
ಡರ್ಬನ್‌ (ದಕ್ಷಿಣ ಆಫ್ರಿಕಾ):ಯುವತಿಯರು ಕನ್ಯೆಯರಾಗಿಯೇ ಉಳಿದಿದ್ದಾರೋ ಅಥವಾ ಇಲ್ಲವೋ ಎಂದು ನೋಡುವ ಸಲುವಾಗಿ ಕನ್ಯತ್ವ ಪರೀಕ್ಷೆ ನಡೆಯುತ್ತಿದ್ದು, ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿರುವ ನಜರೆತ್ ಬ್ಯಾಪ್ಟಿಸ್ಟ್ ಚರ್ಚ್​ನಲ್ಲಿ ಯುವತಿಯರ ಕನ್ಯತ್ವ ಪರೀಕ್ಷೆ ನಡೆಸಲಾಗುತ್ತಿದೆ. ಇದರಲ್ಲಿ ಯಶಸ್ವಿಯಾಗಿ ಉತ್ತೀರ್ಣರಾದ ನಂತರ ಕನ್ಯತ್ವ ಪ್ರಮಾಣಪತ್ರಗಳನ್ನು ನೀಡಲಾಗುತ್ತಿದೆ.
ಇದರ ಬಗ್ಗೆ ಜಾಲತಾಣದಲ್ಲಿ ವ್ಯಾಪಕ ಚರ್ಚೆ ಶುರುವಾಗಿದೆ. ಕೆಲವೊಂದು ಯುವತಿಯರು ಕನ್ಯತ್ವ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಕುರಿತು ಖುಷಿಯಿಂದ ಫೋಟೋಗಳನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದು, ಹಲವರು ಇದನ್ನು ನೋಡಿ ನೆಟ್ಟಿಗರು ಶಾಕ್​ ಆಗಿದ್ದಾರೆ.
ಡರ್ಬನ್‌ನಲ್ಲಿರುವ ನಜರೆತ್ ಬ್ಯಾಪ್ಟಿಸ್ಟ್ ಚರ್ಚ್​, 1910ರಲ್ಲಿ ಸ್ಥಾಪಿಸಲಾಯಿತು. ಇದು ದಕ್ಷಿಣ ಆಫ್ರಿಕಾದಲ್ಲಿ ಎರಡನೇ ಅತಿದೊಡ್ಡ ಚರ್ಚ್ ಆಗಿದೆ. ಇಲ್ಲಿ ಕನ್ಯತ್ವ ಪರೀಕ್ಷೆಯನ್ನು ಇತ್ತೀಚೆಗೆ ನಡೆಸಲಾಗಿತ್ತು. ಇದರ ಬಗ್ಗೆ ಕಾರಣ ಕೇಳಿದಾಗ, ಚರ್ಚ್​ ಮುಖಂಡರು ಹೇಳಿದ್ದು ಏನೆಂದರೆ, ಇದನ್ನು ಪ್ರತಿವರ್ಷವೂ ನಡೆಸಲಾಗುತ್ತದೆ. ಮಹಿಳೆಯರಲ್ಲಿ ಪರಿಶುದ್ಧತೆಯನ್ನು ಉತ್ತೇಜಿಸುವ ಪ್ರಯತ್ನ ಇದು ಎಂದಿದ್ದಾರೆ!
ಚರ್ಚ್ ನಡೆಸಿದ ಕನ್ಯತ್ವ ಪರೀಕ್ಷೆಯಲ್ಲಿ ಭಾಗವಹಿಸಿದವರು ಚರ್ಚ್‌ಗೆ ಹಾಜರಾಗುವ 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಯುವತಿಯರು ಎನ್ನಲಾಗಿದೆ. ಹುಡುಗಿಯರು, ಯುವತಿಯರಿಗೆ ಕನ್ಯತ್ವದ ಪ್ರಮಾಣ ಪತ್ರ ನೀಡಿದ ಮೇಲೆ ಅವರು ಪರಿಶುದ್ಧರು ಎಂದು ಸೂಚಿಸಲು ಹಣೆಯ ಮೇಲೆ ಬಿಳಿ ಗಂಧವನ್ನೂ ಹಚ್ಚಲಾಗಿದೆ.
ಈ ಪರೀಕ್ಷೆಯನ್ನು ಹೇಗೆ ಮಾಡಲಾಗುತ್ತಿದೆ ಎಂಬ ಬಗ್ಗೆ ಎಲ್ಲಿಯೂ ಮಾಹಿತಿ ಇಲ್ಲ. ಈ ಕನ್ಯತ್ವ ಪರೀಕ್ಷೆಯ ವಿಷಯ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕನ್ಯತ್ವದ ಹೆಸರಿನಲ್ಲಿ ಇದೊಂದು ಅತ್ಯಂತ ಕೆಟ್ಟ ಸಂಪ್ರದಾಯ, ಇದು ನಾಚಿಕೆಗೇಡಿನ ವಿಷಯ ಎಂದು ಹಲವರು ಕಮೆಂಟ್​ ಮಾಡಿದ್ದಾರೆ. ಮಹಿಳೆಯರಿಗೆ ಮಾತ್ರ ಈ ಪರೀಕ್ಷೆ ಏಕೆ, ಪುರುಷರು ಪರಿಶುದ್ಧರಾಗಿ ಇಲ್ಲದಿದ್ದರೂ ನಡೆಯುತ್ತದೆಯೇ ಎಂದು ಇನ್ನಷ್ಟು ಮಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Unbelievable. Church in South Africa gives its female members "Virginity Certificates" after these women pass a "Virginity Test."Miles to go before we rest…https://t.co/MbbZRDhVlg— Tarek Fatah (@TarekFatah)July 18, 2022
Unbelievable. Church in South Africa gives its female members "Virginity Certificates" after these women pass a "Virginity Test."Miles to go before we rest…https://t.co/MbbZRDhVlg
ನಿಮ್ಮ ಎಕ್ಸ್​ಗಳ ಜತೆ ಮಂಚಕ್ಕೆ ಹೋಗುವಿರಾ ಎಂದು ನಟಿಯರನ್ನು ಪ್ರಶ್ನಿಸಿದ ಕರಣ್​: ಸಾರಾ-ಜಾಹ್ನವಿ ಉತ್ತರ ಹೀಗಿತ್ತು!
VIDEO: ಭೂತ, ಪಿಶಾಚಿ, ಪ್ರೇತಾತ್ಮ ಇದೆ ಎಂದು ನಂಬದವರನ್ನೂ ಬೆಚ್ಚಿಬೀಳಿಸೋ ದೃಶ್ಯ ಸಿಸಿಟಿವಿಯಲ್ಲಿ ಸೆರೆ!
ಭಾರತಕ್ಕೂ ಮತ್ತೊಂದು ಗಂಡಾಂತರ? ಮುನ್ನೆಲೆಗೆ ಬಂದ ಅತೀಂದ್ರಿಯ ಭವಿಷ್ಯಗಾರ್ತಿ ಬಾಬಾ ವಂಗಾ ವಾಣಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − eleven =
Remember me
