ಆಶಾ ಅವರ ರೋಚಕ ಬದುಕಿನ ಪಯಣದ ಕುರಿತು ಇಲ್ಲಿ ಕ್ಲಿಕ್ಕಿಸಿ…
ಆಶಾ ಪಾರೆಖ್​ ಎಂಬ ಅಚ್ಚಳಿಯದ ನಕ್ಷತ್ರ
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:eighteen − 7 =
Remember me
