ಸುಪೌಲ್ (ಬಿಹಾರ):ಲಂಚ ಕೊಡಲು ಪತ್ನಿ ಒಂದು ಲಕ್ಷ ರೂಪಾಯಿ ಹಣ ಕೊಟ್ಟಿಲ್ಲ ಎನ್ನುವ ಕಾರಣಕ್ಕೆ ಪಾಪಿ ಗಂಡನೊಬ್ಬ ಪತ್ನಿಯ ಜತೆಗೆ ಮಗುವನ್ನೂ ಸಜೀವವಾಗಿ ಕೊಂದುಹಾಕಿರುವ ಭಯಾನಕ ಘಟನೆ ಬಿಹಾರದಲ್ಲಿ ನಡೆದಿದೆ.
ಇಲ್ಲಿಯ ಸುಪೌಲ್‌ ಎಂಬಲ್ಲಿ ಇಂಥದ್ದೊಂದು ಘಟನೆ ನಡೆದಿದ್ದು, ಈತನ ಈ ಕೃತ್ಯಕ್ಕೆ ರಂಜನ್​ ದೇವಿ ಹಾಗೂ ಮೂರು ವರ್ಷದ ಮಗ ಬಲಿಯಾಗಿದ್ದಾರೆ. ಆಶಿಶ್ ಎಂಬಾತ ಈ ಕೃತ್ಯ ಎಸಗಿದ್ದಾನೆ.
ಆಶಿಶ್‌ ರೈಲ್ವೆ ಇಲಾಖೆಯಲ್ಲಿ ಗ್ರೂಪ್ ಡಿ ಕೆಲಸಕ್ಕೆ ಸೇರಿಕೊಳ್ಳಲು ಬಯಸಿದ್ದ. ಒಂದು ಲಕ್ಷ ರೂಪಾಯಿ ಲಂಚ ಕೊಟ್ಟರೆ ಕೆಲಸ ಕೊಡಿಸುವುದಾಗಿ ಯಾರೋ ಆಮಿಷ ಒಡ್ಡಿದ್ದರು. ಆ ಹಣವನ್ನು ನೀಡುವಂತೆ ಪತ್ನಿಗೆ ಆತ ಪೀಡಿಸುತ್ತಿದ್ದ. ತವರು ಮನೆಯಿಂದ  ಹಣವನ್ನು ತಂದುಕೊಡುವಂತೆ ಪೀಡಿಸುತ್ತಿದ್ದ. ಆದರೆ ಲಂಚ ಕೊಟ್ಟರೆ ಕೆಲಸ ಆಗುವುದಿಲ್ಲ, ಯಾರೋ ಪತಿಗೆ ವಂಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಪತ್ನಿ ಹೇಳುತ್ತಲೇ ಬಂದಿದ್ದರು. ಅಷ್ಟೇ ಅಲ್ಲದೇ ತವರು ಮನೆಯವರು ಸ್ಥಿತಿವಂತರಲ್ಲದ ಕಾರಣ, ಇಷ್ಟೊಂದು ಹಣ ಅವರು ಕೊಡುವುದು ಸಾಧ್ಯವಿಲ್ಲ ಎಂದಿದ್ದರು. ಇದೇ ವಿಷಯಕ್ಕೆ ದಂಪತಿ ನಡುವೆ ಕೆಲ ತಿಂಗಳುಗಳಿಂದ ಜಗಳವಾಗುತ್ತಿತ್ತು ಎನ್ನಲಾಗಿದೆ.
ಇದೇ ಸಿಟ್ಟಿನಿಂದ ಗರ್ಭಿಣಿ ಪತ್ನಿ ಮತ್ತು ಮಗನನ್ನು ಕಣ್ಣಿಗೆ ಪಟ್ಟಿ ಕಟ್ಟಿ, ಅವರನ್ನು ಹಾಸಿಗೆಗೆ ಬಿಗಿದು ಬೆಂಕಿ ಹಚ್ಚಿದ್ದಾನೆ. ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈತನ ಈ ಕೃತ್ಯಕ್ಕೆ ಆತನ ಸಹೋದರಿ ಕೂಡ ಜತೆಯಾಗಿದ್ದಾಳೆ ಎನ್ನಲಾಗಿದ್ದು, ಇಬ್ಬರೂ ಪರಾರಿಯಾಗಿದ್ದಾರೆ. ಪೊಲೀಸರು ಇಬ್ಬರಿಗಾಗಿ ಹುಡುಕಾಟ ನಡೆಸಿದ್ದಾರೆ.
ಲಂಚಕ್ಕೆ ಕೈಚಾಚಿ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ವಿಜಯಪುರದ ನೀರು ಸರಬರಾಜು ಮಂಡಳಿಯ ಇಂಜಿನಿಯರ್‌!

ಸೊಸೆಯ ಅಕ್ರಮ ಸಂಬಂಧಕ್ಕೆ ಸುಟ್ಟು ಕೊಲೆಯಾದ ಅತ್ತೆ-ಮಾವ! ಮಾಜಿ ಸೈನಿಕ ದಂಪತಿಯ ಘೋರ ಅಂತ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
