ಜೈಪುರ್:ತಾವು ಪ್ರಧಾನ ಮಂತ್ರಿಯಲ್ಲ ಬದಲಿಗೆ ಪ್ರಧಾನ ಸೇವಕ ಎಂದು ಸದಾ ಹೇಳಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ಕಾನೂನು ಎಲ್ಲರಿಗೂ ಒಂದೇ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ರಾಜಸ್ಥಾನದಲ್ಲಿ ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಅವರು ಮೈಕ್​ ಬಳಸದೇ ಭಾರಿ ಪ್ರಶಂಸೆ ಗಳಿಸಿದರು.
ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಉದ್ಘಾಟನೆ ಸಂದರ್ಭದಲ್ಲಿ ರಾಜಸ್ಥಾನವನ್ನು ತಲುಪಿದ ಪ್ರಧಾನಿ, ಆ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಬೇಕಿತ್ತು. ಆದರೆ ಅಂದು ಪ್ರಧಾನಿಯವರಿಗೆ ವಿಪರೀತ ಕಾರ್ಯಕ್ರಮ ಇದ್ದ ಹಿನ್ನೆಲೆಯಲ್ಲಿ ರಾಜಸ್ಥಾನವನ್ನು ತಲುಪುವುದು ರಾತ್ರಿ 10 ಗಂಟೆಯಾಗಿತ್ತು. ಪ್ರಧಾನಿಯವರ ಮಾತನ್ನು ಕೇಳಲು ಜನ ಕಿಕ್ಕಿರಿದು ತುಂಬಿದ್ದರು. ಆದರೆ ಈ ಸಭೆಯಲ್ಲಿ ಪ್ರಧಾನಿ ಮೋದಿ ಮೈಕ್​ ಬಳಸದೇ ಹಾಗೆಯೇ ಮಾತನಾಡಿದರು.
ಇದಕ್ಕೆ ಕಾರಣವೇನೆಂದರೆ ರಾತ್ರಿ 10 ಗಂಟೆಯ ಬಳಿಕ ಧ್ವನಿವರ್ಧಕ ನಿಷೇಧ ಇದೆ ಎನ್ನುವ ಕಾರಣಕ್ಕೆ. ಎಲ್ಲರಿಗೂ ಕಾನೂನು ಒಂದೇ. ನಾನು ನಿಯಮವನ್ನು ಮುರಿಯುವುದಿಲ್ಲ ಎಂದ ಮೋದಿ ತಡವಾಗಿ ಬಂದಿರುವುದಕ್ಕೆ ಜನರ ಕ್ಷಮೆ ಕೋರಿ ನಂತರ ಮೈಕ್​ ಬಳಸದೇ ಮಾತನಾಡಿದರು. ಪ್ರಧಾನಿಯವರು ಹೀಗೆ ಮಾಡಿದ್ದು, ಭಾರಿ ಪ್ರಶಂಸೆಯನ್ನು ಗಿಟ್ಟಿಸಿದೆ.
ಇದಾದ ಬಳಿಕ ಪ್ರಧಾನಿ ಭಾರತ್ ಮಾತಾ ಕಿ ಜೈ ಘೋಷ ಕೂಗಿ ಸಾರ್ವಜನಿಕರಿಗೆ ಸಾಷ್ಟಾಂಗ ನಮನ ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೂ ಮೊದಲು, ಪ್ರಧಾನಿಯವರು ಉಚಿತ ಪಡಿತರ ಯೋಜನೆಯನ್ನು ವಿಸ್ತರಿಸಿದರು. ಈ ಕ್ರಮದಿಂದ 80 ಕೋಟಿಗೂ ಹೆಚ್ಚು ಜನರಿಗೆ ಸಹಕಾರಿ ಆಗಲಿದೆ ಎಂದು ಹೇಳಿದರು. ದೇಶದ 80 ಕೋಟಿಗೂ ಹೆಚ್ಚು ಜನರಿಗೆ ಕಷ್ಟದ ಸಮಯದಲ್ಲಿ ಪರಿಹಾರ ನೀಡಲು ಕೇಂದ್ರವು ಸುಮಾರು 4 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.
PM Modi decided against addressing the public meeting at Abu Road because it was well past stipulated time.This was 7th program of the day. Earlier he flagged and took a ride on Vande Bharat and Ahemdabad Metro, prayed at Ambaji among others.He is 72 and fasting for Navratri!pic.twitter.com/UWiotbehQm— Amit Malviya (@amitmalviya)September 30, 2022
PM Modi decided against addressing the public meeting at Abu Road because it was well past stipulated time.This was 7th program of the day. Earlier he flagged and took a ride on Vande Bharat and Ahemdabad Metro, prayed at Ambaji among others.He is 72 and fasting for Navratri!pic.twitter.com/UWiotbehQm
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:19 + nineteen =
Remember me
