ನವದೆಹಲಿ:ಇದೀಗ ಸಾಮಾಜಿಕ ಜಾಲತಾಣದಲ್ಲಿ ಕುತೂಹಲ ಎನಿಸುವಂಥ ಕೆಲವೊಂದು ವಿಷಯಗಳ ವೈರಲ್‌ ಆಗುತ್ತಲೇ ಇರುತ್ತವೆ. ಇದೀಗ ವರ ಬೇಕಾಗಿದ್ದಾನೆ ಎನ್ನುವ ಜಾಹೀರಾತು ವೈರಲ್‌ ಆಗಿದೆ.
ಇದರಲ್ಲಿ ಏನಿದೆ ಎಂದರೆ, ಉತ್ತಮ ಶರೀರ ಹೊಂದಿರುವ ಹಾಗೂ ಏಕೈಕ ಪುತ್ರನಾಗಿರುವವನು ನನಗೆ ಬೇಕು. ಬಹು ಮಹತ್ವದ್ದು ಎಂದರೆ ಆತ ಅಡುಗೆ ಮಾಡುವವನಾಗಿರಬೇಕು. ನಾನು ಸ್ತ್ರೀವಾದಿ, ನನಗೆ ಷಾರ್ಟ್‌ ಹೇರ್‌ ಇದೆ. ವಿದ್ಯಾವಂತೆ, ಬಂಡವಾಳಶಾಹಿ ವಿರೋಧಿಯಾಗಿದ್ದೇನೆ. ಉದ್ಯೋಗಸ್ಥೆ ಆಗಿರುವ 30 ವರ್ಷದ ನನಗೆ ಸುಂದರವಾದ ಸದೃಢ ದೇಹ ಹೊಂದಿರುವ 25-28 ವರ್ಷದ ವರ ಬೇಕು ಎಂದು ಜಾಹೀರಾತಿನಲ್ಲಿ ಇದೆ.
ಅಷ್ಟೇ ಅಲ್ಲದೇ, ಬಂಗಲೆ ಇರಬೇಕು, ಕನಿಷ್ಠ 20 ಎಕರೆ ಫಾರ್ಮ್ ಹೌಸ್ ಹೊಂದಿರಬೇಕು. ಆಸಕ್ತಿ ಹೊಂದಿರುವವರು ಸಂಪರ್ಕಿಸಿ ಎಂದು ಇದರಲ್ಲಿ ಇದ್ದು, ಪತ್ರಿಕೆಯೊಂದರ ವಧು-ವರ ಬೇಕಾಗಿದ್ದಾರೆ ಎನ್ನುವ ಕಾಲಂನಲ್ಲಿ ಪ್ರಕಟವಾಗಿದೆ.ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಪತ್ರಿಕೆಯಲ್ಲಿ ಜಾಹೀರಾತು ಪ್ರಕಟವಾಗಿರುವುದಂತೂ ನಿಜ. ಅದಕ್ಕಾಗಿ 13 ಸಾವಿರ ರೂಪಾಯಿ ನೀಡಿರುವುದೂ ನಿಜ. ಆದರೆ ಇದನ್ನು ತಮಾಷೆಗೆ ನೀಡಲಾಗಿದೆಯೋ ಅಥವಾ ನಿಜವಾಗಿಯೋ ಎನ್ನುವುದು ಗೊತ್ತಾಗಿಲ್ಲ. ಸಾಕ್ಷಿ ಎಂಬ ಯುವತಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಆಕೆಯ ಸಹೋದರ ಸ್ನೇಹಿತರೊಂದಿಗೆ ಸೇರಿ ಈ ವ್ಯಂಗ್ಯದ ಜಾಹೀರಾತು ನೀಡಿದ್ದಾರೆ. ಈ ಜಾಹೀರಾತು ನೀಡಲು 13 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ತಿಳಿದುಬಂದಿದ್ದು, ಇದರ ಬಗ್ಗೆ ಇನ್ನೂ ತಿಳಿಯಬೇಕಿದೆಯಷ್ಟೇ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 20 =
Remember me
