ಮುಂಬೈ:ಇಲ್ಲಿ ಕುದುರೆ ಮೇಲೆ ಏರಿನಿಂತು ಫೋಟೋಗೆ ಪೋಸ್​ ಕೊಟ್ಟವನು ಖ್ಯಾತ ಬಾಲಿವುಡ್ ನಟ ವಿಕ್ಕಿ ಕೌಶಲ್.
ಅಪಾಯಕಾರಿ ಎನ್ನುವಂಥ ಪೋಸ್​ ನೀಡಿರುವ ಈತ ಇದೀಗ ಸಾಮಾಜಿಕ ಜಾಲತಾಣದ ಹೀರೋ. ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.ಈ ವಿಧವಾದ ಪೋಟೋದಲ್ಲಿ ಕಾಣಿಸಿಕೊಂಡಿರುವ ನಟ ಕುದುರೆ ಸವಾರಿ ಮಾಡುವಾಗ ಬಳಸಲಾಗುವ ಉಡುಪನ್ನು ಧರಿಸಿದ್ದು, ಜೊತೆಯಲ್ಲಿ ಹೆಲ್ಮೆಟ್ ಹಾಗೂ ಕಾಲಿಗೆ ಶೂ ಧರಿಸಿದ್ದು, ಕುದುರೆ ಮೇಲೆ ನಿಂತು ಬ್ಯಾಲೆನ್ಸ್ ಮಾಡುತ್ತ ಪೋಸ್​ ಕೊಟ್ಟಿದ್ದಾನೆ ಈ ನಟ.
ಈ ಯುವ ನಟನ ಇಂಥದ್ದೊಂದು ಸಾಹಸಕ್ಕೆ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜತೆಗೆ ತಮ್ಮ ನೆಚ್ಚಿನ ನಟ ಇಂಥದ್ದೊಂದು ಸಾಹಸಕ್ಕೆ ಕೈ ಹಾಕಿದ್ದು, ಏನಾದರೂ ಅಪಾಯ ಆಗಿಬಿಟ್ಟರೆ ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ. ಕುದುರೆಯ ಮೇಲೆ ಕತ್ತೆ ಇರುವ ಪೇಂಟಿಂಗ್​ ಒಂದನ್ನು ಇತ್ತೀಚೆಗೆ ನಟ ಅನಿಲ್​ಕಪೂರ್​ ಶೇರ್​ ಮಾಡಿದ್ದರು. ಅದರಿಂದ ತಾನು ಪ್ರೇರೇಪಿತನಾದೆ ಎಂದು ಜೋಕ್​ ಮಾಡಿದ್ದಾರೆ ವಿಕ್ಕಿ.
ಆದರೆ ಇದು ಹಲವು ಪುರುಷ ವರ್ಗವನ್ನು ಮಾತ್ರ ಕೆರಳಿಸಿದೆ. ಇದಕ್ಕೆ ಕಾರಣ, ಯುವತಿಯರು ಈತನ ಫೋಟೋ ನೋಡಿ ಫಿದಾ ಆದದ್ದಕ್ಕಲ್ಲ. ಬದಲಿಗೆ ಇದೊಂದು ಹುಚ್ಚು ಸಾಹಸ. ಈತ ತನ್ನ ಪ್ರಾಣವನ್ನು ಮಾತ್ರವಲ್ಲದೇ ಕುದುರೆಗೂ ಹಿಂಸೆ ಕೊಟ್ಟಿದ್ದಾನೆ ಎಂದು ಅನೇಕ ಮಂದಿ ಕಮೆಂಟ್​ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಾಣಿಗಳ ಬಗ್ಗೆ ಸ್ಪಲ್ಪ ಯೋಚನೆ ಮಾಡಿ, ಅವುಗಳ ಕುರಿತಾಗಿ ದಯೆ ಇರಲಿ ಎಂದು ಕೆಲವರು ಹೇಳಿದ್ದರೆ, ನೀವು ಈ ರೀತಿ ಮಾಡುವುದರಿಂದ ಕುದುರೆಗೆ ತೊಂದರೆಯಾಗುತ್ತದೆ. ವಿಕಿ ನೀವು ಈ ರೀತಿ ಮಾಡುವ ಬದಲು ಬೇರೆ ಏನನ್ನಾದರೂ ಮಾಡಬಹುದಿತ್ತು ಎಂದಿದ್ದಾರೆ. ಯಾರು ಏನೇ ಹೇಳಿದರೂ ಯುವತಿಯರು ತನ್ನ ಈ ಪೋಸ್​ಗೆ ಶ್ಲಾಘನೆ ವ್ಯಕ್ತಪಡಿಸಿರುವುದು ಈ ನಟನಿಗೆ ಖುಷಿ ಕೊಟ್ಟಿದೆಯಂತೆ.
ಚಿಕ್ಕ ವಯಸ್ಸಿನಲ್ಲಿಯೇ ಲೈಂಗಿಕ ನಿರಾಸಕ್ತಿ ಬಂದುಬಿಟ್ಟಿದೆ… ಅಪರಾಧಿ ಪ್ರಜ್ಞೆ ಕಾಡ್ತಿದೆ, ಏನು ಮಾಡಲಿ?

ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಶಾಕ್​- ನೇರ ನೇಮಕಾತಿಯ ಅಧಿಸೂಚನೆಗಳು ರದ್ದು; ಕನಸು ನುಚ್ಚುನೂರು

https://www.vijayavani.net/s-nyayadevate-kopisikondu-nannannu-bittu/
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × 2 =
Remember me
