ಮುಂಬೈ:ರಿಲಯನ್ಸ್ ಇಂಡಸ್ಟ್ರಿಯ ಉಪಾಧ್ಯಕ್ಷರಾಗಿದ್ದ ಪ್ರಕಾಶ್‌ ಷಾ ಅವರು ಸನ್ಯಾಸತ್ವ ಸ್ವೀಕರಿಸಿದ್ದಾರೆ. ವರ್ಷಕ್ಕೆ 75 ಕೋಟಿ ರೂಪಾಯಿ ಸಂಬಳ ಪಡೆಯುತ್ತಿದ್ದ ಷಾ ಅವರು ಈ ಸಿರಿವಂತಿಕೆಯಿಂದ ಹೊರಕ್ಕೆ ಬಂದು, ಸನ್ಯಾಸತ್ವದ ಹಾದಿ ತುಳಿದಿದ್ದಾರೆ.
ಮುಖೇಶ್ ಅಂಬಾನಿಯ ಬಲಗೈನಂತಿದ್ದ ಇವರು ಜೈನ ಮುನಿಗಳ ಬಳಿ ದೀಕ್ಷೆ ಪಡೆದು ಸನ್ಯಾಸತ್ವ ಸ್ವೀಕರಿಸಿದ್ದಾರೆ. ಇವರ ಜತೆ ಇವರ ಪತ್ನಿ ನೈನಾ ಷಾ ಕೂಡ ದೀಕ್ಷೆ ಸ್ವೀರಕಸಿದ್ದಾರೆ. ಕಳೆದ ಭಾನುವಾರ ಮಹಾವೀರ ಜಯಂತಿಯಂದು ದೀಕ್ಷಾ ಕಾರ್ಯದ ಪ್ರಕ್ರಿಯೆ ನಡೆದಿದೆ. ಇದೀಗ ಇವರು ಬಿಳಿಯ ವಸ್ತ್ರ ಧರಿಸಿ, ಬರಿಗಾಲಿನಲ್ಲಿ ಕೋಲು ಹಿಡಿದು ನಿಂತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಈ ಹಿಂದೆಯೇ ಅವರು ಇಂಥದ್ದೊಂದು ನಿರ್ಧಾರ ಮಾಡಿದ್ದರು. ಆದರೆ ಕರೊನಾದ ಹಿನ್ನೆಲೆಯಲ್ಲಿ ದೀಕ್ಷಾ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು.
ಪ್ರಕಾಶ್‌ ಅವರು ಕಳೆದ ವರ್ಷ ರಿಲಯನ್ಸ್ ಇಂಡಸ್ಟ್ರಿಯ ಉಪಾಧ್ಯಕ್ಷ ಸ್ಥಾನದಿಂದ ನಿವೃತ್ತಿಯಾಗಿದ್ದರು. ಇವರಿಗೆ ವಾರ್ಷಿಕ 75 ಕೋಟಿ ರೂಪಾಯಿ ಸಂಬಳ ಬರುತ್ತಿತ್ತು ಎನ್ನಲಾಗಿದೆ.ರಿಲಯನ್ಸ್ ಕಂಪೆನಿಯ ಜಾಮ್ ನಗರದ ಪೆಟಕೊಕ್ ಗ್ಯಾಸ್ಫಿಕೇಷನ್ ಪ್ರೊಜೆಕ್ಟ್ ಆರಂಭಿಸುವಲ್ಲಿ ಶಾ ಮಹತ್ವದ ಪಾತ್ರವಿತ್ತು. ಪ್ರಕಾಶ್ ಅವರು 40 ವರ್ಷಗಳ ಹಿಂದೆ ಬಾಂಬೆ ಐಐಟಿಯಲ್ಲಿ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದಿದ್ದರು.
ಇವರ ಒಬ್ಬ ಪುತ್ರ ಐಐಟಿ ಮುಂಬೈನಿಂದ ಇಂಜನಿಯರಿಂಗ್‌ ಪದವಿ ಪಡೆದಿದ್ದು, ಅವರು ಕೂಡ ಏಳು ವರ್ಷಗಳ ಹಿಂದೆಯೇ ದೀಕ್ಷೆ ಸ್ವೀಕರಿಸಿದ್ದಾರೆ. ಇನ್ನೋರ್ವ ಪುತ್ರನಿಗೆ ಮದುವೆಯಾಗಿದ್ದು ಒಂದು ಮಗುವಿದೆ.
ಕರೊನಾ ಗೆದ್ದ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌: ಆಸ್ಪತ್ರೆಯಿಂದ ಡಿಸ್‌ಚಾರ್ಜ್‌

ಕೊಳೆಗೇರಿಯಲ್ಲಿ ಸಂಭವಿಸಿದ ಭಾರಿ ಅಗ್ನಿ ದುರಂತ: ಒಂದೇ ಕುಟುಂಬದ ಆರು ಮಂದಿ ಸಜೀವ ದಹನ

ಅವಳು ಇವ್ರ ಮೊದಲ ಲವ್‌ ಅಂತೆ: ಎರಡು ಮಕ್ಕಳಾದ್ರೂ ಅವಳನ್ನು ನೋಡಿದ್ರೆ ಏನೇನೋ ಆಗತ್ತಂತೆ- ನಾನೇನು ಮಾಡ್ಲಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − 4 =
Remember me
