ಕಾಬುಲ್‌:ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ಸಂಪೂರ್ಣವಾಗಿ ವಶಕ್ಕೆ ಪಡೆದುಕೊಂಡ ನಂತರ, ಅಮೆರಿಕ ಕೂಡ ತನ್ನ ಸೇನೆಯನ್ನು ವಾಪಸ್‌ ಪಡೆದುಕೊಂಡಿದೆ. ಇದಾದ ಮೇಲೆ ಪಾಕಿಸ್ತಾನ ಮತ್ತು ಚೀನಾ ಮಾತ್ರ ತಾಲಿಬಾನಿಗಳ ಸಂಪೂರ್ಣ ಬೆಂಬಲಕ್ಕೆ ನಿಂತುಕೊಂಡಿದ್ದು, ಧನಸಹಾಯ ಮಾಡುತ್ತಿದೆ.
ಇದರ ನಡುವೆಯೇ ಅಫ್ಘಾನಿಸ್ತಾನದಲ್ಲಿ ಅಮೆರಿಕ ಯುದ್ಧ ವಿಮಾನಗಳನ್ನು ಬಿಟ್ಟು ಹೋಗಿದೆ ಜತೆಗೆ ಶಸ್ತ್ರಾಸ್ತ್ರಗಳನ್ನೂ ಅಲ್ಲಿಯೇ ಬಿಟ್ಟು ಹೋಗಿದ್ದು, ಇವೆಲ್ಲಾ ಈಗ ತಾಲಿಬಾನಿಗಳ ವಶವಾಗಿದೆ. ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂತಾಗಿದೆ ಸದ್ಯದ ಸ್ಥಿತಿ. ಏಕೆಂದರೆ ಈ ಯುದ್ಧ ವಿಮಾನಕ್ಕೆ ತಾಲಿಬಾನಿಗಳು ಜೋಕಾಲಿ ಕಟ್ಟಿ ಆಟವಾಡಿದ್ದಾರೆ. ಇದರ ವಿಡಿಯೋ ಕೆಲ ದಿನಗಳ ಹಿಂದೆ ವೈರಲ್‌ ಆಗಿದೆ,
ಈ ವಿಡಿಯೋದಲ್ಲಿ ತಾಲಿಬಾನಿಗಳು ಯುದ್ಧವಿಮಾನಕ್ಕೆ ಜೋಕಾಲಿ ಕಟ್ಟಿ ಆಡುವುದನ್ನು ನೋಡಬಹುದಾಗಿದೆ. ಈ ವಿಡಿಯೋ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆಯೇ ತಾಲಿಬಾನಿಗಳ ಬೆಂಬಲಕ್ಕೆ ನಿಂತಿರುವ ಚೀನಾ ಗಹಿಗಹಿಸಿ ನಕ್ಕಿದೆ. ಅಮೆರಿಕದ ಯುದ್ಧ ವಿಮಾನಗಳು ಹೇಗೆ ತಾಲಿಬಾನಿಗಳ ಕಾಲಕಸಕ್ಕೆ ಸಮ ಎನ್ನುವ ರೀತಿಯಲ್ಲಿ ಚೀನಾ ವ್ಯಂಗ್ಯವಾಡಿದೆ.
ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ಲಿಜಿಯಾನ್ ಝಾವೋ ಈ ವಿಡಿಯೋ ಶೇರ‌ ಮಾಡಿಕೊಂಡಿದ್ದು, ಅಮೆರಿಕದ ಕಾಲೆಳೆದಿದ್ದಾರೆ. ತಾಲಿಬಾನಿಗಳು ಅಮೆರಿಕದ ವಿಮಾನವನ್ನು ಹೇಗೆ ಆಟದ ವಸ್ತುವಾಗಿ ಪರಿವರ್ತಿಸಿದ್ದಾರೆ ಎಂದು ಹೇಳಿರುವ ಅವರು, ಅಮೆರಿಕಕ್ಕೆ ವ್ಯಂಗ್ಯ ಮಾಡಿದ್ದಾರೆ. ಅಮೆರಿಕ ತನ್ನ ಸೇನೆಯನ್ನು ಅಫ್ಘಾನಿಸ್ತಾನದಿಂದ ದಿಢೀರ್ ಹಿಂತೆಗೆದುಕೊಂಡ ನೀತಿಯನ್ನು ಟೀಕಿಸಿದ್ದ ಚೀನಾ ಇದೀಗ ಈ ರೀತಿ ವ್ಯಂಗ್ಯವಾಡುವ ಮೂಲಕ ಮತ್ತೊಮ್ಮೆ ತಾನು ತಾಲಿಬಾನಿಗಳ ಪರ ಎಂದು ಜಗಜ್ಜಾಹೀರ ಮಾಡಿದೆ.
ನೀವೂ ನೋಡಿ ವಿಡಿಯೋ ಹಾಗೂ ಲಿಜಿಯಾನ್ ಝಾವೋ ಟ್ವೀಟ್‌:
ನಡುಬೀದಿಯಲ್ಲಿ ಮಹಿಳೆಯ ಎಳೆದು ಎಸ್ಕೇಪ್‌ ಆಗಿದ್ದ ಜೆಡಿಎಸ್‌ ಮುಖಂಡ ಅಂದರ್‌

‘25 ಯುವಕರ ಜತೆ ಸಂಬಂಧ ಹೊಂದಿದ್ದಾಳೆ ನನ್ ಪತ್ನಿ; ಆದ್ರೂ ಅವಳು ಬೇಕು, ಪ್ಲೀಸ್‌ ಹುಡುಕಿಕೊಡಿ’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
