ಮುಂಬೈ:ಕಳೆದ ತಿಂಗಳಷ್ಟೇ ಮದುವೆಯಾದವನೊಬ್ಬ ತನ್ನ ಪತ್ನಿಯನ್ನು ರೈಲಿನಿಂದ ತಳ್ಳಿ ಕೊಲೆ ಮಾಡಿರುವ ಅಮಾನುಷ ಘಟನೆ ಮುಂಬೈನಲ್ಲಿ ನಡೆದಿದೆ.ಛೇಂಬರ್ ಮತ್ತು ಗೋವಾಂ‌ದಿ ರೈಲ್ವೆ ನಿಲ್ದಾಣಗಳ ಮಾರ್ಗಮಧ್ಯದಲ್ಲಿ ಈ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
31 ವರ್ಷದ ಆರೋಪಿ ಮತ್ತು ಮೃತ ಮಹಿಳೆಯಿಬ್ಬರೂ ಕೂಲಿ ಕೆಲಸ ಮಾಡಿಕೊಂಡಿದ್ದು, ಕಳೆದ ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದಾರೆ. ಇದಕ್ಕೂ ಮೊದಲೇ ಮದುವೆಯಾಗಿದ್ದ ಮಹಿಳೆಗೆ 7 ವರ್ಷ ಮಗುವನ್ನು ಹೊಂದಿದ್ದಳು.
27 ವರ್ಷದ ಮಹಿಳೆ ಕೊಲೆಯಾದಳು. ಛೇಂಬರ್ ಮತ್ತು ಗೋವಾಂ‌ದಿ ರೈಲ್ವೆ ನಿಲ್ದಾಣಗಳ ಮಾರ್ಗಮಧ್ಯದಲ್ಲಿ ಈ ಘಟನೆ ನಡೆದಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಮಹಿಳೆಯ ಪತಿಯನ್ನು ಬಂಧಿಸಲಾಗಿದೆ.
ಮಹಿಳೆಗೆ ಇದು ಎರಡನೆಯ ಮದುವೆಯಾಗಿತ್ತು. ಇದಾಗಲೇ ಆಕೆಗೆ ಒಂದು ಮಗು ಕೂಡ ಇದೆ. ದಂಪತಿ ನಡುವೆ ಯಾವುದೋ ವಿಷಯಕ್ಕೆ ಗಲಾಟೆಯಾಗಿರಬಹುದು ಎಂದು ಊಹಿಸಲಾಗಿದೆ. ದಂಪತಿ ರೈಲಿನಲ್ಲಿ ಹೋಗುತ್ತಿದ್ದ ಸಮಯದಲ್ಲಿ ಮಹಿಳೆ ರೈಲಿನ ದ್ವಾರದ ಬಳಿ ನಿಂತುಕೊಂಡಿದ್ದಾಳೆ. ಆಕೆಯನ್ನು ಒಳಕ್ಕೆ ಕರೆದುಕೊಳ್ಳುವಂತೆ ಮಾಡಿದ ಪತಿ ನಂತರ ತಳ್ಳಿರುವುದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಕೂಡಲೇ ಕೆಲವರು ರೈಲನ್ನು ತಡೆದು ನಿಲ್ಲಿಸಿದ್ದಾರೆ. ಘಟನಾ ಸ್ಥಳಕ್ಕೆ ಬಂದು ಪರಿಶೀಲಿಸುವ ಹೊತ್ತಿಗೆ ಮಹಿಳೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ತಕ್ಷಣವೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಯಿತಾದರೂ ಅಷ್ಟರಲ್ಲೇ ಮಹಿಳೆಯು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಆರೋಪಿ ಪತಿಯನ್ನು ಪೊಲೀಸರು ಬಂಧಿಸಿ ಕ್ರಮ ಜರುಗಿಸಿದ್ದಾರೆ.
ಮಗ ಸತ್ತ ವರ್ಷದ ನಂತರ ಸಿಕ್ತು ಡೆತ್‌ನೋಟ್‌! ಅದರಲ್ಲಿತ್ತು ಪತ್ನಿಯ ಕಾಮಪುರಾಣ

VIDEO: ಮರದಲ್ಲಿ ಕುಳಿತು ಅದೇ ರೆಂಬೆಯನ್ನು ಕಡಿಯುವ ಡೇಂಜರ್‌ ಉದ್ಯೋಗ ನೋಡಿರುವಿರಾ?

ಅಂಚೆ ಕಚೇರಿಯಲ್ಲಿವೆ ಡಾಕ್ ಸೇವಕ್‌ ಹುದ್ದೆಗಳು: ಎಸ್‌ಎಸ್‌ಎಲ್‌ಸಿ ಆದವರಿಗೂ ಅವಕಾಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
