ನವದೆಹಲಿ:ವಾಟ್ಸ್‌ಆ್ಯಪ್‌ ಬಳಕೆ ಮಾಡುವುದಿದ್ದರೆ ಕಡ್ಡಾಯವಾಗಿ ಹೊಸ ಗೋಪ್ಯತಾ ನೀತಿಗೆ ಒಪ್ಪಿಕೊಳ್ಳಲೇಬೇಕು. ಇಲ್ಲದಿದ್ದರೆ ಹಂತಹಂತವಾಗಿ ವಾಟ್ಸ್‌ಆ್ಯಪ್‌ ಸೇವೆ ಕಳೆದುಹೋಗಲಿದೆ. ಇದಾಗಲೇ ಇದರ ಡೆಡ್‌ಲೈನ್‌ ಕೂಡ ಮುಗಿದಿದ್ದು, ಓಕೆ ಅನ್ನದವರು ಕ್ರಮೇಣ ಮೆಸೇಜ್‌, ವಿಡಿಯೋ ಸೌಲಭ್ಯವನ್ನು ಕಳೆದುಕೊಳ್ಳಲಿದ್ದಾರೆ.
ಈ ಕುರಿತು ಇದೀಗ ಕೇಂದ್ರದ ಮಾಹಿತಿ ತಂತ್ರಜ್ಞಾನ ಸಚಿವಾಲಯ ಆಕ್ರೋಶ ವ್ಯಕ್ತಪಡಿಸಿದ್ದು, ವಾಟ್ಸ್‌ಆ್ಯಪ್‌ ಸಂಸ್ಥೆಗೆ ನೋಟಿಸ್‌ ಜಾರಿ ಮಾಡಿದೆ. ಈ ಹೊಸ ಗೌಪ್ಯತಾ ನೀತಿಯನ್ನ ಹಿಂದಕ್ಕೆ ತೆಗೆದುಕೊಳ್ಳುವಂತೆ ಅದು ಸೂಚಿಸಿದ್ದು, ಈ ನೋಟಿಸ್‌ಗೆ ಪ್ರತಿಕ್ರಿಯಿಸಲು ಏಳು ದಿನಗಳ ಕಾಲಾವಕಾಶ ನೀಡಿದೆ.
ಕೆಲ ತಿಂಗಳ ಹಿಂದಷ್ಟೇ ವಾಟ್ಸ್‌ಆ್ಯಪ್‌ ಕೆಲವೊಂದು ಷರತ್ತುಗಳನ್ನು ವಿಧಿಸಿತ್ತು. ಇದನ್ನು ಅಕ್ಸೆಪ್ಟ್‌ ಮಾಡಿದರಷ್ಟೇ ಬಳಕೆ ಮಾಡಲು ಸಾಧ್ಯ ಎಂದಿತ್ತು. ಆದರೆ ಕೆಲವೊಂದು ಕಾರಣಗಳಿಂದ ಈ ಷರತ್ತು ವಿಧಿಸುವ ಪ್ರಕ್ರಿಯೆಯನ್ನು ಮುಂದೂಡಿತ್ತು. ಇದೀಗ ಮತ್ತೆ ಷರತ್ತುಗಳನ್ನು ಅನ್ವಯ ಮಾಡುವಂತೆ ಹೇಳಿದೆ. ವಾಟ್ಸ್‌ಆ್ಯಪ್‌ ಬೇಕೆಂದರೆ ನೂತನ ನೀತಿಯನ್ನು ಒಪ್ಪಿಕೊಳ್ಳಲೇಬೇಕಿದೆ.
ಭಾರತೀಯ ಬಳಕೆದಾರರ ಮೇಲೆ ಅನ್ಯಾಯದ ನಿಯಮಗಳು ಮತ್ತು ಷರತ್ತುಗಳನ್ನ ಹೇರಲು ವಾಟ್ಸ್‌ಆ್ಯಪ್‌ ಮುಂದಾಗಿರುವುದು ಅತ್ಯಂತ ಖೇದಕರ ಎಂದು ಸಚಿವಾಲಯ ನೋಟಿಸ್‌ನಲ್ಲಿ ಹೇಳಿದೆ.ಷರತ್ತು ಒಪ್ಪದಿದ್ದರೆ ಏನಾಗುತ್ತದೆ? ಒಂದು ವೇಳೆ ನೀವು ಒಪ್ಪದೇ ಅದರ ಬಳಕೆ ಮುಂದುವರಿಸಿದರೆ ಒಮ್ಮೆಲೇ ಖಾತೆ ಡಿಲೀಟ್‌ ಆಗುವುದಿಲ್ಲ. ಆದರೆ ಆರಂಭದಲ್ಲಿ ಧ್ವನಿ ಸಂದೇಶ ಹಾಗೂ ವಿಡಿಯೋ ಕಾಲ್‌ಗಳನ್ನು ಮಾಡಲು ಅವಕಾಶ ಮುಂದುವರೆಯುತ್ತದೆ. ಆದರೆ ಮೆಸೇಜ್‌ ನೋಡಲು ಸಾಧ್ಯವಾಗುವುದಿಲ್ಲ. ಬದಲಾಗಿ ನೋಟಿಫಿಕೇಶನ್‌ಗಳ ಮೂಲಕ ಮಾತ್ರ ಸಂದೇಶಗಳು ಕಾಣಿಸಲಿವೆ. ನೋಟಿಫಿಕೇಶನ್‌ನಲ್ಲಿರುವ ಮಿಸ್‌ ಕಾಲ್‌ ಅಥವಾ ವಿಡಿಯೋ ಕಾಲ್‌ಗಳಿಗೆ ಪ್ರತಿಕ್ರಿಯೆ ನೀಡಬಹುದಾಗಿದೆ. ಆದರೆ, ನೇರವಾಗಿ ಚಾಟ್‌ ಲೀಸ್ಟ್‌ ಬಳಸಲು ಸಾಧ್ಯವಾಗುವುದಿಲ್ಲ. ನಂತರ ಸಂದೇಶ ಕಳುಹಿಸುವ ಸೇವೆಯೂ ರದ್ದಾಗುತ್ತದೆ. ನಂತರ ಕಾಲ್‌ ಕೂಡ ಸಾಧ್ಯವಾಗುವುದಿಲ್ಲ.
ಒಂದು ವೇಳೆ ಈಗಾಗಲೇ ನೂತನ ನೀತಿಯನ್ನು ಒಪ್ಪಿದ್ದರೆ, ಗ್ರಾಹಕರಿಗೆ ನೂತನ ನೀತಿಯಿಂದ ಯಾವುದೇ ಪರಿಣಾಮ ಆಗುವುದಿಲ್ಲ. ಒಂದು ವೇಳೆ ನಿಮಗೆ ಹೊಸ ನೀತಿ ಅಕ್ಸೆಪ್ಟ್‌ ಮಾಡಿ ಎಂದು ಪಾಪ್‌ ಅಪ್‌ ಮೆಸೇಜ್‌ ಬರಲಿಲ್ಲ ಎಂದಾದರೆ ನೀವು ಅದನ್ನು ಈಗಲೇ ಒಪ್ಪಿಕೊಂಡಿರುವಿರಿ ಎಂದು ಅರ್ಥ ಎಂದಿದೆ ವಾಟ್ಸ್‌ಆ್ಯಪ್‌.
ನಂಗೆ ಸಾಯಲು ಇಷ್ಟ ಇಲ್ಲ ಆಂಟಿ… ಪ್ಲೀಸ್‌ ಏನಾದ್ರೂ ಹೇಳಿ…

ಪುರುಷ ಮೃತಪಟ್ಟರೆ ಎರಡನೆಯ ಹೆಂಡತಿ, ಮಕ್ಕಳಿಗೆ ಆಸ್ತಿ ಸಿಗತ್ತಾ?

ಬಳ್ಳಾರಿಯ ಕೋವಿಡ್‌ ಆಸ್ಪತ್ರೆಗೆ 65 ವೈದ್ಯಾಧಿಕಾರಿಗಳ ನೇಮಕಕ್ಕೆ ಆಹ್ವಾನ: ನಾಲ್ಕು ಲಕ್ಷ ರೂ. ಸಂಬಳ

ಮಳೆಯಲ್ಲಿ ನೆನೆದು ಕೂಲ್‌ ಕೂಲ್‌ ಆದ ನಟಿ ದೀಪಿಕಾ ವಿಡಿಯೋ ನೋಡಿ ಗರಂ ಗರಂ ಆದ ನೆಟ್ಟಿಗರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 6 =
Remember me
