ನವದೆಹಲಿ:ಧಾರ್ಮಿಕ ಬೋಧಕನೊಬ್ಬನ ಪಾದವನ್ನು ಮುಟ್ಟಲು ಬಂದ ವ್ಯಕ್ತಿಗೆ ಸಾಕು… ಸಾಕು. ಸಾಕು… ನನ್ನ ಮುಟ್ಟಬೇಡ… ನೀನು ಅಸ್ಪ್ರಶ್ಯ ಎಂದಿರುವ ವಿಡಿಯೋ ಒಂದು ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಅದೀಗ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಈ ವಿಡಿಯೋದಲ್ಲಿ ಹೀಗೆ ಹೇಳಿದವರು ಪಂಡಿತ್‌ ಧೀರೇಂದ್ರ ಕೃಷ್ಣ ಶಾಸ್ತ್ರಿ ಎಂದು ಹೇಳಲಾಗುತ್ತಿದೆ. ಬೋಧನೆ ಮಾಡುತ್ತಿರುವ ಸಂದರ್ಭದಲ್ಲಿ ಹಳ್ಳಿಯ ವ್ಯಕ್ತಿಯೊಬ್ಬ ಅವರ ಬಳಿ ಬಂದಿದ್ದಾರೆ. ಬಂದಾಗ ಶಾಸ್ತ್ರಿಯವರು ಬನ್ನಿ ಬನ್ನಿ ಎಂದಿದ್ದಾರೆ. ಆ ವ್ಯಕ್ತಿ ಅವರ ಪಾದಕ್ಕೆ ನಮಸ್ಕರಿಸಲು ಹೋದಾಗ ಕಾಲನ್ನು ಹಿಂದಕ್ಕೆ ಎಳೆದುಕೊಂಡು ಮುಟ್ಟಬೇಡಿ, ನೀವು ಅಸ್ಪ್ರಶ್ಯರು ಎಂದಿದ್ದಾರೆ. ಇದರ ವಿರುದ್ಧ ಬಹಳ ಆಕ್ರೋಶ ವ್ಯಕ್ತವಾಗಿದ್ದು, ಶಾಸ್ತ್ರಿಯವರ ವಿರುದ್ಧ ಎಫ್‌ಐಆರ್‌ ದಾಖಲು ಮಾಡುವಂತೆ ಒತ್ತಾಯ ಕೇಳಿಬರುತ್ತಿದೆ.
#ArrestDhirendraShastri ಎಂದು ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿದೆ ಹ್ಯಾಷ್‌ಟ್ಯಾಗ್‌.
ಇಲ್ಲಿದೆ ನೋಡಿ ವಿಡಿಯೋ:
https://twitter.com/VOYItTeam/status/1529788465025454080
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
