ಮುಂಬೈ:ಕೊನೆ ಕ್ಷಣದವರೆಗೂ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಲೇ ಶಿವಸೇನೆಯ ಬಂಡಾಯ ನಾಯಕ ಏಕನಾಥ್​ ಶಿಂಧೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಎರಡು ದಿನಗಳೇ ಕಳೆದಿವೆ. ಇದರ ನಡುವೆಯೇ ನೂತನ ಸ್ಪೀಕರ್​ ಆಯ್ಕೆಯ ಕುತೂಹಲಕ್ಕೂ ಇಂದು ತೆರೆ ಬಿದ್ದಿದ್ದು, ಬಿಜೆಪಿ ಶಾಸಕ, 45 ವರ್ಷದ ರಾಹುಲ್ ನಾರ್ವೇಕರ್ ಸ್ಪೀಕರ್​ ಆಗಿ ಆಯ್ಕೆಯಾದರು.
288 ಸದಸ್ಯ ಬಲದ ವಿಧಾನಸಭೆಯಲ್ಲಿ 164 ಮತಗಳಿಂದ ನಾರ್ವೇಕರ್​ ಆಯ್ಕೆಯಾಗಿದ್ದಾರೆ. ಈ ಮೂಲಕ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಶಿವಸೇನಾ ಶಾಸಕ ಮತ್ತು ಉದ್ಧವ್ ಠಾಕ್ರೆ ಆಪ್ತ ರಾಜನ್ ಸಾಲ್ವಿ ಅವರನ್ನು ಸೋಲಿಸಿದ್ದಾರೆ. ಸಾಲ್ವಿ ಅವರಿಗೆ 106 ಮತಗಳು ಬಂದಿವೆ.
ಇಲ್ಲಿಯವರೆಗೂ ಶಾಸಕ ರಾಹುಲ್ ನಾರ್ವೇಕರ್ ಅವರ ಹೆಸರು ಕೇಳಿದವರೇ ಬಲು ಅಪರೂಪ. ಅಂಥವರನ್ನು ಬಿಜೆಪಿ ಸ್ಪೀಕರ್​ ಸ್ಥಾನಕ್ಕೆ ನಿಲ್ಲಿಸಿದಾಗ ಎಲ್ಲರೂ ಅಚ್ಚರಿ ಪಟ್ಟಿದ್ದರು. ಯಾರಿದ್ದರೆ ಯಾರೀ ನಾರ್ವೇಕರ್​?
ವೃತ್ತಿಯಲ್ಲಿ ವಕೀಲರಾಗಿರುವ ನಾರ್ವೇಕರ್ ಅವರು ಈ ಹಿಂದೆ ಶಿವಸೇನಾ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದೊಂದಿಗೆ (ಎನ್‌ಸಿಪಿ) ಸಂಬಂಧ ಹೊಂದಿದ್ದರು, 2019ರ ಅಕ್ಟೋಬರ್​ನಲ್ಲಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಪೂರ್ವದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಪಕ್ಷವು ಅವರನ್ನು ದಕ್ಷಿಣ ಮುಂಬೈನ ಕೊಲಾಬಾ ಕ್ಷೇತ್ರದಿಂದ ಕಣಕ್ಕಿಳಿಸಿತು, ಇವರನ್ನು ಬಿಜೆಪಿ ಕಣಕ್ಕೆ ಇಳಿಸಿದಾಗಲೇ ಅಚ್ಚರಿ ಪಟ್ಟವರು ಹಲವರು. ಆದರೆ ಈ ಕ್ಷೇತ್ರದಿಂದ ನಾರ್ವೇಕರ್​ ಗೆಲುವು ಸಾಧಿಸಿದರು. ಪ್ರಸ್ತುತ ಇವರು ರಾಜ್ಯ ಬಿಜೆಪಿಯ ಮಾಧ್ಯಮ ಉಸ್ತುವಾರಿಯೂ ಆಗಿದ್ದಾರೆ.
ಮಹಾರಾಷ್ಟ್ರ ವಿಧಾನ ಪರಿಷತ್ತಿನ ಅಧ್ಯಕ್ಷರು ಮತ್ತು ಸ್ಪೀಕರ್ ಆಗಿರುವ ಹಿರಿಯ ಕಾಂಗ್ರೆಸ್​ ನಾಯಕ ರಾಮರಾಜೆ ನಾಯ್ಕ್-ನಿಂಬಾಳ್ಕರ್ ಅವರ ಅಳಿಯ ಆಗಿರುವ ನಾರ್ವೇಕರ್​, ಶಿವಸೇನೆಯೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದವರು. ಉದ್ಧವ್ ಠಾಕ್ರೆ ಅವರ ಪುತ್ರ ಆದಿತ್ಯ ನೇತೃತ್ವದ ಯುವ ಘಟಕವಾದ ಯುವಸೇನೆಯ ವಕ್ತಾರರಾಗಿದ್ದರು. 2014ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಶಿವಸೇನೆಯನ್ನು ತೊರೆದು ಕಾಂಗ್ರೆಸ್​ ಸೇರಿದರು. ಈ ಚುನಾವಣೆಯಲ್ಲಿ ಮಾವಲ್ ಕ್ಷೇತ್ರದಿಂದ ಕಾಂಗ್ರೆಸ್​ ಅಭ್ಯರ್ಥಿಯಾಗಿ ಸ್ಪರ್ಧಿಸಿದರು, ಶಿವಸೇನೆಯ ಶ್ರೀರಂಗ್ ಅಪ್ಪಾ ಬಾರ್ನೆ ವಿರುದ್ಧ ಸೋತರು.
ಒಂದು ಕುತೂಹಲದ ಸಂಗತಿಯೆಂದರೆ ನಾರ್ವೇಕರ್​ ಅವರು, 2019ರ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಅವಧಿಯಲ್ಲಿ ಕಾಂಗ್ರೆಸ್​ ಜತೆ ಗುರುತಿಸಿಕೊಂಡಿದ್ದರು. ಆದರೆ ನಾಮಪತ್ರ ಸಲ್ಲಿಸಲು ಇನ್ನೇನು ಒಂದು ಗಂಟೆ ಇದೆ ಎನ್ನುವಾಗಲೇ ಕಾಂಗ್ರೆಸ್​ ತೊರೆದು ಬಿಜೆಪಿ ಸೇರ್ಪಡೆಗೊಂಡರು. ನಂತರ ಬಿಜೆಪಿಯಿಂದ ಚುನಾವಣಾ ಕಣಕ್ಕಿಳಿದರು. ಕಾಂಗ್ರೆಸ್​ ಅಭ್ಯರ್ಥಿ ಅಶೋಕ್ ಜಗತಾಪ್ ಅವರನ್ನು ಸೋಲಿಸಿ, ಬಿಜೆಪಿ ಶಾಸಕರಾದರು!
ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ನಾರ್ವೇಕರ್​ ಅವರ ಪರಿಣತಿಯು ರಾಜ್ಯ ವಿಧಾನಸಭೆಯನ್ನು ನಡೆಸಲು ಸಹಾಯ ಮಾಡುತ್ತದೆ. ನಾರ್ವೇಕರ್ ಅವರು ಮೊದಲ ಬಾರಿಗೆ ಶಾಸಕರಾಗಿದ್ದರೂ ಸಹ, ಅವರು ವಿವಿಧ ಪಕ್ಷಗಳೊಂದಿಗೆ ದೀರ್ಘಕಾಲ ಕೆಲಸ ಮಾಡಿದ್ದರಿಂದ ಅನುಭವಿ ನಾಯಕರಾಗಿದ್ದಾರೆ ಎಂದು ಇವರನ್ನು ಸ್ಪೀಕರ್​ ಸ್ಥಾನಕ್ಕೆ ಇಳಿಸಿರುವುದರ ಕುರಿತು ಪಕ್ಷದ ಮೂಲಗಳು ಸಮರ್ಥಿಸಿಕೊಂಡಿವೆ.
‘ಮಹಾ’ ಸ್ಪೀಕರ್ ಆಗಿ ಬಿಜೆಪಿಯ ರಾಹುಲ್​ ಆಯ್ಕೆ: ನಾಳೆ ನಡೆಯಲಿದೆ ವಿಶ್ವಾಸಮತ ಯಾಚನೆ

VIDEO: ಟೈಲರ್​ ರುಂಡ ತುಂಡರಿಸಿದವರು ಮಕ್ಕಳು, ಕ್ಷಮಿಸಿಬಿಡೋಣ ಎಂದ್ರಾ ರಾಹುಲ್​ ಗಾಂಧಿ? ವಿಡಿಯೋದಲ್ಲಿ ಇರೋದೇನು?


VIDEO: ಟೈಲರ್​ ರುಂಡ ತುಂಡರಿಸಿದವರು ಮಕ್ಕಳು, ಕ್ಷಮಿಸಿಬಿಡೋಣ ಎಂದ್ರಾ ರಾಹುಲ್​ ಗಾಂಧಿ? ವಿಡಿಯೋದಲ್ಲಿ ಇರೋದೇನು?

ಎಳವೆಯಲ್ಲಿಯೇ ಕನ್ನಡಿಗರ ಹೃದಯಗೆದ್ದು ಅಗಲಿದ ಪುಟಾಣಿ ಸಮನ್ವಿ ಮನೆಗೆ ಪುಟ್ಟ ಕಂದನ ಆಗಮನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
