ಪಟ್ನಾ:ಅನ್​ಲೈನ್​ಗಳಲ್ಲಿ ಏನಾದರೂ ವಸ್ತುಗಳ ಆರ್ಡರ್​ ಮಾಡಿದಾಗ ಬೇರೆಯ ವಸ್ತುಗಳು ಬರುವುದು ಮಾಮೂಲಾಗಿ ಬಿಟ್ಟಿದೆ. ಅದೇ ರೀತಿ ದಸರಾಗೆ ಬಂಪರ್​ ಕೊಡುಗೆ ಎನ್ನುವ ಕಾರಣಕ್ಕೆ ಡ್ರೋನ್​ ಕ್ಯಾಮೆರಾ ಆರ್ಡರ್​ ಮಾಡಿದ್ದ ಒಬ್ಬ ಗ್ರಾಹಕ ಪ್ಯಾಕ್​ ಬಿಚ್ಚಿ ನೋಡಿದಾಗ ಶಾಕ್​ಗೆ ಒಳಗಾಗಿರುವ ಘಟನೆ ನಡೆದಿದೆ.
ಬಿಹಾರ ನಳಂದದ ಪರ್ವಾಲ್‍ಪುರದ ಚೈತನ್ಯ ಕುಮಾರ್ ಎನ್ನುವವರು “ಮೀಶೋ” ಮಾರ್ಕೆಟಿಂಗ್​ ವೆಬ್​ಸೈಟ್​ನಲ್ಲಿ ಡ್ರೋನ್ ಕ್ಯಾಮೆರಾ ಆರ್ಡರ್​ ಮಾಡಿದ್ದರೆ ಅವರಿಗೆ ಬಂದದ್ದು ಒಂದು ಕೆ.ಜಿ ಆಲೂಗಡ್ಡೆ! ಮನೆಗೆ ಬಂದಿರುವ ಪಾರ್ಸೆಲ್ ಅನ್ನು ಅವರು ವಿಡಿಯೋ ಮೂಲಕ ತೋರಿಸಿದ್ದು, ಜಾಲತಾಣದಲ್ಲಿ ಈ ವಿಡಿಯೋ ವೈರಲ್​ ಆಗಿದೆ.
ಪಾರ್ಸೆಲ್ ತೆರೆದಾಗ ಅದರಲ್ಲಿ ಡ್ರೋನ್ ಕ್ಯಾಮೆರಾ ಬದಲಿಗೆ 10 ಆಲೂಗಡ್ಡೆ ಇರುವುದು ವಿಡಿಯೋದಲ್ಲಿ ನೋಡಬಹುದು. ಇದರಿಂದ ರೊಚ್ಚಿಗೆದ್ದ ಚೈತನ್ಯ ಕುಮಾರ್ ಅವರು, ಡೆಲಿಬಾಯ್​ಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಆತ, ‘ನನ್ನದೇನೂ ತಪ್ಪಿಲ್ಲ. ಬಾಕ್ಸ್ ಮಾಡಿ ವಿಳಾಸ ಹಾಕಿಟ್ಟಿದ್ದ ಪಾರ್ಸೆಲ್ ನಾನು ತಂದು ನಿಮಗೆ ತಲುಪಿಸಿದ್ದೇನೆ ಅಷ್ಟೇ’ ಎಂದು ಹೇಳಿದ್ದಾನೆ.
ಅಂದಹಾಗೆ ಇವರು ಆರ್ಡರ್​ ಮಾಡಿದ್ದ ಡ್ರೋನ್ ಕ್ಯಾಮೆರಾಕ್ಕೆ ಮಾರುಕಟ್ಟೆ ಮೌಲ್ಯ 85 ಸಾವಿರ ರೂಪಾಯಿಗಳು ಇದ್ದರೆ ಮೀಶೋ ವೆಬ್​ಸೈಟ್​ನಲ್ಲಿ ಇದು 10, 212 ರೂ.ಗೆ ಇತ್ತು. ಇಷ್ಟು ಕಮ್ಮಿ ಬೆಲೆಗೆ ಡ್ರೋನ್​ ಕ್ಯಾಮೆರಾ ಸಿಗುತ್ತದೆ ಎಂದು ನೋಡಿ ಖುಷಿಪಟ್ಟುಕೊಂಡು ಅದನ್ನು ಆರ್ಡರ್​ ಮಾಡಿದರೆ ಬಂದದ್ದು ಅಲೂಗಡ್ಡೆ!
ಈ ಬಗ್ಗೆ ಚೈತನ್ಯ ಕುಮಾರ್ ಕಂಪೆನಿ ವಿರುದ್ಧ ದೂರು ದಾಖಲಿಸಿದ್ದಾರೆ. ಅವರ ದೂರಿನ ಬಳಿಕ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪರ್ವಲಪುರ ಎಸ್‍ಎಚ್‍ಒ ಹೇಳಿದ್ದಾರೆ(ಏಜೆನ್ಸೀಸ್​)
ಇಲ್ಲಿದೆ ನೋಡಿ ವಿಡಿಯೋ
ऑनलाइन शॉपिंग करना पड़ा महँगा, युवक ने मंगाया ड्रोन, निकला आलू | Unseen Indiaपूरा वीडियो-https://t.co/KxZ0RsZwUlpic.twitter.com/s81XVfE5Vb— UnSeen India (@USIndia_)September 26, 2022
ऑनलाइन शॉपिंग करना पड़ा महँगा, युवक ने मंगाया ड्रोन, निकला आलू | Unseen Indiaपूरा वीडियो-https://t.co/KxZ0RsZwUlpic.twitter.com/s81XVfE5Vb
VIDEO: ಚೀನಾದಲ್ಲಿ ಕ್ಷಿಪ್ರಕ್ರಾಂತಿ, ಅಧ್ಯಕ್ಷನ ಗೃಹಬಂಧನ? ಎಲ್ಲರ ಬಾಯಿ ಮುಚ್ಚಿಸಿತು ಈ ವಿಡಿಯೋ…
ಬಸ್​-ಟ್ರಕ್​ ಡಿಕ್ಕಿ: ಎಂಟು ಮಂದಿಯ ದಾರುಣ ಸಾವು- 24 ಮಂದಿಯ ಸ್ಥಿತಿ ಚಿಂತಾಜನಕ
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:10 + 19 =
Remember me
