ನ್ಯೂಜಿಲೆಂಡ್‌:ನನ್ನ ಗಂಡ ನೋಡಲು ಸ್ಮಾರ್ಟ್‌ ಇದ್ದಾನೆ. ಆರು ಅಡಿಯಿದ್ದು, ಆಕರ್ಷಕವಾಗಿದ್ದಾನೆ. ನಮಗೆ ಎರಡು ಮಕ್ಕಳು ಕೂಡ ಆಗಿವೆ. ಒಳ್ಳೆಯ ಮೀನುಗಾರ, ಬೇಟೆಗಾರ… ಯಾರಿಗಾದರೂ ಈತನನ್ನು ಖರೀದಿಸುವ ಆಸಕ್ತಿಯಿದ್ದರೆ ಸಂಪರ್ಕಿಸಿ…
ಹೀಗೆಂದು ಪತ್ನಿಯೊಬ್ಬಳು ಆನ್‌ಲೈನ್‌ನಲ್ಲಿ ತನ್ನ ಪತಿಯನ್ನು ಹರಾಜಿಗಿಟ್ಟಿದ್ದಾಳೆ! ನ್ಯೂಜಿಲೆಂಡ್‌ನ ಲಿಂಡಿಯಾ ಮೆಕ್‌ ಆಲಿಸ್ಟಾರ್​ ಎನ್ನುವ ಮಹಿಳೆ ತನ್ನ ಪತಿ ಜಾನ್​ರನ್ನು ಹರಾಜಿಗಿಟ್ಟಿದ್ದು, ಇದೀಗ ಭಾರಿ ವೈರಲ್‌ ಆಗಿದೆ. ಇಬೇ ಸ್ಟೈಲ್​ ಸೈಟ್​, ಟ್ರೇಡ್​ ಮೀ ಎನ್ನುವ ಸೈಟ್​ಗಳಲ್ಲಿ ಈಕೆ ಗಂಡನ ಫೋಟೋ ಮತ್ತು ಆತನ ವಿವರಗಳನ್ನು ನೀಡಿ ಹರಾಜಿಗಿಟ್ಟಿದ್ದಾಳೆ.
ಪತಿಯ ಬಗ್ಗೆ ಮಾಹಿತಿ ನೀಡಿದ ಆಕೆ ಜಾನ್​ ಆರು ಅಡಿ ಒಂದು ಇಂಚು ಎತ್ತರವಿದ್ದಾನೆ. 37 ವರ್ಷ ವಯಸ್ಸಾಗಿದೆ. ಮೀನುಗಾರಿಗೆ ಮತ್ತು ಬೇಟೆಯಲ್ಲಿ ಪರಿಣಿತಿಯನ್ನು ಪಡೆದಿದ್ದು, ಆಹಾರ ಮತ್ತು ನೀರನ್ನು ನೀಡಿದರೆ ಸಾಕು, ಯಾವುದೇ ತೊಂದರೆ ಕೊಡುವುದಿಲ್ಲ. ಆದರೆ ಹರಾಜಿನಲ್ಲಿ ಮಾರಾಟವಾದ ಮೇಲೆ ಬದಲಾವಣೆ ಅಥವಾ ವಾಪಸ್​ ಪಡೆಯುವ ಪ್ರಮೇಯವೇ ಇಲ್ಲ ಎಂದು ಅದರಲ್ಲಿ ಬರೆದಿದ್ದಾಳೆ.
ಪತಿ ಗೋ ಮಾಂಸ ಕೃಷಿಯನ್ನು ಮಾಡುತ್ತಾನೆ. ಆದರೆ ಮನೆಯ ಕೆಲಸಗಳನ್ನೂ ಕಲಿಸುವ ಅಗತ್ಯವಿದೆ. ಅದನ್ನು ಕಲಿಸುವಷ್ಟು ಸಮಯವಾಗಲೀ ತಾಳ್ಮೆಯಾಗಲಿ ನನಗೆ ಇಲ್ಲ. ಆದ್ದರಿಂದ ಹರಾಜಿಗಿಟ್ಟಿದ್ದೇನೆ ಎಂದು ಉಲ್ಲೇಖಿಸಿದ್ದಾಳೆ.
ಅಷ್ಟಕ್ಕೂ ಈಕೆ ಇಂಥದ್ದೊಂದು ನಿರ್ಧಾರ ತೆಗೆದುಕೊಳ್ಳಲು ಕಾರಣ, ಪತಿಗೆ ಇರುವ ವಿಪರೀತ ಬೇಟೆಗಾರಿಕೆ ಮತ್ತು ಮೀನುಗಾರಿಕೆಯ ಹುಚ್ಚಂತೆ! ಮನೆಗೂ ಬರದೇ ವಾರಗಟ್ಟಲೆ ಹೊರಗೇ ಇದ್ದು ಮೀನುಗಾರಿಕೆ, ಬೇಟೆಯಾಡುತ್ತಿರುವ ಪತಿಯಿಂದ ತನಗೆ ಯಾತನೆಯಾಗುತ್ತಿದೆ. ಮನೆಯ ಕಡೆ ಜವಾಬ್ದಾರಿ ಇಲ್ಲ, ಮಕ್ಕಳನ್ನು ಗಮನಿಸುವುದಿಲ್ಲ, ಆದ್ದರಿಂದ ಆತನನ್ನು ಹರಾಜಿಗೆ ಇಟ್ಟಿದ್ದೇನೆ ಎಂದು ಆಲಿಸ್ಟಾರ್ ಹೇಳಿದ್ದಾಳೆ. ಆದರೆ ಈ ಬಗ್ಗೆ ಜಾಹೀರಾತಿನಲ್ಲಿ ಯಾವುದೇ ರೀತಿ ಉಲ್ಲೇಖಿಸಲಿಲ್ಲ.
ಈ ದಂಪತಿಗೆ 2019ರಲ್ಲಿ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಜಾಹೀರಾತು ನೀಡಿದ ತಕ್ಷಣ ಇದು ವೆಬ್‌ಸೈಟ್ ಗಮನಕ್ಕೆ ಬಂದಿದ್ದು, ನಿಯಮ ಉಲ್ಲಂಘನೆಯಾಗಿದೆ ಎಂದು ಅದನ್ನು ಡಿಲೀಟ್‌ ಮಾಡಲಾಗಿತ್ತು. ಆದರೆ ಅಚ್ಚರಿಯ ವಿಷಯವೆಂದರೆ ಮಹಿಳೆಯೊಬ್ಬಳು 63 ಯುರೋಗಳಿಗೆ (ಅಂದರೆ ಸುಮಾರು 5,300 ರೂಪಾಯಿ) ಆತನನ್ನು ಖರೀದಿಸಲು ಮುಂದೆ ಬಂದಿದ್ದಳು. ಖರೀದಿಸಿದಳೋ, ಇಲ್ಲವೋ ಎಂಬ ವಿಷಯ ಬಹಿರಂಗಗೊಂಡಿಲ್ಲ.
VIDEO: ತರಕಾರಿ ಖರೀದಿಗೆ ಬಂದವರ ಮೇಲೆ ಬಿದ್ದ ವಿದ್ಯುತ್ ತಂತಿ! ನೋಡನೋಡುತ್ತಿದ್ದಂತೆಯೇ ಸುಟ್ಟುಹೋದ 30 ಮಂದಿ

ನಿನ್ನೆಯವರೆಗೆ ಇಡಿ ಅಧಿಕಾರಿ, ಇಂದು ಬಿಜೆಪಿ ಅಭ್ಯರ್ಥಿ! ಟಿಕೆಟ್‌ಗೆ ಕಾದು ಕುಳಿತವರಿಗೆ ಶಾಕ್‌… ಯಾರಿವರು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
