ಹೈದರಾಬಾದ್:ಪ್ರತಿಯೊಂದು ಹೆಣ್ಣು ಬೇರೆ ಯಾವ ಗಂಡಸರನ್ನು ನಂಬದಿದ್ದರೂ ತನ್ನ ಸಹೋದರರು, ತನ್ನ ಅಪ್ಪ ಮತ್ತು ಕಟ್ಟಿಕೊಂಡ ಪತಿಯನ್ನಂತೂ ನಂಬಿಯೇ ನಂಬುತ್ತಾಳೆ. ಆದರೆ ಇತ್ತೀಚಿನ ದಿನಗಳಲ್ಲಿ ಆಗುತ್ತಿರುವ ಆಘಾತಕಾರಿ ಸುದ್ದಿಗಳನ್ನು ಓದಿದರೆ ಯಾರನ್ನೂ ನಂಬದಂಥ ಸ್ಥಿತಿ ಪುಟ್ಟ ಕಂದಮ್ಮಗಳಿಂದ ಹಿಡಿದು ವಯೋವೃದ್ಧರವರೆಗೂ ನಿರ್ಮಾಣವಾಗಿಬಿಟ್ಟಿದೆ.
ಅಂಥದ್ದೇ ಒಂದು ಮಹಾ ಆಘಾತಕಾರಿ ಘಟನೆಯೊಂದು ಹೈದರಾಬಾದ್​ನ ಗುಂಟೂರಿನಲ್ಲಿ ನಡೆದಿದೆ. ಹಣ ಮಾಡುವ ಆಸೆಗಾಗಿ ತನ್ನ ಪತ್ನಿಯ ನಗ್ನ ವಿಡಿಯೋಗಳನ್ನು ಮಾಡುತ್ತಿದ್ದ ಈ ನೀಚ ಪತಿ ಅದನ್ನು ಪೋರ್ನ್ ವೆಬ್‍ಸೈಟ್​ಗಳಿಗೆ ನೀಡಿ ಹಣ ಮಾಡುತ್ತಿದ್ದ ಘಟನೆ ಇದು!
ಈಕೆ ಬೆತ್ತಲಾಗಿರುವ ವಿಡಿಯೋಗಳು ಜಾಲತಾಣದಲ್ಲಿ ಹರಿದಾಡುತ್ತಿರುವ ಬಗ್ಗೆ ಕೆಲವರು ಮಹಿಳೆಗೆ ಮಾಹಿತಿ ನೀಡಿದಾಗಲೇ ಆಕೆಗೆ ಅರಿವಾದದ್ದು. ಆದರೆ ತನ್ನ ಖಾಸಗಿ ಫೋಟೋಗಳು, ಅದರಲ್ಲಿಯೂ ಮನೆಯ ಒಳಗೆ ಇರುವ ಇಂಥ ವಿಡಿಯೋಗಳು ಹೇಗೆ ಈ ರೀತಿ ಲೀಕ್​ ಆಗಿವೆ ಎಂದು ತಿಳಿಯದೇ ಕುಗ್ಗಿಹೋದ ಮಹಿಳೆ ನಂತರ ಪೊಲೀಸರಿಗೆ ದೂರು ನೀಡಿದ್ದಾಳೆ.
ಇದನ್ನೂ ಓದಿ:ಪತ್ನಿಯ ಅಕ್ರಮ ಸಂಬಂಧಕ್ಕೆ ಡಾಕ್ಟರ್​ ಬಲಿ? ಐ ಲವ್​ ಯೂ ಎಂದು ಬರೆದು ಆತ್ಮಹತ್ಯೆ
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದರ ಬೆನ್ನೆತ್ತಿ ಹೋದಾಗಲೇ ತಿಳಿದದ್ದು, ಇದು ಆ ಮಹಿಳೆಯ ಪತಿಯದ್ದೇ ಕೃತ್ಯವೆಂದು! ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಪತಿಮಹಾಶಯ ತಪ್ಪು ಒಪ್ಪಿಕೊಂಡಿದ್ದಾನೆ.
ಪತ್ನಿಗೆ ತಿಳಿಯದಂತೆ ವೀಡಿಯೋ ಚಿತ್ರೀಕರಿಸಿ ಕೆಲ ವೆಬ್‍ಸೈಟ್ ಗಳಿಗೆ ಹಣ ಪಡೆಯುತ್ತಿರುವ ಬಗ್ಗೆ ಹೇಳಿದ್ದಾನೆ.
ಈತನ ನೀಚಕೃತ್ಯ ಇಲ್ಲಿಗೇ ಮುಗಿಯುವುದಿಲ್ಲ. ತಾನು ಪತ್ನಿ ಜತೆಗೆ ಏಕಾಂತದಲ್ಲಿ ಇರುವಾಗ ಅವುಗಳ ವಿಡಿಯೋಗಳನ್ನು ಲೈವ್ ಸ್ಟ್ರೀಮಿಂಗ್ ಆ್ಯಪ್ ಮೂಲಕ ನೇರಪ್ರಸಾರವನ್ನೂ ಮಾಡಿರುವುದಾಗಿ ಬಾಯಿ ಬಿಟ್ಟಿದ್ದಾನೆ!ಇಷ್ಟೇ ಅಲ್ಲದೇ, ಹಲವಾರು ಪೋರ್ನ್​ ವೆಬ್​ಸೈಟ್​ಗಳಿಂದ ಮುಂಗಡ ಹಣ ಪಡೆಯುತ್ತಿದ್ದ ಆತ, ಅವುಗಳಿಗೆ ಪತ್ನಿಯ ವಿಡಿಯೋಗಳನ್ನು ಕಳುಹಿಸುತ್ತಿದ್ದುದು ತನಿಖೆ ವೇಳೆ ತಿಳಿದಿದೆ. ಮುಂಗಡವಾಗಿ ಹಣ ಪಾವತಿಸಿರುವವರ ಕುರಿತಾಗಿಯೂ ಮಾಹಿತಿ ಕಲೆ ಹಾಕುತ್ತಿದ್ದಾರೆ ಪೊಲೀಸರು. ಈ ಸಂಬಂಧ ಸೈಬರ್ ಪೊಲೀಸ್​ ವಿಭಾಗಕ್ಕೆ ಮಾಹಿತಿ ನೀಡುವಂತೆ ಪತ್ರ ಬರೆಯಲಾಗಿದೆ ಎಂದು ತನಿಖಾಧಿಕಾರಿ ಹೇಳಿದ್ದಾರೆ.
ಬಿಜೆಪಿ ಸರ್ಕಾರಗಳಿಗೆ ಶಾಕ್​ ಕೊಟ್ಟ ಹೈಕೋರ್ಟ್​: ಲವ್​ ಜಿಹಾದ್​ ಕುರಿತು ಹೀಗೊಂದು ತೀರ್ಪು

ತಾಯಿ ಕಿಡ್ನಿ ನೀಡಿದರೂ ಬದುಕುಳಿಯಲಿಲ್ಲ ಕಿರುತೆರೆ ನಟಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × 3 =
Remember me
