ಪಟ್ನಾ:ಕೋವಿಡ್‌ ಒಂದನೆಯ ಅಲೆಯ ನಂತರ ಬದುಕನ್ನು ಅಲ್ಲೋಲ ಕಲ್ಲೋಲ ಮಾಡುತ್ತಿದೆ ಎರಡನೆಯ ಅಲೆ. ಈ ಅಲೆಗೆ ಹೆಣಗಳ ರಾಶಿಯೇ ಬೀಳುತ್ತಿರುವ ನಡುವೆಯೇ ಸದ್ದಿಲ್ಲದೇ ಹಲವರ ಜೀವ ಪಡೆದಿದೆ ಬ್ಲ್ಯಾಕ್‌ ಫಂಗಸ್‌ (ಕಪ್ಪು ಶಿಲೀಂಧ್ರ). ಆದರೆ ಇನ್ನೂ ಭಯಾನಕ ಎನಿಸುವ ಬಿಳಿ ಶಿಲೀಂಧ್ರ (ವೈಟ್‌ ಫಂಗಸ್‌) ಪತ್ತೆಯಾಗಿದೆ.
.ಬಿಹಾರದ ಪಟ್ನಾದಲ್ಲಿ ನಾಲ್ವರಲ್ಲಿ ವೈಟ್ ಫಂಗಸ್ ಪತ್ತೆಯಾಗಿದ್ದು, ಇದೀಗ ವೈದ್ಯಕೀಯ ಲೋಕವನ್ನೇ ಬೆಚ್ಚಿಬೀಳಿಸುತ್ತಿದೆ. ಏಕೆಂದರೆ ಬಿಳಿ ಶಿಲೀಂಧ್ರವು, ಕಪ್ಪು ಶಿಲೀಂಧ್ರಕ್ಕಿಂತಲೂ ಅತಿಹೆಚ್ಚು ಅಪಾಯಕಾರಿ ಎನ್ನಲಾಗುತ್ತಿದೆ. ಪಟ್ನಾದಲ್ಲಿ ಈ ಸೋಂಕಿತರನ್ನು ಆಕ್ಸಿಜನ್ ಹಾಗೂ ವೆಂಟಿಲೇಟರ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.
ಕರೊನಾ ಸೋಂಕಿನಿಂದ ಬಳಲುತ್ತಿದ್ದ ಈ ನಾಲ್ವರನ್ನು ಎಚ್‌ಆರ್‌ ಸಿಟಿ ಸ್ಕ್ಯಾನ್ ಮಾಡಿಸಿದಾಗ ಇವರಲ್ಲಿ ವೈಟ್ ಫಂಗಸ್ ಪತ್ತೆಯಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಇದು ಶ್ವಾಸಕೋಶ, ಚರ್ಮ, ಮೂತ್ರಪಿಂಡ, ಮೆದುಳು, ಬಾಯಿ ಹಾಗೂ ದೇಹದ ಇತರ ಅಂಗಾಂಗಗಳ ಮೇಲೆ ಅಪಾಯಕಾರಿ ಪರಿಣಾಮಗಳನ್ನು ಬೀರುತ್ತದೆ. ಬ್ಲ್ಯಾಕ್ ಫಂಗಸ್ ನಂತೆಯೇ ಮಧುಮೇಹಿಗಳಲ್ಲಿ, ಕರೊನಾದಿಂದ ಗುಣಮುಖರಾಗುತ್ತಿರುವವರಲ್ಲಿಯೇ ಈ ವೈಟ್ ಫಂಗಸ್ ಕೂಡ ಪತ್ತೆಯಾಗುತ್ತಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಬ್ಲ್ಯಾಕ್‌ ಫಂಗಸ್‌ ಗುರುತಿಸುವುದು ಹೇಗೆ? ಚಿಕಿತ್ಸೆ, ಪರಿಹಾರವೇನು? ವೈದ್ಯಕೀಯ ವಿಜ್ಞಾನ ಸಂಸ್ಥೆ ಮಾರ್ಗಸೂಚಿ ಇಲ್ಲಿದೆ

ದೇಹ ಒಪ್ಪಿಸಿದ್ದೇನೆ, ಕಿಡ್ನಿ ಮಾರಿ 20 ಲಕ್ಷ ರೂ ಕೊಡುವೆ ಎಂದ್ರೂ ಕೇಳದೇ ಬೇರೆ ಮದ್ವೆಯಾಗ್ತಿದ್ದಾನೆ- ಏನು ಮಾಡಲಿ?

ಆಫೀಸ್‌ಗೆ ಬರ್ತಾನೆ, ಪದೇ ಪದೇ ಟಾಯ್ಲೆಟ್‌ಗೆ ಓಡ್ತಾನೆ- ಏನ್‌ ಮಾಡೋದು? ಇಂಟರ್‌ನೆಟ್‌ ಮೊರೆ ಹೋದ ಕಂಪೆನಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
