ನವದೆಹಲಿ:ವಾಟ್ಸ್​ಆ್ಯಪ್​ ಬರುವ ಫೆಬ್ರುವರಿಯಿಂದ ಕೆಲವೊಂದು ಷರತ್ತುಗಳನ್ನು ಹೇರಿರುವ ಬೆನ್ನಲ್ಲೇ ಹಲವಾರು ಮಂದಿ ವಾಟ್ಸ್​ಆ್ಯಪ್​ ಅನ್​ಇನ್​ಸ್ಟಾಲ್​ ಮಾಡಿಕೊಂಡು ಟೆಲಿಗ್ರಾಂ, ಸಿಗ್ನಲ್‌ ಆ್ಯಪ್​ಗಳನ್ನು ಡೌನ್​ಲೋಡ್​ ಮಾಡಲು ಪ್ರಾರಂಭಿಸಿದ್ದಾರೆ.
ಖಾಸಗಿಯಾಗಿರುವ ಎಲ್ಲಾ ವಿಷಯಗಳನ್ನು ವಾಟ್ಸ್​ಆ್ಯಪ್​ ಪಡೆದುಕೊಳ್ಳುತ್ತದೆ, ಯಾರ ಜತೆ ಮಾತನಾಡಿದ್ದಾರೆ, ಏನು ಮಾತನಾಡಿದ್ದಾರೆ, ಬ್ಯಾಂಕ್​ ಖಾತೆ ಏನಿದೆ? ಎಲ್ಲಿಲ್ಲಿ ಹೋಗುತ್ತಾರೆ ಇತ್ಯಾದಿಯಾಗಿ ಪ್ರತಿಯೊಂದು ಖಾಸಗಿತನವನ್ನು ವಾಟ್ಸ್​ಆ್ಯಪ್​ ಬಳಸಿಕೊಳ್ಳಲಿದೆ ಎಂದ ಹಿನ್ನೆಲೆಯಲ್ಲಿ, ಇಂಥದ್ದೊಂದು ಕ್ರಮಕ್ಕೆ ಹಲವಾರು ಮಂದಿ ಮುಂದಾಗಿದ್ದಾರೆ.
ಈ ಹೊಸ ಷರತ್ತುಗಳನ್ನು ಒಪ್ಪದೇ ಹೋದರೆ ವಾಟ್ಸ್​ಆ್ಯಪ್​ ಬ್ಲಾಕ್​ ಮಾಡಲಾಗುವುದು ಎಂಬ ಎಚ್ಚರಿಕೆ ಬಂದ ಬೆನ್ನಲ್ಲೇ ಅವರು ಮಾಡುವ ಮೊದಲೇ ನಾವೇ ಅದನ್ನು ಬಾಯ್​ಕಾಟ್​ ಮಾಡುವ ಎಂದುಕೊಂಡು ಹಲವಾರು ಮಂದಿ ಅನ್​ಇನ್​ಸ್ಟಾಲ್​ ಮಾಡಲು ಶುರುವಿಟ್ಟುಕೊಂಡಿದ್ದಾರೆ.
We want to address some rumors and be 100% clear we continue to protect your private messages with end-to-end encryption.pic.twitter.com/6qDnzQ98MP
— WhatsApp (@WhatsApp)January 12, 2021

ಇದೀಗ ಈ ಕ್ರಮದಿಂದ ಬೆದರಿರುವ ವಾಟ್ಸ್​ಆ್ಯಪ್​ ಕೆಲವೊಂದು ಸ್ಪಷ್ಟನೆಗಳನ್ನು ನೀಡಿದೆ. ತನ್ನ ಟ್ವಿಟರ್‌ ಖಾತೆಯ ಮೂಲಕ ಸ್ಪಷ್ಟೀಕರಣ ನೀಡಿದ ವಾಟ್ಸ್​ಆ್ಯಪ್​ ಕಂಪೆನಿಯು ನಿಮ್ಮ ಯಾವುದೇ ಖಾಸಗಿ ಸಂದೇಶ ನಮಗೆ ಬೇಡ, ಯಾವುದೇ ಕಾರಣಕ್ಕೂ ನಿಮ್ಮ ಖಾಸಗಿ ಸಂದೇಶಗಳನ್ನು ನೋಡುವುದಿಲ್ಲ. ಇಲ್ಲಸಲ್ಲದ ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದು ಹೇಳಿದೆ.
ಟ್ವಿಟರ್​ನಲ್ಲಿ ನೀಡಿರುವ ಮಾಹಿತಿ ಈ ರೀತಿ ಇವೆ ನೋಡಿ.* ನಿಮ್ಮ ಕಾಲ್‌ ಅಥವಾ ನಿಮ್ಮ ಖಾಸಗಿ ಮೆಸೇಜ್‌ ಗಳನ್ನು ವಾಟ್ಸ್​ಆ್ಯಪ್​ ಅಥವಾ ಫೇಸ್​ಬುಕ್‌ ವೀಕ್ಷಿಸಲು ಸಾಧ್ಯವಿಲ್ಲ.
* ನಿಮಗೆ ಕರೆ ಮಾಡುವವರ ಮಾಹಿತಿ, ಮೆಸೇಜ್‌ ಮಾಡುವವರು ಯಾರು ಎಂಬಿತ್ಯಾದಿ ಪಟ್ಟಿಯನ್ನು ವಾಟ್ಸ್​ಆ್ಯಪ್​ ಸಿದ್ಧಪಡಿಸಿಟ್ಟುಕೊಳ್ಳುವುದಿಲ್ಲ.
* ನೀವು ಶೇರ್‌ ಮಾಡಿದ ಲೊಕೇಶನ್‌ ಅನ್ನು ವಾಟ್ಸ್​ಆ್ಯಪ್​ ಅಥವಾ ಫೇಸ್​ಬುಕ್​ ನೋಡಲು ಸಾಧ್ಯವಿಲ್ಲ
* ನಿಮ್ಮ ಕಾಂಟ್ಯಾಕ್ಟ್‌ ಲಿಸ್ಟ್‌ ಅನ್ನು ನಾವು ಪಡೆಯುವುದಿಲ್ಲ.
* ನಿಮ್ಮ ವಾಟ್ಸ್​ಆ್ಯಪ್ ಗ್ರೂಪ್‌ ಖಾಸಗಿಯಾಗಿಯೇ ಇರುತ್ತವೆ. ಸಾರ್ವಜನಿಕವಾಗಿರುವುದಿಲ್ಲ.
ನಿಮ್ಮ ಸಂದೇಶಗಳನ್ನು ನೀವು ಮರೆಮಾಡಬಹುದು
* ನಿಮ್ಮ ಡೇಟಾವನ್ನು ನೀವು ನಿಶ್ಚಿಂತೆಯಿಂದ ಡೌನ್​ಲೋಡ್​ ಮಾಡಿಕೊಳ್ಳಬಹುದು
‘ನಾವು ಈ ಡೇಟಾವನ್ನು ಜಾಹೀರಾತುಗಳಿಗಾಗಿ ಫೇಸ್​ಬುಕ್​ನೊಂದಿಗೆ ಹಂಚಿಕೊಳ್ಳುವುದಿಲ್ಲ. ಮತ್ತೆ, ಈ ಖಾಸಗಿ ಚಾಟ್​ಗಳು ಎಂಡ್-ಟು-ಎಂಡ್ ಎನ್ಕ್ರಿಪ್ಟ್ ಆಗಿರುತ್ತವೆ, ಆದ್ದರಿಂದ ಅವುಗಳ ವಿಷಯವನ್ನು ನಾವು ನೋಡುವುದಿಲ್ಲ ಎಂದು ತಿಳಿಸಿದೆ.
ವಿರಾಟ್​ ಕೊಹ್ಲಿ- ಅನುಷ್ಕಾ ಶರ್ಮಾ ಪಾಪುವಿನ ಪಾದ ಅದಲುಬದಲು- ಈ ಕಾಲು ಅದಲ್ಲ… ಅದು ಇದಲ್ಲ!

ರಸ್ತೆಯೂ ಇರಲ್ಲ, ವಾಹನಗಳೂ ಚಲಿಸಲ್ಲ… ಎಲ್ಲೆಲ್ಲೂ ಹಸಿರು… ಇದು ರಾಜಕುವರನ ಭವಿಷ್ಯದ ನಗರಿ…

ಎಫ್​ಐಆರ್​ ದಾಖಲಿಸಲು ಒಂದು ಲಕ್ಷ ರೂ. ಲಂಚ: ಲೇಡಿ ಸಬ್​ ಇನ್ಸ್​ಪೆಕ್ಟರ್, ಪೇದೆ ಅರೆಸ್ಟ್​​

ಬಿಪಿ, ಶುಗರ್​ ಇಲ್ಲದಿದ್ರೂ ಪದೇ ಪದೇ ಮೂತ್ರಕ್ಕೆ ಹೋಗಬೇಕೆನ್ನಿಸುತ್ತದೆ- ಇದಕ್ಕೆ ಪರಿಹಾರವಿದೆಯೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + twenty =
Remember me
