ತಿರುವನಂತಪುರ:ಶಾಲೆಗೆ ರಜೆ ಯಾವಾಗ ಸಿಗುತ್ತದೆ ಎಂದು ಕಾಯುವುದು ಸಹಜ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಕೇರಳದ ವಿದ್ಯಾರ್ಥಿನಿಯೊಬ್ಬಳು ಜಿಲ್ಲಾಧಿಕಾರಿಗೆ ಪತ್ರ ಬರೆದು ದಯವಿಟ್ಟು ರಜೆ ಕೊಡಬೇಡಿ. ರಜೆಯಲ್ಲಿ ಎಲ್ಲ ಮಕ್ಕಳೂ ಖುಷಿಯಾಗಿರುವುದಿಲ್ಲ ಎಂದು ಹೇಳಿಕೊಂಡಿದ್ದಾಳೆ.
ಸಫೂರಾ ನೌಷದ್‌ ಎಂದು ನನ್ನ ಹೆಸರು. ನಾನು 6ನೇ ತರಗತಿ ವಿದ್ಯಾರ್ಥಿನಿ ಎಂದಿರುವ ಬಾಲಕಿ, ಈ ರೀತಿ ಪತ್ರ ಬರೆದು ಖುದ್ದು ಜಿಲ್ಲಾಧಿಕಾರಿಗಳಿಗೆ ಅಚ್ಚರಿ ಮೂಡಿಸಿದ್ದಾಳೆ. ವಯನಾಡಿನ ಜಿಲ್ಲಾಧಿಕಾರಿ ಎ.ಗೀತಾ ಅವರಿಗೆ ಇ-ಮೇಲ್ ಮೂಲಕ ಬುಧವಾರ ರಜೆ ಘೋಷಿಸದಂತೆ ಮನವಿ ಮಾಡಿದ್ದಾಳೆ.
ವಾರಾಂತ್ಯದ ರಜೆಯ ನಂತರ, ತೀವ್ರ ಮಳೆಯಿಂದಾಗಿ ಜಿಲ್ಲಾಡಳಿತ ಸ್ಥಳೀಯ ರಜೆ ಘೋಷಿಸಿದ್ದರಿಂದ ಸೋಮವಾರವೂ ಈ ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆಗಳು ತೆರೆದಿರಲಿಲ್ಲ. ಮೊಹರಂ ನಿಮಿತ್ತ ರಾಜ್ಯ ಸರ್ಕಾರ ಈಗಾಗಲೇ ಮಂಗಳವಾರ ರಜೆ ಘೋಷಿಸಿರುವುದರಿಂದ, ವಯನಾಡಿನಲ್ಲಿ ಸತತ ನಾಲ್ಕು ದಿನಗಳ ಕಾಲ ಶಾಲೆಗಳು ಮುಚ್ಚಿವೆ. ಇದರಿಂದ ಬೇಸರಗೊಂಡಿರುವ ಬಾಲಕಿ, ʻಸತತ ನಾಲ್ಕು ದಿನ ಮನೆಯಲ್ಲಿರುವುದು ನಿಜಕ್ಕೂ ಕಷ್ಟ. ದಯವಿಟ್ಟು ಬುಧವಾರದಂದು ತರಗತಿ ನಡೆಸಲು ಅನುಮತಿ ನೀಡಿʼ ಎಂದು ಇ-ಮೇಲ್‌ನಲ್ಲಿ ತಿಳಿಸಿದ್ದಾಳೆ.
ಇದನ್ನು ಜಿಲ್ಲಾಧಿಕಾರಿ ಎ.ಗೀತಾ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡು ವಿದ್ಯಾರ್ಥಿನಿಗೆ ಶಹಭಾಸ್​ ಎಂದಿದ್ದಾರೆ. ಆಕೆ ಬರೆದಿರುವ ಇ-ಮೇಲ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ. ವಿದ್ಯಾರ್ಥಿನಿಯನ್ನು ಪ್ರಶಂಸಿಸಿರುವ ಜಿಲ್ಲಾಧಿಕಾರಿ, ಈ ದೇಶ ಮತ್ತು ಪ್ರಪಂಚದ ಭವಿಷ್ಯವು ಅವರ ಕೈಯಲ್ಲಿ ಸುರಕ್ಷಿತವಾಗಿದೆ. ವಿದ್ಯಾರ್ಥಿಗಳು ಮಾತ್ರವಲ್ಲದೆ ಪೋಷಕರು, ಶಿಕ್ಷಕರು, ಸರ್ಕಾರ ಮತ್ತು ಸಮಾಜವು ಈ ಪೀಳಿಗೆಯ ಬಗ್ಗೆ ಹೆಮ್ಮೆಪಡಬೇಕು ಎಂದು ತಿಳಿಸಿದ್ದಾರೆ.(ಏಜೆನ್ಸೀಸ್​)
ತನ್ನದೇ ಮದ್ವೆಗೆ ಮದುಮಗಳು ಹೋಗಿದ್ದೇ ತಪ್ಪಾಗೋಯ್ತು! ಕೆಲ ಮುಸ್ಲಿಂ ಮುಖಂಡರ ಕಿಡಿ- ಕ್ಷಮೆಗೆ ಆಗ್ರಹ

ಅಮೆರಿಕ ಮಾಜಿ ಅಧ್ಯಕ್ಷ ಟ್ರಂಪ್​ಗೆ ಎಫ್​ಬಿಐ ಶಾಕ್​: ಮನೆಯ ಮೇಲೆ ಅಧಿಕಾರಿಗಳ ದಾಳಿ

ಕಡಿಮೆ ದರದ ಚೀನಾ ಫೋನ್​ಗಳಿಗೂ ಬಂತು ಕುತ್ತು? ಯಾವೆಲ್ಲಾ ಕಂಪೆನಿಗಳ ಮೇಲೆ ಪ್ರಭಾವ ಬೀರಬಹುದು ನೋಡಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
