ನವದೆಹಲಿ:ಇತ್ತೀಚಿನ ದಿನಗಳಲ್ಲಿ ಸೈಬರ್​ ವಂಚನೆ ಸಾಮಾನ್ಯವಾಗಿಬಿಟ್ಟಿದೆ. ಈ ವಂಚನೆಗೆ ಒಳಗಾಗಿ ಅಸಂಖ್ಯ ಮಂದಿ ಹಣವನ್ನು ಕಳೆದುಕೊಂಡಿದ್ದಾರೆ.
ಇದೀಗ ವಾಟ್ಸ್​ಆ್ಯಪ್​ ಕರೆಗಳು ಮತ್ತು ಸಂದೇಶಗಳ ಮೂಲಕ ವಂಚನೆಯ ಜಾಲ ಶುರುವಾಗಿದ್ದು, ಗ್ರಾಹಕರು ಎಚ್ಚರಿಕೆಯಿಂದ ಇರಬೇಕು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಹೇಳಿದೆ.
ಅಪರಿಚಿತ ವಾಟ್ಸ್​ಆ್ಯಪ್​ ಕರೆಗಳು ಮತ್ತು ಸಂದೇಶಗಳಲ್ಲಿ ಏನಾದರೂ ಮಾಹಿತಿ ಕೇಳಿದರೆ ನೀಡಬೇಡಿ. ಬ್ಯಾಂಕ್​ನವರು ಎಂದು ಹೇಳಿಕೊಂಡು ಕರೆ ಮಾಡಲಾಗುತ್ತದೆ. ಆದರೆ ಅವರು ಯಾವುದೇ ಮಾಹಿತಿ ನೀಡಿದರೂ ಅದನ್ನು ಕೊಡಬೇಡಿ ಎಂದು ಎಚ್ಚರಿಸಿದೆ.
3 ತಿಂಗಳಲ್ಲಿ ಡೆಬಿಟ್/ಕ್ರೆಡಿಟ್ ಕಾರ್ಡ್ ಮೂಲಕ ನೂರಾರು ಕೋಟಿ ರೂಪಾಯಿ ವಂಚನೆಯಾಗಿದೆ. ಇದೀಗ ಗ್ರಾಹಕರು ಎಚ್ಚೆತ್ತುಕೊಂಡಿರುವ ಹಿನ್ನೆಲೆಯಲ್ಲಿ ವಾಟ್ಸ್​ಆ್ಯಪ್​ ಮೂಲಕ ಗುರಿ ಮಾಡಿಕೊಳ್ಳಲು ಶುರು ಮಾಡಲಾಗಿದೆ. ಸೈಬರ್ ಕ್ರಿಮಿನಲ್​ಗಳು ನಿಮ್ಮನ್ನು ಮೂರ್ಖರನ್ನಾಗಿ ಮಾಡಲು ಅವಕಾಶ ನೀಡಬೇಡಿ, ಜಾಗೃತರಾಗಿರಿ ಹಾಗೂ ಎಚ್ಚರಿಕೆಯಿಂದ ಇರಿ ಎಂದು ಎಸ್​ಬಿಐ ತನ್ನ ಟ್ವಿಟರ್​ನಲ್ಲಿ ಹೇಳಿದೆ.
ಆನ್​ಲೈನ್ ಬ್ಯಾಂಕಿಂಗ್ ವಹಿವಾಟು ಹೆಚ್ಚುತ್ತಿರುವ ನಡುವೆಯೇ ವಂಚನೆಯೂ ಹೆಚ್ಚಾಗುತ್ತಿದೆ. ವಂಚಕರು ಕಳಿಸುವ ಇ-ಮೇಲ್​ಗಳು ಥೇಟ್ ಬ್ಯಾಂಕ್ ಅಧಿಕಾರಿಗಳ ಇ-ಮೇಲ್​ನಂತೆಯೇ ಇರುತ್ತವೆ. ಎಚ್ಚರ ಇರಲಿ. ಬ್ಯಾಂಕ್​ನಿಂದ ಯಾವುದೇ ಕಾರಣಕ್ಕೂ ವೈಯಕ್ತಿಕ ವಿವರ, ಖಾತೆ ಮಾಹಿತಿ ಕೇಳುವುದಿಲ್ಲ. ಆದ್ದರಿಂದ ಅದನ್ನು ಕೇಳಿದರೆ ದಯವಿಟ್​ಟು ನೀಡಬೇಡಿ ಎಂದು ಎಚ್ಚರಿಕೆ ನೀಡಿದೆ.
ಲತಾ ಮಂಗೇಶ್ಕರ್​ಗೆ ವಿಷ ನೀಡಲಾಗಿತ್ತು! ಅಪ್ರತಿಮ ಗಾಯಕಿ ಜೀವನದ ಘೋರ ಕಹಿಸತ್ಯ…ಲತಾ ಮಂಗೇಶ್ಕರ್​ಗೆ ವಿಷ ನೀಡಲಾಗಿತ್ತು! ಅಪ್ರತಿಮ ಗಾಯಕಿ ಜೀವನದ ಘೋರ ಕಹಿಸತ್ಯ…
ನಮ್ಮ ಬ್ಯಾಂಕ್​ ಹೆಸರಿನಲ್ಲಿ ಬರುವ ಇ-ಮೇಲ್​ಗಳನ್ನು ಕ್ಲಿಕ್ ಮಾಡಬೇಡಿ. ವಾಟ್ಸ್​ಆ್ಯಪ್​ನಲ್ಲಿ ಲಿಂಕ್​ ಬಂದರೆ ಕೂಡಲೇ ಡಿಲೀಟ್​ ಮಾಡಿ, ಕ್ಲಿಕ್​ ಮಾಡಲು ಹೋದರೆ ನಿಮ್ಮ ಖಾತೆ ಹ್ಯಾಕ್​ ಆಗಬಹುದು. ನಮ್ಮಲ್ಲಿ ಯಾವುದೇ ಲಾಟರಿ ಸ್ಕೀಮ್ ಇಲ್ಲ. ಲಾಟರಿ ಯೋಜನೆ ಅಥವಾ ಅದೃಷ್ಟವಂತ ಗ್ರಾಹಕರಿಗೆ ಕೊಡುಗೆ ನೀಡುವುದಿಲ್ಲ. ಆದ್ದರಿಂದ ಬ್ಯಾಂಕ್​ ಹೆಸರಿನಲ್ಲಿ ಆಫರ್​, ಲಾಟರಿ ಎಂದೆಲ್ಲಾ ಸಂದೇಶ ಬಂದರೆ ಅದನ್ನು ನಂಬಬೇಡಿ ಎಂದಿದೆ.
ಒಂದು ವೇಳೆ ಬ್ಯಾಂಕ್ ಕಡೆಯಿಂದ ತಪ್ಪಾಗಿ, ಗ್ರಾಹಕರಿಗೆ ವಂಚನೆ ಆದಲ್ಲಿ ಪರಿಹಾರ ದೊರೆಯುತ್ತದೆ.ಆದರೆ ಗ್ರಾಹಕರ ನಿರ್ಲಕ್ಷ್ಯದಿಂದ ನಷ್ಟವಾದಲ್ಲಿ ಪರಿಹಾರ ಸಿಗುವುದಿಲ್ಲ ಎಂದೂ ಬ್ಯಾಂಕ್​ ಎಚ್ಚರಿಕೆ ನೀಡಿದೆ.
ಲತಾ ಮಂಗೇಶ್ಕರ್​ಗೆ ವಿಷ ನೀಡಲಾಗಿತ್ತು! ಅಪ್ರತಿಮ ಗಾಯಕಿ ಜೀವನದ ಘೋರ ಕಹಿಸತ್ಯ…

ನಾಲ್ಕನೇ ಮದುವೆಗೆ ಅಡ್ಡಿಯಾದ ನಾಲ್ಕುವರ್ಷದ ಮಗನನ್ನೇ ಕೊಲೆಮಾಡಿದಳು!

ಜೈಲಿನೊಳಗೇ ಸುರಂಗ ತೋಡಿ ಡ್ರಗ್​ ಪೆಡ್ಲರ್​ ಎಸ್ಕೇಪ್​; ಕಣ್​ಕಣ್​ ಬಿಡ್ತಿದ್ದಾರೆ ಅಧಿಕಾರಿಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + twenty =
Remember me
