ಎರ್ನಾಕುಲಂ (ಕೇರಳ):ಉಗ್ರ ಸಂಘಟನೆಗಳಲ್ಲಿ ತೊಡಗಿಸಿಕೊಂಡಿರುವ ಆರೋಪ ಹೊತ್ತ, ಖುದ್ದು ಹೈಕೋರ್ಟ್​ನಿಂದಲೇ ಛೀಮಾರಿ ಹಾಕಿಸಿಕೊಂಡಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ ದೇಶಾದ್ಯಂತ ದಾಳಿ ನಡೆಸಿ 106 ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಿದೆ.
ಪಿಎಫ್‌ಐನ್ನು ಛಿದ್ರಗೊಳಿಸಿದ ಎನ್‌ಐಎ ಕ್ರಮಕ್ಕೆ ‘ಆಪರೇಷನ್ ಆಕ್ಟೋಪಸ್’ ಎಂದು ಹೆಸರಿಡಲಾಗಿದೆ. ಇದರ ಅಡಿಯಲ್ಲಿ, ಇದೇ 22 ರಂದು, ಎನ್‌ಐಎ 11 ರಾಜ್ಯಗಳಲ್ಲಿ ಪಿಎಫ್​ಐನ ಹಲವಾರು ಸ್ಥಳಗಳ ಮೇಲೆ ದಾಳಿ ನಡೆಸಿತು. ತನಿಖಾ ಸಂಸ್ಥೆಯ ಈ ಕ್ರಮ ಪಿಎಫ್​ಐ ಹಾಗೂ ಅದರ ರಾಜಕೀಯ ಮುಖವಾಣಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ (ಎಸ್‌ಡಿಪಿಐ) ನಿದ್ದೆಗೆಡಿಸಿದೆ.
ಈ ದಾಳಿಯ ಹಿಂದೆ ಆರ್​ಎಸ್ಎಸ್​ ಇದೆ ಎಂದು ಆಕ್ರೋಶ ಹೊರಹಾಕಿರುವ ಎಸ್‌ಡಿಪಿಐ ಮುಖಂಡನೊಬ್ಬ ಆರ್​ಎಸ್​ಎಸ್​ಗೆ ಓಪನ್​ ಚಾಲೆಂಜ್​ ಮಾಡಿದ್ದಾನೆ. ದಾಳಿಯನ್ನು ಖಂಡಿಸಿ ಕೇರಳದ ಎರ್ನಾಕುಲಂನಲ್ಲಿ ನಡೆಯುತ್ತಿರುವ ಪ್ರತಿಭಟನೆ ವೇಳೆ ಆಕ್ರೋಶ ವ್ಯಕ್ತಪಡಿಸಿರುವ ಮುಖಂಡ ಶಿಜು ಬಕ್ಕರ್​, ‘ಬಿಜೆಪಿ ಎನ್​ಐಎ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಆ ಮೂಲಕ ಪಿಎಫ್​ಐ ಮತ್ತು ಎಸ್​ಡಿಪಿಐ ಮುಗಿಸಲು ಸಂಚು ರೂಪಿಸುತ್ತಿದೆ. ಆರ್​ಎಸ್​ಎಸ್​ ಮುಗಿಸಲು ನಮಗೆ ಹತ್ತೇ ಸೆಕೆಂಡು ಸಾಕು’ ಎಂದು ಹೇಳಿರುವ ವಿಡಿಯೋ ವೈರಲ್​ ಆಗಿದೆ.
ರಸ್ತೆ ಮಧ್ಯೆ ನಿಂತು ಕೂಗಾಡುತ್ತಿರುವ ಈತ, ಆರೆಸ್ಸೆಸ್ ಕಾರ್ಯಕರ್ತರಿಗೆ ಬೆದರಿಕೆ ಹಾಕಿದ್ದಾನೆ. ‘ಒಂದೋ ಈ ದೇಶದಲ್ಲಿ ನಮ್ಮ ಆದರ್ಶಗಳು ಗೆಲ್ಲುತ್ತವೆ ಅಥವಾ ನಾವು ಹುತಾತ್ಮರಾಗುತ್ತೇವೆ, ಅಲ್ಲಾ-ಹು-ಅಕ್ಬರ್’ ಎಂದಿರುವ ಈತ, ‘ನೀವು (ಆರ್‌ಎಸ್‌ಎಸ್) ಕತ್ತಲೆಯಲ್ಲಿ ನಮ್ಮ ಮೇಲೆ ದಾಳಿ ನಡೆಸಿದಾಗ ನಾವು ಯಾರು ಎಂದು ನಿಮಗೆ ಅರಿವಾಗಿಸಲು ಸಾಧ್ಯ. ನೀವು ರಾತ್ರಿ ನಮ್ಮ ಮೇಲೆ ದಾಳಿ ಮಾಡಿದ್ದೀರಿ, ನಾವು ಹಗಲು ಹೊತ್ತಿನಲ್ಲಿ 10 ಸೆಕೆಂಡುಗಳಲ್ಲಿ ನಿಮ್ಮನ್ನು ನಿಭಾಯಿಸುವ ಶಕ್ತಿ ಹೊಂದಿದ್ದೇವೆ ಎಂದು ಕಿರುಚಾಡಿದ್ದಾನೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಟಾಮ್​ ವಡಕ್ಕನ್​, ‘ಪಿಎಫ್​ಐ ಮತ್ತು ಎಸ್​ಡಿಪಿಐ ಸಂಘಟನೆಗಳು ಈ ರೀತಿ ಕಿರುಚಾಡುವುದು, ಬೆದರಿಕೆ ಹಾಕುವುದು ಹೊಸದೇನಲ್ಲ. ಇವರ ಬುಡಕ್ಕೆ ಕೈಹಾಕಿ ಅವುಗಳನ್ನು ಏನು ಮಾಡಬೇಕೋ, ಅದನ್ನು ಎನ್​ಐಎ ಮಾಡುತ್ತದೆ’ ಎಂದಿದ್ದಾರೆ.(ಏಜೆನ್ಸೀಸ್​)
ವಿಡಿಯೋ ಇಲ್ಲಿದೆ ನೋಡಿ:
ಮಗ ಉಗ್ರ ಎಂದು ತಿಳಿಯುತ್ತಲೇ ಪ್ರಾಣಬಿಟ್ಟ ತಂದೆ! ಅಂತ್ಯಸಂಸ್ಕಾರಕ್ಕೆ ಬಂದ ಪುತ್ರನಿಗೆ ಶಾಕ್​ ಕೊಟ್ಟ ಅಮ್ಮ

VIDEO: ಭಯೋತ್ಪಾದನೆ ನಂಟು; ಮೂರನೇ ಮದರಸಾವೂ ನೆಲಸಮ- ಎಂಟು ಬುಲ್ಡೋಜರ್​ ಬಳಸಿ ಧ್ವಂಸ ಕಾರ್ಯಾಚರಣೆ

ಸಾಲು ಸಾಲು ಕಳ್ಳತನ, ಸುಲಿಗೆ ಮಾಡಿದ್ರೂ ಸುಲಭದಲ್ಲಿ ಎಸ್ಕೇಪ್​ ಆಗ್ತಿದ್ದ ಖದೀಮ, ಪತ್ನಿ ಜತೆ ಜಗಳವಾಡಿ ಸಿಕ್ಕಿಬಿದ್ದ!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:seven − 7 =
Remember me
