ನ್ಯೂಯಾರ್ಕ್‌:ಕ್ರೈಸ್ತ ಸಮುದಾಯದಲ್ಲಿನ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಕೇಕ್‌ ಕತ್ತರಿಸುವುದು ಕಡ್ಡಾಯ. ಅದರಲ್ಲಿಯೂ ಮದುವೆಯ ದಿನ ಇದೊಂದು ಧಾರ್ಮಿಕ ಕಾರ್ಯದಂತೆ ನೆರವೇರಿಸಲಾಗುತ್ತದೆ. ಆದ್ದರಿಂದಲೇ ಮದುಮಕ್ಕಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಈ ಕೇಕ್‌ ಶೃಂಗಾರಗೊಳಿಸುತ್ತಾರೆ, ಅಂತಸ್ತಿಗೆ ತಕ್ಕಂತೆ ದುಬಾರಿ ಬೆಲೆ ಬಾಳುವ ಕೇಕ್‌ ರೆಡಿಯಾಗುತ್ತದೆ.
ಅದರಂತೆಯೇ ಅಮೆರಿಕದ ಕ್ರೈಸ್ತ ಜೋಡಿ ತಮ್ಮ ಮದುವೆಗೆ ತಯಾರು ಮಾಡಿಟ್ಟ ಕೇಕ್‌ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗುತ್ತಿದೆ. ಇದಕ್ಕೆ ಕಾರಣ, ಇದೇನು ದುಬಾರಿ ಕೇಕ್‌ ಎಂದೇನಲ್ಲ. ಬದಲಿಗೆ ಅಲ್ಲಿ ಆಗಿರುವ ಘಟನೆಯಿಂದ.
ಅಷ್ಟಕ್ಕೂ ಆಗಿದ್ದೇನೆಂದರೆ, ವಧು-ವರರು ತಮ್ಮ ಮದುವೆಗೆಂದು ಭಾರಿ ಗಾತ್ರದ ಕೇಕ್‌ ರೆಡಿ ಮಾಡಿಸಿದ್ದಾರೆ. ಅದ್ಧೂರಿಯಾಗಿ ಶೃಂಗಾರಗೊಂಡಿರುವ ಸಭೆಯಲ್ಲಿ ನೆಂಟರಿಷ್ಟರೆಲ್ಲಾ ಸೇರಿರುವಾಗ ಆ ಕೇಕ್‌ ಅನ್ನು ಕಟ್‌ ಮಾಡುವುದಕ್ಕಾಗಿ ಸಪ್ಲೈಯ್‌ ವಧು-ವರರ ಬಳಿ ಅದನ್ನು ತರುತ್ತಿದ್ದಾನೆ.ಅಷ್ಟರಲ್ಲಿಯೇ ಅದು ಜಾರಿ ನೆಲದ ಮೇಲೆ ಬಿದ್ದು ಚೆಲ್ಲಾಪಿಲ್ಲಿಯಾಗುತ್ತದೆ.
ಇದನ್ನು ಅಲ್ಲಿದ್ದವರೆಲ್ಲಾ ನೋಡಿ ಶಾಕ್‌ ಆಗುತ್ತಾರೆ. ಆದರೆ ಸಪ್ಲೈಯರ್‌ ಮಾತ್ರ ನಗುತ್ತಾನೆ. ಏಕೆಂದರೆ ಆತ ಇದನ್ನು ಮಾಡಿದ್ದು ತಮಾಷೆಗಾಗಿ. ಅಸಲಿಗೆ ಇದು ನಕಲಿ ಕೇಕ್‌, ಅಸಲಿ ಕೇಕ್‌ ಹಿಂದುಗಡೆಯಿಂದ ಮತ್ತೊಬ್ಬ ಸಪ್ಲೈಯರ್‌ ತಂದಾಗ ಎಲ್ಲರ ಮೊಗದಲ್ಲಿಯೂ ನಗುವಿನ ಅಲೆ.
ಈ ವಿಡಿಯೋ ಇನ್ಸ್‌ಟಾಗ್ರಾಮ್‌ನಲ್ಲಿ ಶೇರ್‌ ಆಗಿದ್ದು ಜನರು ಥಹರೇವಾರಿ ಕಮೆಂಟ್‌ ನೀಡುತ್ತಿದ್ದಾರೆ.ಇಲ್ಲಿದೆ ನೋಡಿ ವಿಡಿಯೋ:
A post shared by Proposal~Wedding~Engagement (@she_saidyes)

ಕನ್ಯೆ ನೋಡುವ ಖುಷಿಯಲ್ಲಿದ್ದ ಕಾನ್ಸ್‌ಟೆಬಲ್‌ ಜೀವ ಕಸಿದ ಜವರಾಯ! ಕನಸುಹೊತ್ತು ಮನೆಗೆ ತೆರಳುತ್ತಿದ್ದಾಗ ಅಪಘಾತ

ಸಿನಿಮೀಯ ರೀತಿಯಲ್ಲಿ ಬೆಂಗಳೂರಿನ ರೌಡಿಷೀಟರ್ ಎಸ್ಕೇಪ್‌: ಕೂದಲೆಳೆ ಅಂತರದಿಂದ ಪರಾರಿಯಾಗಿದ್ದೇ ರೋಚಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
