ನವದೆಹಲಿ:ನಿನಗೆಂಥ ಗಂಡ ಬೇಕಮ್ಮಾ ಅಂತ ಇಂದಿನ ಯುವತಿಯರನ್ನು ಪ್ರಶ್ನಿಸಿದ್ರೆ, ಗುಣವಂತ, ಶೀಲವಂತ, ರೂಪವಂತ… ಇವುಗಳಿಗಿಂದಲೂ ಮೊದಲು ಬರೋದು ಡಾಕ್ಟರ್​, ಇಂಜಿನಿಯರ್​ ಅಂತನೋ ಇಲ್ಲವೇ ಐಎಎಸ್​, ಐಪಿಸ್​ ಎಂದೋ. ಒಟ್ಟಿನಲ್ಲಿ ಶ್ರೀಮಂತನಾಗಿರಬೇಕು ಎನ್ನುವವರೇ ಹೆಚ್ಚಾಗಿದ್ದರೆ, ಬೆರಳೆಣಿಕೆ ಮಂದಿ ಮಾತ್ರ ಉಳಿದ ಉದ್ಯೋಗದ ವರನ ಕನಸು ಕಾಣುತ್ತಾರೆ ಎಂಬ ಮಾತಿದೆ. ಆದರೆ ಈಗ ಟ್ರೆಂಡ್​ ಹಾಗಿಲ್ವಂತೆ. ಇಂದಿನ ಹುಡುಗಿಯರು ಮ್ಯಾಟ್ರಿಮೋನಿ ಸೈಟ್​ಗಳಲ್ಲಿ ಸರ್ಚ್​ ಮಾಡ್ತಿರೋದೇ ಬೇರೆಯಂತೆ.
ಈ ಮಾಹಿತಿ ನೀಡಿದ್ದು, ಕೇಂದ್ರ ಇಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್. ಇವರು ಹೇಳಿರುವ ಪ್ರಕಾರ, ವೈವಾಹಿಕ ಮಾರುಕಟ್ಟೆಯಲ್ಲಿ, ನಾಗರಿಕ ಸೇವಕ ಅಥವಾ ಉನ್ನತ ಸಂಸ್ಥೆಯಿಂದ ಪದವೀಧರರಾಗಿರುವವರಿಗೆ ಹೆಚ್ಚಿನ ಮಾನ್ಯತೆಯಿರುತ್ತದೆ. ಆದರೆ ಅದು ಇನ್ನು ಮುಂದೆ ಹಾಗಲ್ಲ. ಮ್ಯಾಟ್ರಿಮೋನಿ ಸೈಟ್​ ಅದರಲ್ಲಿಯೂ ಹೆಚ್ಚಾಗಿ ಶಾದಿ ಡಾಟ್ ಕಾಮ್‌ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಕೀವರ್ಡ್ ಸ್ಟಾರ್ಟ್‌ಅಪ್ ಉದ್ಯೋಗಿ ಮತ್ತು ಸ್ಟಾರ್ಟ್‌ಅಪ್ ಸಂಸ್ಥಾಪಕರು ಎಂಬುದಂತೆ!
ಡಿಜಿಟಲ್ ಇಂಡಿಯಾ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವ ವೇಳೆ ಅವರು ಈ ವಿಷಯ ತಿಳಿಸಿದ್ದಾರೆ. ವೈವಾಹಿಕ ಸೈಟ್​ಗಳಲ್ಲಿ ಹೆಚ್ಚು ಹುಡುಕಲಾದ ಕೀವರ್ಡ್‌ಗಳ ಪಟ್ಟಿಯಲ್ಲಿ ಸ್ಟಾರ್ಟ್‌ಅಪ್ ಉದ್ಯೋಗಿ ಮತ್ತು ಸ್ಟಾರ್ಟ್‌ಅಪ್ ಸಂಸ್ಥಾಪಕರು ಪದಗಳು ಹೆಚ್ಚು ಅಗ್ರಸ್ಥಾನದಲ್ಲಿವೆ ಎಂದಿದ್ದಾರೆ ಸಚಿವರು. ಆದ್ದರಿಂದ ಹೆಚ್ಚು ಹೆಚ್ಚು ಸ್ಟಾರ್ಟ್​ ಅಪ್​ಗಳೊಂದಿಗೆ ಯುವಕರು ಮುಂದೆ ಬರಬೇಕಿದೆ. ಡಿಜಿಟಲ್​ ಕ್ರಾಂತಿಯನ್ನು ಹೆಚ್ಚಿಸಬೇಕಿದೆ ಎಂದು ಅವರು ಹೇಳಿದರು.
ಸಚಿವರು ತಮಾಷೆ ಮಾಡುತ್ತಿದ್ದಾರೆ ಎಂದು ಕೆಲವರು ಕಮೆಂಟ್ ಮಾಡಿದ್ದರೂ, ತಾವು ವಿಶ್ವಾಸಾರ್ಹ ಮೂಲಗಳಿಂದ ಇದನ್ನು ಹೇಳಿರುವುದಾಗಿ ಸಚಿವರು ಸ್ಪಷ್ಟನೆ ಕೊಟ್ಟಿದ್ದಾರೆ. (ಏಜೆನ್ಸೀಸ್​)
ಪ್ರಧಾನಿಯ ‘ಲೆಟರ್ಸ್​ ಟು ಸೆಲ್ಫ್’ ಕವನ ಸಂಕಲನ ಶೀಘ್ರ ಮಾರುಕಟ್ಟೆಗೆ: ಗುಜರಾತಿಯಿಂದ ಅನುವಾದವಾದ ಕೃತಿ

ಇಸ್ಲಾಮ್ ಕಲಿಸುವುದೂ ಪ್ರೀತಿಯನ್ನೇ, ಪಿಎಫ್​ಐ ಸಂಘಟನೆ ನಿಷೇಧವಾಗಲಿ: ಸೂಫಿ ಸಜ್ಜದ್​ನಶೀನ್​ ಸಮಿತಿ ನಿರ್ಣಯ

ಕಳ್ಳ-ಪೊಲೀಸ್​ ಆಡುತ್ತಾ ಗುಂಡು ಹಾರಿಸಿದ ಬಿಜೆಪಿ ಮುಖಂಡನ ಪುತ್ರ: ಪ್ರಾಣ ಬಿಟ್ಟ ನೆರೆಮನೆಯ ಬಾಲಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − twelve =
Remember me
