ಕಾನ್ಪುರ:ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ಗ್ಯಾಂಗ್​ಸ್ಟರ್​ ಎನ್​ಕೌಂಟರ್​ ಪ್ರಕರಣದ ತನಿಖೆ ಇನ್ನೂ ನಡೆಯುತ್ತಲೇ ಇದೆ. ಇದಾಗಲೇ ಈತನಿಗೆ ಸಹಾಯ ಮಾಡಿರುವ ಕೆಲ ಪೊಲೀಸ್​ ಅಧಿಕಾರಿಗಳ ವಿರುದ್ಧ ಆರೋಪ ಕೇಳಿಬಂದಿರುವ ಬೆನ್ನಲ್ಲೇ ಇದೀಗ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರನ್ನು ಅಮಾನತು ಮಾಡಲಾಗಿದೆ.
ದುಬೆಗೆ ಮೊದಲಿನಿಂದಲೂ ನೆರವಾಗುತ್ತಾ ಬಂದಿರುವ ಆರೋಪದ ಮೇಲೆ ಕಾನ್ಪುರದ ಮಾಜಿ ಸೀನಿಯರ್​ ಸೂಪರಿಂಟೆಂಡೆಂಟ್​ ಆಫ್​ ಪೊಲೀಸ್​ ಹಾಗೂ ಐಪಿಎಸ್​ ಅಧಿಕಾರಿ ಅನಂತ್​ ಡಿಯೋ ಇದೀಗ ಅಮಾನತುಗೊಂಡಿದ್ದಾರೆ.
ಕಳೆದ ಜುಲೈ 3 ರಂದು ಕಾನ್ಪುರದ ಚೌಬೆಪುರ್ ಪ್ರದೇಶದ ಬಿಕ್ರು ಗ್ರಾಮದಲ್ಲಿ ದುಬೆಯನ್ನು ಬಂಧಿಸಲು ಹೋಗಿದ್ದ ಸಂದರ್ಭದಲ್ಲಿ ಎಂಟು ಮಂದಿ ಪೊಲೀಸರನ್ನು ಆತ ಕೊಂದುಹಾಕಿದ್ದ. ನಂತರ ಜುಲೈ 10ರಂದು ಎನ್​ಕೌಂಟರ್​ನಲ್ಲಿ ದುಬೆ ಹತನಾಗಿದ್ದ.
ಇದನ್ನೂ ಓದಿ:ಸೈಕಲ್​ ಕವಿ ಎಂದೇ ಪ್ರಸಿದ್ಧರಾದ ಆಶುಕವಿ ಐರಸಂಗ ಇನ್ನಿಲ್ಲ
ಎಂಟು ಮಂದಿ ಪೊಲೀಸರು ಬಂಧನಕ್ಕೆ ಹೋಗುತ್ತಿರುವ ವಿಷಯ ದುಬೆಗೆ ಹೇಗೆ ತಿಳಿದಿತ್ತು ಎಂಬ ಬಗ್ಗೆ ಮಾಹಿತಿ ಕಲೆ ಹಾಕಿದ ಸಂದರ್ಭದಲ್ಲಿ ಪೊಲೀಸ್​ ಇಲಾಖೆಯಲ್ಲಿ ಇದ್ದವರೇ ಆತನಿಗೆ ಸಹಾಯ ಮಾಡುತ್ತಿರುವ ಬಗ್ಗೆ ಸಂದೇಹ ಬಂದಿತ್ತು. ಈ ಬಗ್ಗೆ ಇನ್ನಷ್ಟು ವಿಚಾರಣೆ ನಡೆಸಿದಾಗ ಇದು ಸತ್ಯ ಎನ್ನುವುದು ಸಾಬೀತಾಗಿತ್ತು.
ಈ ಕುರಿತು ಖಚಿತ ಮಾಹಿತಿ ಪಡೆದಿದ್ದ ಎಸ್‌ಐಟಿ ತಂಡ ದುಬೆಗೆ ಸಹಕರಿಸುತ್ತಿರುವ ಪೊಲೀಸ್​ ಅಧಿಕಾರಿಗಳ ವಿರುದ್ಧ ನವೆಂಬರ್ 5 ರಂದು ಉತ್ತರಪ್ರದೇಶ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.
ವರದಿಯಲ್ಲಿ ಐಪಿಎಸ್ ಅಧಿಕಾರಿಯೊಬ್ಬರ ಹೆಸರನ್ನು ದಾಖಲಿಸಿದ್ದ ಎಸ್‌ಐಟಿ ಗ್ಯಾಂಗ್’ಸ್ಟರ್’ಗೆ ನೆರವು ನೀಡಿರುವುದಾಗಿ ತಿಳಿಸಿತ್ತು. ಇದರಂತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಉತ್ತರಪ್ರದೇಶ ಸರ್ಕಾರವು ಅಧಿಕಾರಿಯನ್ನು ಅಮಾನತುಗೊಳಿಸಿದೆ.
ಐಪಿಎಲ್​ ಕ್ರಿಕೆಟ್​ ಬೆಟ್ಟಿಂಗ್​ ಸುಳಿಯಲ್ಲಿ ಶಾಸಕರ ಪತ್ನಿ!

ಗಗನಯಾತ್ರಿಗಳು ಆಕಾಶದಲ್ಲಿ ತಲೆಸ್ನಾನ ಮಾಡೋದು ಹೀಗೆ ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 7 =
Remember me
