ನವದೆಹಲಿ:ಗುಟ್ಕಾಪ್ರಿಯ ಗಂಡ ತನ್ನ ಮದುವೆಯ ದಿನವೂ ಗುಟ್ಕಾ ತಿಂದು ಮದುವೆ ಮನೆಯಲ್ಲಿಯೇ ಮದುಮಗಳ ಕೈಯಿಂದ ಕೆನ್ನೆಗೆ ಬಾರಿಸಿಕೊಂಡಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ.
ಕೆಲ ತಿಂಗಳ ಹಿಂದೆ ನಡೆದಿರುವ ಈ ಮದುವೆ ವಿಡಿಯೋ ಈಗ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಹಲವರು ಇದನ್ನು ನಗೆಗಡಲಿನಲ್ಲಿ ತೇಲಿಸಿದೆ. ಆದರೆ ಕೆಲವರು ಮಾತ್ರ ಮದುಮಗಳ ಈ ವರ್ತನೆಗೆ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೋದಲ್ಲಿ ವಧು-ವರರಿಬ್ಬರು ಮದುವೆ ಮಂಟಪದಲ್ಲಿ ಕುಳಿತಿರುವುದನ್ನು ನೋಡಬಹುದು. ಆಗ ಗುಟ್ಕಾಪ್ರಿಯ ವರ ಗುಟ್ಕಾ ಅಗಿಯಲು ಶುರುಮಾಡುತ್ತಾನೆ. ಇದು ಗೊತ್ತಾಗುತ್ತಲೇ ವಧು ಸಿಕ್ಕಾಪಟ್ಟೆ ಸಿಟ್ಟಿಗೇಳುತ್ತಾಳೆ. ಮದುಮಗನಿಗೆ ಬೈಯಲು ಶುರು ಮಾಡುತ್ತಾಳೆ. ಇದನ್ನು ನೋಡಿದ ವರನ ಸ್ನೇಹಿತ ಮಧ್ಯೆ ಪ್ರವೇಶಿಸಿದಾಗ ಆತನ ಮೇಲೆ ವಧು ಹರಿಹಾಯ್ದು ಆತನಿಗೆ ಹೊಡೆಯುತ್ತಾಳೆ. ಬಳಿಕ ಮದುವೆಯಲ್ಲಿಯೂ ಗುಟ್ಕಾ ಸೇವಿಸುತ್ತಿಯಾ ಎಂದು ಸಿಟ್ಟಿನಲ್ಲಿ ವರನನ್ನು ತಳ್ಳಿ ನಂತರ ಕಪಾಳಕ್ಕೆ ಹೊಡೆಯುತ್ತಾಳೆ.
ಕೂಡಲೇ ಗುಟ್ಕಾ ಉಗಿಯುವಂತೆ ಹೇಳುತ್ತಾಳೆ. ನಂತರ ವಧುವಿನ ಕೋಪಕ್ಕೆ ಹೆದರಿ ವರ ಗುಟ್ಕಾ ಉಗುಳುತ್ತಾನೆ. ಇವಿಷ್ಟು ವಿಡಿಯೋದಲ್ಲಿ ನೋಡಬಹುದಾಗಿದೆ.
ಈ ವಿಡಿಯೋ ನೋಡಿ:


A post shared by Niranjan Mahapatra (@official_viralclips)

VIDEO: ಸೀರೆ ಉಟ್ಟಿದ್ದೀರಿ, ನಿಮ್ಮಂಥವರಿಗೆ ಪ್ರವೇಶವಿಲ್ಲ- ದೆಹಲಿ ಹೋಟೆಲ್‌ ಸಿಬ್ಬಂದಿ ಧಮ್ಕಿ!

ಮಗಳ ಸಾವಿಗೆ ಅಳಿಯನ ಖಾಸಗಿ ಅಂಗ ಕಾರಣ ಎಂದು ತಂದೆಯ ದೂರು: ಗಾತ್ರ ಪರೀಕ್ಷಿಸಿದ ಪೊಲೀಸರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 16 =
Remember me
