ಇಂದೋರ್ (ಮಧ್ಯಪ್ರದೇಶ):ನನ್ನ ಪತಿ ಸಂಜೆಯಾಗ್ತಿದ್ದಂತೆಯೇ ಮೇಕಪ್ ಮಾಡಲು ಶುರು ಮಾಡ್ತಾರೆ, ಹೆಣ್ಣುಮಕ್ಕಳಂತೆಯೇ ಕೂದಲಿಗೆ ಹೇರ್ ಬ್ಯಾಂಡ್ ಹಾಕುವುದು, ಕಿವಿಯೋಲೆ ಇಟ್ಕೊಳ್ಳುವುದು ಮಾಡುತ್ತಾರೆ. ಹಣೆಯ ಮೇಲೆ ಹೆಂಗಸರಂತೆ ಕುಂಕುಮ ಹಚ್ಚಿಕೊಳ್ಳುತ್ತಾರೆ. ತುಟಿಗಳಿಗೆ ಲಿಪ್​ಸ್ಟಿಕ್​ ಹಚ್ಚುತ್ತಾರೆ. ಇದರ ಬಗ್ಗೆ ಕೇಳಿದಾಗ ನನ್ನ ಮೇಲೆ ಹಲ್ಲೆ ಮಾಡುತ್ತಾರೆ…
ಹೀಗೆಂದು ಮಧ್ಯಪ್ರದೇಶ ಇಂದೋರ್​ನ ಲಸುಡಿಯಾ ನಿವಾಸಿಯೊಬ್ಬರು ಕೋರ್ಟ್​ ಮೊರೆ ಹೋಗಿದ್ದಾರೆ. 32 ವರ್ಷದ ಇಂಜಿನಿಯರ್ ದಿಲೇಶ್ವರ್ ವಿರುದ್ಧ ಅವರ ಪತ್ನಿ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದು, ವಿಚ್ಛೇದನಕ್ಕೆ ಕೋರಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ಈ ದಂಪತಿಯದ್ದು ಪ್ರೇಮ ವಿವಾಹ.
ಕೆಲ ವರ್ಷಗಳಿಂದ ಪ್ರೀತಿಸಿ ವಿವಾಹವಾದ ಎರಡು ವರ್ಷಗಳ ಬಳಿಕ ತಮ್ಮ ಪತಿ ಈ ರೀತಿ ವರ್ತಿಸುತ್ತಿರುವುದು ಮಹಿಳೆಗೆ ತಿಳಿದಿದೆ, ಮಾತ್ರವಲ್ಲದೇ ದೈಹಿಕ ಸಂಪರ್ಕ ಬೆಳೆಸಲೂ ಪತಿ ನಿರಾಕರಿಸುತ್ತಿರುವುದಾಗಿ ಅವರು ಕೋರ್ಟ್​ಗೆ ಹೇಳಿದ್ದಾರೆ. ತಮ್ಮ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಸಾಕ್ಷ್ಯವನ್ನು ಸಹ ಸಲ್ಲಿಸಿದ್ದಾರೆ.
2018 ರಂದು ವಿವಾಹವಾದ ಇವರು, ಪುಣೆಯಲ್ಲಿ ನೆಲೆಸಿದ್ದರು. ಅಲ್ಲಿಂದ ಇಲ್ಲಿಯವರೆಗೂ ಪತಿ ದೈಹಿಕ ಸಂಬಂಧ ಬೆಳೆಸಿಲ್ಲ. ಕೇಳಿದರೆ ಹಲ್ಲೆ ಮಾಡಲು ಬರುತ್ತಾರೆ. ಅವರ ಅಪ್ಪ-ಅಮ್ಮ ಕೂಡ ನನ್ನನ್ನು ನಿಂದಿಸುತ್ತಾರೆ, ಹಲ್ಲೆ ಮಾಡುತ್ತಾರೆ. ಸಂಜೆಯಾಗುತ್ತಿದ್ದಂತೆಯೇ ಹೆಣ್ಣುಮಕ್ಕಳ ರೀತಿ ವರ್ತಿಸುತ್ತಾರೆ ಎಂದು ಪತ್ನಿ ದೂರಿದ್ದಾರೆ. ತಮ್ಮ ಅತ್ತೆ- ಮಾವ ತಮ್ಮ ಮೇಲೆ ಮಾಡುತ್ತಿರುವ ಹಿಂಸೆಗಳ ಕುರಿತೂ ಅವರು ವಿವರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಂತ್ರಸ್ತೆಗೆ ಪ್ರತಿ ತಿಂಗಳು 30 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಪತಿಗೆ ಆದೇಶಿಸಿರುವ ಕೋರ್ಟ್​, ಮಹಿಳೆ ನೀಡಿರುವ ದೂರಿನ ಅನ್ವಯ ಪತಿ, ಅತ್ತೆ ಮತ್ತು ನಾದಿನಿ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲು ಮಾಡಿದ್ದಾರೆ.
ಪರಪ್ಪನ ಅಗ್ರಹಾರದ ಜೈಲಲ್ಲಿದ್ದ ಮಗನ ಕಷ್ಟ ನೋಡಲಾಗದೇ  ಡ್ರಗ್ಸ್​ ತಂದುಕೊಟ್ಟು ಅರೆಸ್ಟ್​ ಆದ ಮಹಾತಾಯಿ!

ಹುಡುಗಿ ಬೇಕಾ, ಗಡ್ಡ ಬೇಕಾ… ನಿರ್ಧಾರ ನಿಮ್ಮದು! ಸಿನಿ ಸ್ಟಾರ್​ಗಳಂತೆ ಕಾಣಬಯಸುವವರಿಗೆ ಫುಲ್​ ಶಾಕ್​

ಇ.ಡಿ ಡ್ರಿಲ್​: ರಾಹುಲ್​ ಪರ ಟ್ವೀಟ್​ ಮಾಡಿ ಸಂಕಷ್ಟಕ್ಕೆ ಸಿಲುಕಿದ ನಟಿ ರಮ್ಯಾ: ಕಮೆಂಟಿಗರು ಮಾಡಿದರು ‘ಚಾರ್ಟ್’​ ಪಾಠ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 9 =
Remember me
