ನವದೆಹಲಿ:ನಾಯಿಗಳ ಬಗ್ಗೆ ಎಷ್ಟು ಹೇಳಿದರೂ ಕಮ್ಮಿಯೇ. ನಿಷ್ಠೆ, ತ್ಯಾಗ, ಪ್ರೇಮ, ಸ್ನೇಹ ಎಲ್ಲದ್ದಕ್ಕೂ ಸಾಕುನಾಯಿಗಳಿಗೆ ಭಾರಿ ಹೆಸರು ಇದೆ. ಮಾತ್ರವಲ್ಲದೇ ಸೈನ್ಯದಿಂದ ಹಿಡಿದು, ಪೊಲೀಸ್‌ ಇಲಾಖೆಯವರೆಗೂ ಇದರ ಕಾರ್ಯಗಳು ಅಷ್ಟಿಷ್ಟಲ್ಲ.
ಇವೆಲ್ಲವುಗಳಿಗಿಂತಲೂ ಡಿಫರೆಂಟ್‌ ಆಗಿರುವ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ. ಅದೇನೆಂದರೆ ವೈಶಾಲಿ ಮಾಥುರ್ ಎನ್ನುವವರು ತಮ್ಮ ಸ್ನೇಹಿತೆಯೊಬ್ಬರ ಮನೆಯ ಎರಡು ನಾಯಿಗಳ ವಿಡಿಯೋ ಶೇರ್‌ ಮಾಡಿದ್ದಾರೆ. ಅದರಲ್ಲಿ ಈ ನಾಯಿಗಳು ತನ್ನ ಒಡತಿಯ ಜತೆ ದೇವರ ಭಜನೆಯಲ್ಲಿ ಪಾಲ್ಗೊಂಡು ಭಜನೆಯ ಬಳಿಕವಷ್ಟೇ ಊಟ ಮಾಡುತ್ತದೆ.
Sharing this heart-warming video of my friend teaching her pups to say their prayers before food. Me thinks both are good boys. 😍@dog_ratespic.twitter.com/z5ANJDVwVn
— Vaishali Mathur (@mathur_vaishali)May 1, 2021

ಮಹಿಳೆ ಕೈಮುಗಿದು ಮಹಿಳೆ ಪ್ರಾರ್ಥನೆ ಪಠಿಸುವ ಸಮಯದಲ್ಲಿ ನಾಯಿಗಳು ಶ್ರದ್ಧೆಯಿಂದ ಕುಳಿತುಕೊಂಡಿರುವುದು ಹಾಗೂ ಭಜನೆ ಮುಗಿದ ಮೇಲೆ ಆಹಾರವನ್ನು ಸೇವಿಸುವಂತೆ ಮಹಿಳೆ ಸೂಚಿಸಿದಾಗ, ಅವು ಜಿಗಿದು ಆಹಾರದ ಬಟ್ಟಲಿನತ್ತ ಧಾವಿಸುವುದನ್ನು ವಿಡಿಯೋದಲ್ಲಿ ನೋಡಬಹುದು.
ಆಕ್ಸಿಜನ್‌ಗಾಗಿ ಅರಳಿ ಮರದ ಕೆಳಗೆ ಸೋಂಕಿತರ ದೌಡು- ಜಪ್ಪಯ್ಯ ಎಂದ್ರೂ ಆಸ್ಪತ್ರೆಗೆ ಬರಲೊಲ್ಲರು!

ನನ್ನ ಪ್ರೇಯಸಿಗೆ ಕುಜ ದೋಷ- ಒಬ್ಬನೇ ಮಗನಾಗಿರುವ ನಾನೀಗ ಸಂದಿಗ್ಧಕ್ಕೆ ಸಿಲುಕಿದ್ದೇನೆ, ಪ್ಲೀಸ್‌ ದಾರಿ ತೋರಿ

ಮಮತಾಗೆ ಅಭಿನಂದನೆಗಳ ಮಹಾಪೂರ: ದೀದೀ ಓ ದೀದೀ ಅಂದೋರೆಲ್ಲಿ ಹೋದ್ರು ಎಂದು ಅಖಿಲೇಶ್‌ ವ್ಯಂಗ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
