ಕೋಲ್ಕತಾ:ಪಶ್ಚಿಮ ಬಂಗಾಳದ ಕನಿಷ್ಠ ಐವರು ತೃಣಮೂಲ ಕಾಂಗ್ರೆಸ್ ಸಂಸದರು ಪಕ್ಷಕ್ಕೆ ರಾಜಿನಾಮೆಕೊಟ್ಟು , ಬಿಜೆಪಿಗೆ ಬರಲಿದ್ದಾರೆ ಎಂಬ ಬಿಜೆಪಿ ಸಂಸದ ಅರ್ಜುನ್ ಸಿಂಗ್ ಕೆಲ ದಿನಗಳ ಹಿಂದೆ ಹೇಳಿಕೆ ಕೋಲ್ಕತಾದ ರಾಜಕೀಯದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿರುವುದು ಹಳೆಯ ಮಾತಾಯ್ತು.
ಆದರೆ ಇದೀಗ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಟಿಎಂಸಿ ಸಂಸದ ಸೌಗತ್ ರಾಯ್ ಫುಲ್​ ಗರಂ ಆಗಿಬಿಟ್ಟಿದ್ದಾರೆ. ಇದೊಂದು ಬಿಜೆಪಿ ಪ್ರಚಾರದ ಕಲೆ. ಇದು ಸುಳ್ಳು ಸುದ್ದಿ ಎಂದಿರುವ ರಾಯ್​, ಒಂದು ವೇಳೆ ನಾನೇನಾದರೂ ರಾಜಕೀಯ ಬಿಡಲೇಬೇಕಾಗಿ ಬಂದರೆ ಅದನ್ನು ಬಿಡುತ್ತೇನೆ. ಆದರೆ ಒಂದು ವೇಳೆ ಈ ಪಕ್ಷ ಬಿಟ್ಟರೆ ಬೇಕಿದ್ದರೆ ಹೋಗಿ ಸಾಯುತ್ತೇನೆಯೇ ವಿನಾ ಬಿಜೆಪಿಯನ್ನು ಸೇರುವುದಿಲ್ಲ ಎಂದು ಕಡ್ಡಿಮುರಿದಂತೆ ಹೇಳಿದ್ದಾರೆ.
ಇದನ್ನೂ ಓದಿ:ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್​ ಸ್ಥಿತಿ ಗಂಭೀರ
ಅರ್ಜುನ್ ಸಿಂಗ್ ಈ ರೀತಿ ಸುಳ್ಳು ಸುದ್ದಿ ಹರಡಿಸುವುದಲ್ಲಿ ನಿಸ್ಸೀಮರು. ನಾನು ರಾಜಕೀಯ ತೊರೆದು ಸಾಯಲು ಸಿದ್ಧ ಆದರೆ, ಎಂದಿಗೂ ಬಿಜೆಪಿಗೆ ಸೇರುವುದಿಲ್ಲ, ಆ ಪಕ್ಷದ ಜತೆ ಕೈಕೂಡ ಜೋಡಿಸುವುದಿಲ್ಲ. ಅಷ್ಟಕ್ಕೂ ನಾನೇನೂ ಮಾರಾಟವಾಗುವ ಸರಕು ಅಲ್ಲ ಎಂದು ಕಿಡಿ ಕಾರಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ತೃಣ ಮೂಲ ಕಾಂಗ್ರೆಸ್​ನ ಹಿರಿಯ ಮುಖಂಡ ಸುಗಾತ ರಾಯ್ ಹಾಗೂ ಇತರೆ ನಾಲ್ಕು ಜನ ಸಂಸದರು ರಾಜೀನಾಮೆ ನೀಡುವ ಸಾಧ್ಯತೆಯಿದೆ ಅಂತ ಸಂಸದ ಅರ್ಜುನ್ ಸಿಂಗ್ ಹೇಳಿದ್ದರು.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅವರು, ತೃಣ ಮೂಲ ಕಾಂಗ್ರೆಸ್​ನ ಐವರು ಸಂಸದರು ಯಾವುದೇ ಸಂದರ್ಭದಲ್ಲೂ​ ಪಕ್ಷ ತೊರೆದು ಬಿಜೆಪಿ ಸೇರುವ ಸಾಧ್ಯತೆಯಿದೆ ಎಂದಿದ್ದು ಭಾರಿ ಸುದ್ದಿಯಾಗಿದೆ.
‘ಐದು ವರ್ಷಗಳ ಹಿಂದೆಯೇ ಅಂಡಾಣು ಫ್ರೀಜ್​ ಮಾಡಿದ್ದೇನೆ- ಬೇಕೆಂದಾಗ ಮಗು ಪಡೆಯುವೆ’

ಇಲ್ಲಿ ಇನ್ಮುಂದೆ ಮಕ್ಕಳನ್ನು ಅಪ್ಪ- ಅಮ್ಮ ಹೊಡೆದ್ರೆ ಅಷ್ಟೇ ಕಥೆ… ನೇರ ಜೈಲಿಗೆ!

ಜಾನ್​​ಸನ್​ ಪೌಡರ್​ನಿಂದ ಕ್ಯಾನ್ಸರ್​: ₹890 ಕೋಟಿ ಪರಿಹಾರಕ್ಕೆ ‘ಸುಪ್ರೀಂ’ ಆದೇಶ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × 3 =
Remember me
