ಮುಂಬೈ: ‍ಪ್ರತಿ ವರ್ಷ ಮೇ 8ರಂದು ಅಮ್ಮನ ದಿನವನ್ನು ಆಚರಿಸಲಾಗುತ್ತದೆ. ಅಮ್ಮನ ಪ್ರೀತಿ, ತ್ಯಾಗ, ಬಲಿದಾನ ಸೇರಿದಂತೆ ಮಗುವಿನ ಪ್ರತಿ ಹಂತದಲ್ಲಿ ಆಕೆ ತೋರುವ ಮಮಕಾರವನ್ನು ಸ್ಮರಿಸುವ ನಿಮಿತ್ತ ಈ ದಿನವನ್ನು ಆಚರಿಸಲಾಗುತ್ತದೆ. ಧಾವಂತದ ಈ ಬದುಕಿನಲ್ಲಿ ಸಂಬಂಧಗಳೇ ಕಳೆದುಹೋಗುತ್ತಿರುವ ಹೊತ್ತಿನಲ್ಲಿ ಕೊನೆಯ ಪಕ್ಷ ವರ್ಷದಲ್ಲಿ ಒಮ್ಮೆಯಾದರೂ ತಾಯಿಯನ್ನು ಮಕ್ಕಳು ನೆನೆಯಲಿ ಎನ್ನುವ ಕಾರಣಕ್ಕೆ ಈ ದಿನ ಎನ್ನುತ್ತಾರೆ ಹಿರಿಯರು.
ಇದೇನೋ ಸರಿ. ಅಮ್ಮನ ದಿನದಂತೆ ಪತ್ನಿಯ ದಿನವೂ ಇರಬೇಕು, ಇಂಥ ದಿನವೂ ಆಚರಣೆಯಾಗಬೇಕು ಎನ್ನುತ್ತಿದ್ದಾರೆ ಕೇಂದ್ರ ಸಾಮಾಜಿಕ ನ್ಯಾಯ ಖಾತೆ ರಾಜ್ಯ ಸಚಿವ ರಾಮದಾಸ್ ಅಠಾವಳೆ. ಸದಾ ಒಂದಿಲ್ಲೊಂದು ರೀತಿಯ ಹೇಳಿಕೆ ನೀಡುವ ಮೂಲಕ ಸದಾ ಸುದ್ದಿಯಲ್ಲಿರುವ ಸಚಿವರು, ಈಗ ಈ ಹೇಳಿಕೆ ನೀಡಿದ್ದಾರೆ.
ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ತಮ್ಮ ಮಾತಿಗೆ ಸಮರ್ಥನೆ ನೀಡಿರುವ ಅವರು, ‘ತಾಯಿಯು ಜನ್ಮ ನೀಡಿದರೆ, ಪತ್ನಿಯು ಒಳ್ಳೆಯ ಮತ್ತು ಕೆಟ್ಟ ಸಮಯದಲ್ಲಿ ತನ್ನ ಪತಿಗೆ ಬೆಂಬಲವಾಗಿ ನಿಲ್ಲುತ್ತಾಳೆ. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೊಬ್ಬ ಮಹಿಳೆ ಇರುತ್ತಾಳೆ. ಆದ್ದರಿಂದ ನಾವು ಪತ್ನಿಯ ದಿನವನ್ನು ಆಚರಿಸಬೇಕು ಎಂದು ಹೇಳಿದರು. ಇವರ ಈ ಹೇಳಿಕೆಗೆ ಹಲವಾರು ಮಂದಿ ಬೆಂಬಲ ಸೂಚಿಸಿದ್ದರೆ, ಕೆಲವರು ಅಂಥ ದಿನದ ಅಗತ್ಯವಿಲ್ಲ ಎಂದೂ ಹೇಳಿದ್ದಾರೆ.
ಲವರ್‌ ಜತೆಗೂಡಿ ತಮ್ಮನನ್ನೇ ಕೊಲೆ ಮಾಡಿ ಶವದ ಮುಂದೆ ಗೋಳೋ ಎಂದು ಅತ್ತ ಹುಬ್ಬಳ್ಳಿ ಹೆಣ್ಣು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 3 =
Remember me
