ಮುಂಬೈ:ಜಗತ್ತಿನ ನಾಲ್ಕನೇ ಅತಿ ದೊಡ್ಡ ಶ್ರೀಮಂತ ಎಂಬ ಖ್ಯಾತಿ ಗಳಿಸಿರುವ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಅವರು ಇದೇ 10ರಂದು ಅಜ್ಜ ಆಗಿದ್ದಾರೆ. ಮುಕೇಶ್​ ಮತ್ತು ನೀತಾ ಅಂಬಾನಿಯವರ ಮಗ ಆಕಾಶ್​ ಪತ್ನಿ ಶ್ಲೋಕಾ ಅವರಿಗೆ 10ರಂದು ಗಂಡುಮಗು ಜನಿಸಿದೆ.
2019ರ ಮಾರ್ಚ್​ ತಿಂಗಳಿನಲ್ಲಿ ನೀತಾ ಮತ್ತು ಆಕಾಶ್​ ಅವರ ಮದುವೆ ನಡೆದಿತ್ತು. ಮಗುವು ಹುಟ್ಟುತ್ತಿದ್ದಂತೆಯೇ ಕೃಷ್ಣ ಪರಮಾತ್ಮನ ದಯೆ ಮತ್ತು ಆಶೀರ್ವಾದದಿಂದ ಶ್ಲೋಕಾ ಹಾಗೂ ಆಕಾಶ್ ಅಂಬಾನಿ ಅವರಿಗೆ ಗಂಡು ಸಂತಾನವಾಗಿದೆ ಎಂದು ಸಂತಸ ಹಂಚಿಕೊಂಡಿದ್ದ ಮುಕೇಶ್​ ಅಂಬಾನಿ ಮಗುವನ್ನು ಹಿಡಿದುಕೊಂಡು ಫೋಟೋಗೆ ನೀಡಿರುವ ಪೋಸ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿತ್ತು.
ಈ ಆಗರ್ಭ ಸಿರಿವಂತನ ಮನೆಗೆ ಮಗಳು ಬರುತ್ತಾಳೋ, ಮಗ ಬರುತ್ತಾನೋ ಎಂದು ಬಹುಮಂದಿ ಕಾತರದಿಂದ ಕಾಯುತ್ತಿದ್ದರು. ಇದೀಗ ಗಂಡುಮಗು ಹುಟ್ಟುವುದರೊಂದಿಗೆ ಆ ಕಾತರ ಹೋಗಿದೆ. ಈಗ ಆ ಮಗುವಿಗೆ ಏನು ಹೆಸರು ಇಡಬಹುದು ಎಂದು ಹಲವರು ಕಮೆಂಟ್​ ಮೂಲಕ ಚರ್ಚೆ ಶುರುಮಾಡಿದ್ದರು.
ಇದೀಗ, ಆ ಕುತೂಹಲವೂ ತಣಿದಿದೆ. ಏಕೆಂದರೆ ತಮ್ಮ ಮೊಮ್ಮಗುವಿಗೆ ಮುಕೇಶ್​ ದಂಪತಿ ಪೃಥ್ವಿ ಎಂದು ಹೆಸರು ಇಟ್ಟಿದ್ದಾರೆ.ಅಷ್ಟಕ್ಕೂ ಈ ಹೆಸರೇಕೆ ಎಂದು ಅನೇಕ ಮಂದಿ ಅವರನ್ನು ಪ್ರಶ್ನಿಸಿದರಂತೆ. ಅದಕ್ಕೆ ಅವರು ನೀಡಿರುವ ಉತ್ತರ ಎಂದರೆ, ನಮ್ಮ ಮನೆಯಲ್ಲಿ ಆಕಾಶ ಇದ್ದಾನೆ. ಆಕಾಶ ಒಂದೇ ಇದ್ದರೆ ಸಾಲದು, ಭೂಮಿಯೂ ಬೇಕಲ್ಲ, ಅದಕ್ಕಾಗಿಯೇ ಆಕಾಶನ ಮಗವಿನಗೆ ಪೃಥ್ವಿ ಎಂದು ಹೆಸರು ಇಟ್ಟಿದ್ದೇನೆ ಎಂದಿದ್ದಾರೆ.
ಮುಕೇಶ್​ ಅಂಬಾನಿ ಮೊಮ್ಮಗು ನೋಡಲು ಮೋದಿ ಹೋಗಿದ್ರಾ- ವೈರಲ್​ ಫೋಟೋದ ಸತ್ಯಾಂಶ ಏನು?

ಈ ಮಾದಕ ಬೆಡಗಿಯಲ್ಲಿ ಅಡಗಿದೆ ಒಂದು ವಿಶೇಷತೆ: ಏನೆಂದು ಪತ್ತೆ ಮಾಡಬಲ್ಲಿರಾ?

ಈ 104 ವರ್ಷದ ವೈದ್ಯ 9 ಸಾವಿರ ಮಕ್ಕಳ ತಂದೆ! ಅವರ ಇಂಟರೆಸ್ಟಿಂಗ್​ ಜೀವನಕಥೆ ಇಲ್ಲಿದೆ…

ಕಮಲ್​ ಹಾಸನ್​ ಪ್ರಣಾಳಿಕೆ ನೋಡಿ ಗೃಹಿಣಿಯರಿಗೆ ಖುಷಿಯೋ ಖುಷಿ: ಅಂಥದ್ದೇನಿದೆ ನೋಡಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:17 − 15 =
Remember me
