ವಾರಾಣಸಿ (ಉತ್ತರ ಪ್ರದೇಶ):ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಮಹಾರಾಷ್ಡ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಧ್ವಜಾರೋಹಣ ನಡೆಸಿ ಭಾಷಣ ಮಾಡುತ್ತಿದ್ದ ವೇಳೆ ಸ್ವಾತಂತ್ರ್ಯ ಲಭಿಸಿದ ವರ್ಷವನ್ನು ಪಕ್ಕದವರಿಂದ ಕೇಳಿ ತಿಳಿದುಕೊಂಡು ಹೇಳಿದ್ದರು. ಇದನ್ನು ಉಲ್ಲೇಖಿಸಿ ರಾಣೆ ಅವರು, ನಾನಾಗಿದ್ದರೆ ಉದ್ಧವ್ ಠಾಕ್ರೆ ಅವರ ಕಪಾಳಕ್ಕೆ ಬಾರಿಸುತ್ತಿದ್ದೆ ಎಂದು ನೀಡಿರುವ ಹೇಳಿಕೆ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ರಾಣೆ ಅವರ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ಸದ್ಯ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.ಆದರೆ ಇದರ ಬೆನ್ನಲ್ಲೇ, ಇದೀಗ ರಾಣೆ ವಿರುದ್ಧ ವಿಶ್ವ ಹಿಂದೂ ಸೇನಾದ ರಾಷ್ಟ್ರೀಯ ಅಧ್ಯಕ್ಷ ಅರುಣ್‌ ಪಾಠಕ್‌ ನೀಡಿರುವ ಹೇಳಿಕೆಯೊಂದು ಮತ್ತೊಂದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಅದೇನೆಂದರೆ ಸಚಿವ ನಾರಾಯಣ್‌ ರಾಣೆ ಅವರ ತಲೆಯನ್ನು ಕಡಿದರೆ 51 ಲಕ್ಷ ರೂ. ಬಹುಮಾನ ಕೊಡುವುದಾಗಿ ಪಾಠಕ್‌ ಘೋಷಿಸಿದ್ದಾರೆ.ನಿಮಗೆ ಭರವಸೆ ನೀಡುತ್ತೇನೆ ನಾರಾಯಣ್ ರಾಣೆ, ನಿಮ್ಮ ಮರಣದ ನಂತರ ಚಿತಾಭಸ್ಮವನ್ನು ಕಾಶಿಯಲ್ಲಿ ಬಿಡಲು ಅವಕಾಶ ನೀಡುವುದಿಲ್ಲ. ನಿಮ್ಮ ಆತ್ಮವು ಶತಮಾನಗಳ ಕಾಲ ಅಲೆದಾಡುತ್ತಲೇ ಇರಬೇಕು ಎಂದು ಪಾಠಕ್ ಟ್ವೀಟ್ ಮಾಡಿದ್ದಾರೆ.ಬಾಳಾಸಾಹೇಬ್​ ಅವರು ಶಿವ ಸೇನಾವನ್ನು ಕಟ್ಟಿದ್ದು, ಅವರ ಪುತ್ರ ಉದ್ಧವ್‌ ಠಾಕ್ರೆ ಇದೀಗ ಮುಖ್ಯಮಂತ್ರಿಯಾಗಿದ್ದಾರೆ. ಅಗ್ಗದ ಜನಪ್ರಿಯತೆಗಾಗಿ ಪಿಕ್ ಪಾಕೆಟ್ ಹಾಗೂ ಟಿಕೆಟ್ಮಾರಾಟಗಾರನು ಬಾಳಾಸಾಹೇಬರ ಪುತ್ರನ ಬಗ್ಗೆ ಮಾತನಾಡುತ್ತಿದ್ದಾರೆ. ತನ್ನ ಮಿತಿಗಳನ್ನು ದಾಟಿದ್ದಾರೆ. ಇವರ ತಲೆ ಕಡಿದರೆ 51 ಲಕ್ಷ ರೂ. ನೀಡುವೆ ಎಂದಿದ್ದಾರೆ.ಈ ಹಿಂದೆಯೂ ಅರುಣ್‌ ಪಾಠಕ್‌ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದರು.

मैं तुझसे वादा करता हूँ अहसान फरामोश नारायण राणे की तेरे मरने के बाद काशी में तेरी अस्थियां विसर्जित नहीं करने दूंगा और तेरी आत्मा सदियों तक भटकते रहेंगी@Jansatta@NarayanRane@BJP4India@ShivSena@OfficeofUT@TV9Marathi@TheWireMarathi@SakalMediaNews@Maharashtratim1— Arun Pathak (@Arunpathak_In)August 24, 2021
मैं तुझसे वादा करता हूँ अहसान फरामोश नारायण राणे की तेरे मरने के बाद काशी में तेरी अस्थियां विसर्जित नहीं करने दूंगा और तेरी आत्मा सदियों तक भटकते रहेंगी@Jansatta@NarayanRane@BJP4India@ShivSena@OfficeofUT@TV9Marathi@TheWireMarathi@SakalMediaNews@Maharashtratim1
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 10 =
Remember me
