ಕೋಲ್ಕತಾ:ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ಪಕ್ಷವಾಗಿರುವ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಭರ್ಜರಿ ಮುನ್ನಡೆಯತ್ತ ಸಾಗಿದೆ.; 292 ಸ್ಥಾನಗಳ ಪೈಕಿ 187 ಸ್ಥಾನಗಳಲ್ಲಿ ಟಿಎಂಸಿ ಮುನ್ನಡೆ ಕಾಯ್ದುಕೊಂಡಿದ್ದರೆ, ಅದರ ಬದ್ಧ ವೈರಿ ಎನಿಸಿರುವ ಬಿಜೆಪಿ 85 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.
ಈ ಬಾರಿಯೂ ತಮ್ಮದೇ ಪಕ್ಷ ಅಧಿಕಾರಕ್ಕೆ ಬದಲಿದೆ ಎಂದು ಟಿಎಂಸಿ ಕಾರ್ಯಕರ್ತರು ವಿಜಯೋತ್ಸವ ಆಚರಿಸುತ್ತಿದ್ದರೆ, ತಮ್ಮ ಪಕ್ಷ ಮುಂದೆ ಸಾಗುತ್ತಿರುವುದಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರೂ ಹರ್ಷಿಸಿದ್ದಾರೆ. ಅದರೆ ಅವರ ಈ ಹರ್ಷ ಹೆಚ್ಚು ಹೊತ್ತು ಇರಲಾಗುತ್ತಿಲ್ಲ. ಏಕೆಂದರೆ ಖುದ್ದು ಇವರ ಖುರ್ಚಿ ಅಲ್ಲಾಡುವ ಹಂತಕ್ಕೆ ಬಂದಿದೆ.
ಬಲು ಪ್ರತಿಷ್ಠಿತ ಕ್ಷೇತ್ರ ಎನಿಸಿಕೊಂಡಿರುವ ನಂದಿಗ್ರಾಮದಿಂದ ಮಮತಾ ಕಣಕ್ಕಿಳಿದಿದ್ದು, ಇವರ ಪ್ರತಿಸ್ಪರ್ಧಿಯಾಗಿ, ಇವರದ್ದೇ ಸಂಪುಟದಲ್ಲಿದ್ದ ಇದೀಗ ಬಿಜೆಪಿ ಅಭ್ಯರ್ಥಿಯಾಗಿರುವ ಸುವೇಂದು ಅಧಿಕಾರಿ ಮುನ್ನಡೆ ಸಾಧಿಸಿದ್ದಾರೆ. ಇಲ್ಲಿಯವರೆಗಿನ ಎಣಿಕೆಯಲ್ಲಿ ಸುವೆಂದು ಅಧಿಕಾರಿಯವರು ಮಮತಾ ಅವರಿಗಿಂತ ಸುಮಾರು ಎಂಟು ಸಾವಿರ ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಆದರೆ ಕ್ಷಣಕ್ಷಣಕ್ಕೂ ನಂದಿಗ್ರಾಮ ಕುತೂಹಲದ ಕೇಂದ್ರವಾಗಿ ಪರಿಣಮಿಸಿದೆ. ಒಟ್ಟೂ ಎಂಟು ಹಂತಗಳಲ್ಲಿ ಇಲ್ಲಿ ಮತದಾನವಾಗಿದ್ದು, ಇನ್ನೂ ಅನೇಕ ಸುತ್ತುಗಳು ಬಾಕಿ ಇವೆ. ಆದ್ದರಿಂದ ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗುವ ಸಾಧ್ಯತೆ ಇದೆ.
ತಮಿಳುನಾಡಿನ ಅರವಕುರಿಚಿ ಕ್ಷೇತ್ರದಲ್ಲಿ ಕ್ಷಣಕ್ಷಣಕ್ಕೂ ಕುತೂಹಲ: ಅಣ್ಣಾಮಲೈ- ಎಲಂಗೋ ನಡುವೆ ಬಿಗ್‌ ಫೈಟ್‌

ತಮಿಳುನಾಡಲ್ಲಿ ಸೂರ್ಯೋದಯ? ಸಿಎಂ ಖುರ್ಚಿಯತ್ತ ಸ್ಟಾಲಿನ್‌- ಮ್ಯಾಜಿಕ್‌ ನಂಬರ್‌ ದಾಟಿದ ಡಿಎಂಕೆ

ಕೇರಳದ ಸಿಎಂ ಮೊಗದಲ್ಲಿ ಭಾರಿ ಹರ್ಷ: ಎಲ್‌ಡಿಎಫ್‌ ಮೈತ್ರಿಕೂಟ 78 ಕ್ಷೇತ್ರಗಳಲ್ಲಿ ದಾ‍ಪುಗಾಲು

ತಮಿಳುನಾಡು ಫೈಟ್‌: ಕೊಳತ್ತೂರಿನಲ್ಲಿ ಸ್ಟಾಲಿನ್‌ ಮುನ್ನಡೆ, ಕೊಯಮತ್ತೂರಿನಲ್ಲಿ ಕಮಲ್‌ ಹಾಸನ್‌ ಹಿನ್ನಡೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × five =
Remember me
