ಮೊದಲೆಲ್ಲಾಮದುವೆಯ ದಿನಗಳಷ್ಟೇ ಫೋಟೋ ಹೊಡೆಸಿಕೊಳ್ಳುತ್ತಿದ್ದರು. ಆದರೆ ಪ್ರೀವೆಡ್ಡಿಂಗ್‌, ಪೋಸ್ಟ್‌ ವೆಡ್ಡಿಂಗ್‌ ಫೋಟೋ ಶೂಟ್‌ಗಳು ಕೆಲ ವರ್ಷಗಳಿಂದ ಭಾರಿ ಟ್ರೆಂಡ್‌ ಆಗಿವೆ. ಮದುವೆಯ ದಿನಗಿಂತಲೂ ಹೆಚ್ಚಾಗಿ ಮದುವೆಯ ಮುನ್ನ ಈ ಜೋಡಿಗಳ ಫೋಟೋ ಹೊಡೆಸಿಕೊಳ್ಳುವುದು, ಬೇರೆ ಬೇರೆ ಸ್ಥಳಗಳಿಗೆ ಹೋಗಿ ವಿವಿಧ ಭಂಗಿಗಳಲ್ಲಿ ಫೋಟೋ ಹೊಡೆಸಿಕೊಳ್ಳುವುದು ಇದೀಗ ಮಾಮೂಲಾಗಿಬಿಟ್ಟಿದೆ.
ಈ ರೀತಿ ಫೋಟೋಶೂಟ್‌ ಮಾಡಿಸಿಕೊಳ್ಳುವಾಗ ನಡೆದಿರುವ ಎಡವಟ್ಟುಗಳು ಅದೆಷ್ಟೋ. ಅಂಥದ್ದೇ ಒಂದು ವಿಡಿಯೋ ಇದೀಗ ಭಾರಿ ವೈರಲ್‌ ಆಗಿದೆ. ಅದೇನೆಂದರೆ, ವಧು ಫೋಟೋಶೂಟ್ ಮಾಡಿಸಲು ನದಿ ಬಳಿ ತೆರಳಿದ್ದಾಳೆ. ನದಿಯ ಬಳಿ ಇರುವ ಉಯ್ಯಾಲೆಯಲ್ಲಿ ಕುಳಿತು ಫೋಟೋಶೂಟ್‌ ಮಾಡಿಸಿಕೊಳ್ಳುವ ಪ್ಲ್ಯಾನ್ ಇತ್ತು. ಅದರಂತೆಯೇ ಫೋಟೋಶೂಟ್‌ಗೆ ಉಯ್ಯಾಲೆ ಮೇಲೆ ಆಕೆ ಕುಳಿತಿದ್ದಾಳೆ. ಹಿಂದಿನಿಂದ ಓರ್ವ ಉಯ್ಯಾಲೆ ತೂಗುತ್ತಾನೆ. ಇದರ ವಿಡಿಯೋ ಮಾಡಲಾಗುತ್ತಿತ್ತು. ಆದರೆ ದುರದೃಷ್ಟವಶಾತ್‌ ಉಯ್ಯಾಲೆಯ ಹಗ್ಗ ತುಂಡಾಗಿ ವಧು ನೀರಿನಲ್ಲಿ ಬಿದ್ದಿದ್ದಾಳೆ.
ಆದರೆ ಅದೃಷ್ಟಕ್ಕೆ ಅವಳಿಗೆ ಈಜು ಬರುತ್ತಿದ್ದುದರಿಂದ ನಗುತ್ತಾ ಈಜಿಕೊಂಡು ದಡ ಸೇರಿದ್ದಾಳೆ. ಪಂಜಾಬ್ ಇಂಡಸ್ಟ್ರಿ ಹೆಸರಿನ ಇನ್ ಸ್ಟಗ್ರಾಂ ಖಾತೆಯಲ್ಲಿ ಈ ವಿಡಿಯೋ ಅಪ್‌ಲೋಡ್‌ ಆಗಿದ್ದು, ಭಾರಿ ವೈರಲ್‌ ಆಗಿದೆ.ಅಂದಹಾಗೆ ಕೆಲ ತಿಂಗಳ ಹಿಂದೆ ಕೇರಳದ ಜೋಡಿಯೊಂದು ತೆಪ್ಪದಲ್ಲಿ ಫೋಟೋಶೂಟ್ ಮಾಡಿಸಲು ಹೋಗಿ ತೆಪ್ಪ ಮಗುಚಿ ಇಬ್ಬರೂ ಪ್ರಾಣ ಕಳೆದುಕೊಂಡಿರುವ ದುರ್ಘಟನೆಯೂ ನಡೆದಿತ್ತು.


A post shared by punjabi industry (@punjabi_industry__)

ರಾಜಕೀಯಕ್ಕೆ ಎಂಟ್ರಿ ಕೊಟ್ಟ ಸೋನುಸೂದ್‌ ತಂಗಿ: ಪಂಜಾಬ್‌ನಿಂದ ಸ್ಪರ್ಧೆ- ಪಕ್ಷವಿನ್ನೂ ಸಸ್ಪೆನ್ಸ್‌

‘ಅರೆರೆ… ಕೈಗೆ ಇದೇನಾಯ್ತು?’ ಅಭಿಮಾನಿಗಳ ಪ್ರಶ್ನೆಗಳಿಗೆ ನಟಿ ರಶ್ಮಿಕಾ ಉತ್ತರಿಸಿದ್ದಾರೆ ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 4 =
Remember me
