ಶ್ರೀನಗರ:ಇಂದು ವಿಜಯ್​ ದಿವಸ್​. ಪಾಕಿಸ್ತಾನದಿಂದ ಬಾಂಗ್ಲಾದೇಶವನ್ನು ಬೇರ್ಪಡಿಸಿದ 1971ರ ಯುದ್ಧದ ಗೆಲುವಿನ ನೆನಪಿಗಾಗಿ ಪ್ರತಿ ವರ್ಷ ಡಿ.16ರಂದು ವಿಜಯ್ ದಿವಸ್ ಆಚರಣೆ ಮಾಡಲಾಗುತ್ತದೆ.
ಯುದ್ಧದಲ್ಲಿ ಪಾಕಿಸ್ತಾನವನ್ನು ಸೋಲಿಸುವಲ್ಲಿ ಭಾರಿ ಸಾಹಸ ಮೆರೆದು ಇಡೀ ಪ್ರಪಂಚವೇ ಭಾರತದತ್ತ ದೃಷ್ಟಿ ಹರಿಸುವಂತೆ ಮಾಡಿದ ಯೋಧರನ್ನು ನೆನಪು ಮಾಡಿಕೊಂಡು, ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಬಿಎಸ್‌ಎಫ್ ಯೋಧರು ಅಪರೂಪದ ಕಾರ್ಯ ಮಾಡಿದ್ದಾರೆ.
ಅದೇನೆಂದರೆ 11 ಗಂಟೆಯಲ್ಲಿ 180 ಕಿ.ಮೀ ಓಟ ನಡೆಸಿದ್ದಾರೆ. ಓಟದಲ್ಲಿ ಬಿಎಸ್‌ಎಫ್‌ನ ಪುರುಷ ಮತ್ತು ಮಹಿಳಾ ಯೋಧರು ಸೇರಿ 930 ಮಂದಿ ಭಾಗವಹಿಸಿದ್ದರು. ಡಿಸೆಂಬರ್ 13ರ ಮಧ್ಯರಾತ್ರಿ ಈ ಓಟ ನಡೆದಿದೆ.
1971ರ ಡಿಸೆಂಬರ್ 3ರಂದು ಆರಂಭವಾಗಿದ್ದ ಯುದ್ಧ ಡಿಸೆಂಬರ್ 16ಕ್ಕೆ ಕೊನೆಗೊಂಡಿತ್ತು. ಯುದ್ಧದಲ್ಲಿ ಸೋತ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಮಿರ್ ಅಬ್ದುಲ್ಲಾ ಖಾನ್ ನಿಯಾಜಿ 93 ಸಾವಿರ ಸೇನೆಯ ಜತೆ ಶರಣಾಗಿದ್ದರು. 2ನೇ ಮಹಾಯುದ್ಧದ ನಂತರದ ಅತಿ ದೊಡ್ಡ ಸೇನಾ ಶರಣಾಗತಿ ಇದು ಎನ್ನಲಾಗಿದೆ.
Today is#VijayDiwas, India marks it's military victory over Pakistan in 1971 war. 93000 Pak soldiers surrendered. We bow down our heads with gratitude.#VijayDiwas2020https://t.co/VPWWr3e5HH
— Kiren Rijiju (@KirenRijiju)December 16, 2020

ಈ ಯುದ್ಧವನ್ನು ನೆನಪಿಸಿಕೊಂಡು ಓಟದ ಮೂಲಕ ಗೌರವ ಸಲ್ಲಿಸಿರುವ ವಿಡಿಯೋವನ್ನು ಹಂಚಿಕೊಂಡಿರುವ ಕೇಂದ್ರ ಯುವಜನ ಸೇವಾ ಮತ್ತು ಕ್ರೀಡಾ ಸಚಿವ ಕಿರಣ್ ರಿಜಿಜು. ಭಾರತದ ವಿಜಯವನ್ನು ಮೆಲುಕು ಹಾಕಿದ್ದಾರೆ.
ಕೋಲ್ಕತ್ತಾದಲ್ಲಿ ವಿಜಯ್‌ ದಿವಸ್‌ ದಿನವನ್ನು ಗುರುತಿಸಲು ಈಸ್ಟರ್ನ್ ಕಮಾಂಡ್‌ನ ಹೆಡ್ ಕ್ವಾರ್ಟರ್ಸ್ ಫೋರ್ಟ್ ವಿಲಿಯಂನಲ್ಲಿರುವ ‘ವಿಜಯ್ ಸ್ಮಾರಕ್’ ನಲ್ಲಿ ಮಾಲಾರ್ಪಣೆ ಸಮಾರಂಭ ನಡೆಯಲಿದೆ. ಇದು ಭಾರತದ ಇತಿಹಾಸದಲ್ಲಿ ಒಂದು ಹೆಗ್ಗುರುತು.
ಅದೇ ಇನ್ನೊಂದೆಡೆ, ವಿಜಯ್​ ದಿವಸ್​ ಅಂಗವಾಗಿ ರಾಷ್ಟ್ರೀಯ ವಾರ್ ಮೆಮೋರಿಯಲ್‍ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತಿತರರು ಹುತಾತ್ಮ ಯೋಧರಿಗೆ ಶ್ರದ್ದಾಂಜಲಿ ಸಲ್ಲಿಸಿ ವಿಜಯ ಜ್ಯೋತಿ ಬೆಳಗಿಸಿದರು.
ರಕ್ಷಣಾ ಸಚಿವ ರಾಜನಾಥ್‍ಸಿಂಗ್, ಮೂರು ಸೇನಾ ಪಡೆಗಳ ಮುಖ್ಯಸ್ಥರುಗಳು ದೇಶಕ್ಕಾಗಿ ಪ್ರಾಣರ್ಪಣೆ ಮಾಡಿದ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು. ವಿಜಯ್ ದಿವಸ್ ಅಂಗವಾಗಿ ದೇಶದ ನಾನಾ ಭಾಗಗಳಿಂದ ವಿಜಯ ಜ್ಯೋತಿ ಯಾತ್ರೆ ನಡೆಸಲಾಯಿತು.
ಮೆನೋಪಾಸ್ ನಂತರ ಲೈಂಗಿಕಕ್ರಿಯೆಯಲ್ಲಿ ತೊಂದರೆಯಾದರೆ ಆಯುರ್ವೇದದಲ್ಲಿದೆ ಪರಿಹಾರ…

ಟ್ರಂಪ್​ರನ್ನ ಜೈಲಲ್ಲಿ ಹಾಕಿ ಎಲ್ಲರೂ ರೇಪ್​ ಮಾಡಬೇಕು- ನಟಿಯಿಂದ ಹೀಗೊಂದು ಟ್ವೀಟ್​

VIDEO: ಹೋರಿ, ಟಗರು ಆಯ್ತು; ಈಗ ಕೋತಿಯ ಮುನಿಸು… ಸ್ವಲ್ಪದರಲ್ಲೇ ಬಚಾವಾದ ಶಾಸಕ ರೇಣುಕಾಚಾರ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 2 =
Remember me
